ಡೈಲಿ ವಾರ್ತೆ: 03/ಆಗಸ್ಟ್/2024

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣದಲ್ಲಿ ಇಳಿಕೆ – ನೆರೆಯಿಂದ ಮುಳುಗಡೆಗೊಂಡ ಕೆಲವು ಮನೆಗಳ ಸ್ವಚ್ಚತಾ ಕಾರ್ಯ ಆರಂಭ

ಬಂಟ್ವಾಳ : ತಾಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಗಾಳಿ ಮಳೆಯ ಅಬ್ಬರ ಕಡಿಮೆಯಾಗಿದ್ದು ನೇತ್ರಾವತಿ ನದಿ ನೀರಿನ ಮಟ್ಟ ಕು‌ಸಿದಿದೆ. ಶನಿವಾರ ಸಂಜೆ ವೇಳೆಗೆ 6.5 ದಿಲ್ಲಿ ಹರಿಯುತ್ತಿದೆ.

ನೆರೆಯಿಂದ ಮುಳುಗಡೆಗೊಂಡಿದ್ದ ಕೆಲವು ಮನೆಗಳ ಸ್ವಚ್ಚತಾ ಕಾರ್ಯ ನಡೆಯುತ್ತಿದೆ. ಮನೆಯಿಂದ ತೆರವುಗೊಳಿಸಲಾದ ಕುಟುಂಬಸ್ಥರು ಮರಳಿ ಮನೆ ಸೇರುವ ಸಿದ್ಧತೆಯಲ್ಲಿದ್ದಾರೆ.

 ತಾಲೂಕಿನ ವಿವಿಧೆಡೆ ಮಳೆ ಹಾನಿ ಸಂಭವಿಸುತ್ತಿದ್ದು ವಿವಿಧ ಕಡೆಗಳಿಗೆ ಮನೆಗೆ ಹಾನಿಯಾಗುತ್ತಿರುವ ಬಗ್ಗೆ ವರದಿಯಾಗಿದೆ.

ಪುದು ಗ್ರಾಮದ ಕಳ್ಳತಡಮೆ ಎಂಬಲ್ಲಿ ಸತೀಶ ಬಿನ್ ಕೂಸಪ್ಪ ಸಪಲ್ಯರವರ ಮನೆಯ ಹಂಚು ಪೂರ್ತಿ ಕುಸಿದು ಗೋಡೆಗೆ ಹಾನಿಯಾಗಿದೆ. ಚೆನ್ನೈತೋಡಿ ಗ್ರಾಮದ ಮೇಗಿನ ಮನೆ ಎಂಬಲ್ಲಿ ಮೋನಮ್ಮ ರವರ ಕಚ್ಚಾ ಮನೆ ತೀವ್ರ ಹಾನಿಯಾಗಿದ್ದು ಅವರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ಮಾಣಿಲ ಗ್ರಾಮದ ಪಿಲಿಂಗುರಿ ಎಂಬಲ್ಲಿ ಜಯಶ್ರೀ ಕೋಂ ನಾರಾಯಣ ನಾಯ್ಕ ಎಂಬವರ ಕೊಟ್ಟಿಗೆಗೆ ಮರ ಬಿದ್ದು ಹಾನಿಯಾಗಿದೆ. ವಿಟ್ಲ ಮುಡ್ನೂರು ಗ್ರಾಮದ ಕುಂಡಡ್ಕ ಶೆಡ್ಡು ನಿವಾಸಿ ಶ್ಯಾಮಲಾ ಕೋಂ ಶಿವಾನಂದ ರೈ ಮನೆ ಸಮೀಪ ಗುಡ್ಡ ಕುಸಿದಿರುತ್ತದೆ. ಕನ್ಯಾನ ಗ್ರಾಮದ ಬೊಟ್ಯದಮೂಲೆ ಎಂಬಲ್ಲಿ ಮೈಮುನ ಕೋಂ ಕಲೀಲ್ ಅಂದುಕ ಎಂಬುವವರ ವಾಸ್ತವ್ಯದ ಮನೆಗೆ ಗುಡ್ಡ ಕುಸಿದು ಮನೆಗೆ ಭಾಗಶಃ ಹಾನಿಯಾಗಿರುತ್ತದೆ. ಮಾಣಿ ಗ್ರಾಮದ ಮಾಣಿ‌ಕೋಡಿ ನಿವಾಸಿ ವನಜ ಕೋಂ ರಾಮಕೃಷ್ಣ ಪೂಜಾರಿ ಎಂಬುವವರ ಮನೆಗೆ ಪಕ್ಕದಲ್ಲಿನ ಗುಡ್ಡ ಕುಸಿದು ಭಾಗಶಃ ಹಾನಿಯಾಗಿರುತ್ತದೆ. ಬರಿಮಾರು ಗ್ರಾಮದ ಬಲ್ಯ ಎಂಬಲ್ಲಿ ಸುರೇಶ ಬಿನ್ ಬಟ್ಯಪ್ಪ ಪೂಜಾರಿ ರವರ ವಾಸದ ಮನೆಯ ಆವರಣ ಗೋಡೆಯು ಕುಸಿದು ಬಿದ್ದಿದೆ.
ಬೋಳಂತೂರು ಗ್ರಾಮದ ದೈಯಂದಿನ ಹಿತ್ಲು ಎಂಬಲ್ಲಿ ರಾಧಾಕೖಷ್ಣ ರವರ ಮನೆಗೆ ತಾಗಿಕೊಂಡಿರುವ ಕೊಟ್ಟಿಗೆ ಮನೆ ಭಾಗಶ: ಕುಸಿದು ಬಿದ್ದಿದೆ. ಬೋಳಂತೂರು ಗ್ರಾಮದ ನಾರ್ಣ ಕೋಡಿ ಎಂಬಲ್ಲಿ ಪದ್ಮಾವತಿ ಎಂಬವರ ಕಚ್ಚಾ ಮನೆ ಭಾಗಶ: ಹಾನಿಯಾಗಿದೆ. ಕಡೇಶಿವಾಲಯ ಗ್ರಾಮದ ಸಂಪೋಳಿ ಎಂಬಲ್ಲಿ ಗಣೇಶ ನಾಯ್ಕ ಬಿನ್ ಕೃಷ್ಣಪ್ಪ ನಾಯ್ಕ ರವರ ತೋಟದ ಪಕ್ಕದ ಬರೆ ಜರಿದು ಸುಮಾರು 60 ಅಡಿಕೆ, 4 ತೆಂಗಿನ ಮರಗಳಿಗೆ ಹಾನಿಯಾಗಿದೆ.

ಕರೋಪಾಡಿ ಗ್ರಾಮದ ಅರಸಳಿಕೆ ನಿವಾಸಿ ಇಬ್ರಾಹಿಂ ಬಿನ್ ಅಬ್ದುಲ್ ಕಾದ್ರಿ‌ ಅವರ ವಾಸ್ತವ್ಯದ ಮನೆಗೆ ಭಾಗಶಃ ಹಾನಿಯಾಗಿರುತ್ತದೆ.
ಬರಿಮಾರು ಗ್ರಾಮದ ಕಾಗೆಕಾನ ಎಂಬಲ್ಲಿ ಉಮ್ಮತುಮ್ಮ ಕೋಂ ಇಸ್ಮಾಯಿಲ್ ರವರ ವಾಸದ ಮನೆಯು ಗಾಳಿ ಮಳೆಯಿಂದ ಬಾಗಶ ಹಾನಿಯಾಗಿರುತ್ತದೆ.
ಕುರಿಯಾಳ ಗ್ರಾಮದ ಬಂಡ ಸಾಲೆ ಪಾಲೆದ ಗುರಿ ರಸ್ತೆ ಯ ಕುಕ್ಕುರಿ ಮಲ್ಲಿ ಮುಗೇರು ಎಂಬಲ್ಲಿ ಜಿಲ್ಲಾ ಮುಖ್ಯ ರಸ್ತೆ ಬದಿ ಜರಿಯುತ್ತಿದೆ.. ರಸ್ತೆ ಕುಸಿಯುವ ಸಾಧ್ಯತೆ ಇದೆ. ಯಾವುದೇ ಜೀವ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಹಾನಿಯಾದ ಸ್ಥಳಗಳಿಗೆ ಆಯಾಯ ಗ್ರಾಮದ ಗ್ರಾಮ ಕರಣಿಕರಿಗಳು ಬೇಟಿ ನೀಡಿ ತಾಲೂಕು ಕಛೇರಿಗೆ ವರದಿ ಸಲ್ಲಿಸಿದ್ದಾರೆ.