ಡೈಲಿ ವಾರ್ತೆ: 08/ಆಗಸ್ಟ್/2024

ಸಾಗರ: ಟಿಪ್ಪರ್ – ಬೈಕ್ ಮುಖಾಮುಖಿ ಡಿಕ್ಕಿ: ಬೈಕ್ ಸವಾರ ಸಾವು

ಸಾಗರ: ಟಿಪ್ಪರ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಹೊಡೆದು ಸವಾರ ಸಾವನ್ನಪ್ಪಿ ಸಹಸವಾರ ಗಾಯಗೊಂಡ ಘಟನೆ ಆ. 8 ರಂದು ಗುರುವಾರ ಮಧ್ಯಾಹ್ನ ಆವಿನಹಳ್ಳಿ ಸಮೀಪದಲ್ಲಿ ಸಂಭವಿಸಿದೆ.

ಮೃತಪಟ್ಟ ಬೈಕ್ ಸವಾರ ಕಟ್ಟಿನಕಾರು ಗ್ರಾಮದ ಸಚಿನ್ (19) ಎಂದು ಗುರುತಿಸಲಾಗಿದೆ.
ಇನ್ನು ಗಂಭೀರ ಗಾಯಗೊಂಡ ಸಹಸವಾರ ಸುಮಂತ್‌ ನ್ನು ಕುಂದಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಗರದಿಂದ ಗೆಣಸಿನಕುಣಿ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಹಾಗೂ ಕಟ್ಟಿನಕಾರು ಸಮೀಪದ ಪಡಬೀಡು ಗ್ರಾಮದಿಂದ ಸಾಗರಕ್ಕೆ ತೆರಳುತ್ತಿದ್ದ ಬೈಕ್ ಮುಖಮುಖಿ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬೈಕ್‌ ಸವಾರ ಸಚಿನ್ ಶಿವಮೊಗ್ಗದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಸಚಿನ್ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.