ಡೈಲಿ ವಾರ್ತೆ: 10/ಆಗಸ್ಟ್/2024

ವಕ್ಫ್ ತಿದ್ದುಪಡಿ ಮಸೂದೆ, ಮರು ಪರಿಶೀಲನೆಗೆ ಬಂಟ್ವಾಳ ತಾಲೂಕು ಸಂಯುಕ್ತ ಜಮಾತ್ ಕಮಿಟಿಯಿಂದ ಕೇಂದ್ರ ಸರಕಾರಕ್ಕೆ ಮನವಿ

ಬಂಟ್ವಾಳ : ಕೇಂದ್ರ ಸರಕಾರವು ಸಂಸತ್ತಿನಲ್ಲಿ ಮಂಡಿಸಿದ ವಕ್ಫ್ ತಿದ್ದುಪಡಿ ಮಸೂದೆಯಲ್ಲಿ ಕೆಲವೊಂದು ವಿಚಾರಗಳು ಮುಸ್ಲಿಂ ಸಮುದಾಯದ ವಿರುದ್ಧವಾಗಿದ್ದು, ಕೇಂದ್ರ ಸರ್ಕಾರವು ಈ ಬಗ್ಗೆ ಪುನರ್ ಪರಿಶೀಲನೆಗೆ ನಡೆಸಬೇಕು ಎಂದು ಬಂಟ್ವಾಳ ತಾಲೂಕು ಸಂಯುಕ್ತ ಜಮಾತ್ ಕಮಿಟಿ ಅಧ್ಯಕ್ಷ ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲು ಒತ್ತಾಯಿಸಿದ್ದಾರೆ.

ಈ ಬಗ್ಗೆ ಕಮಿಟಿ ವತಿಯಿಂದ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರಿಗೆ ಪ್ರಾತಿನಿಧ್ಯ ಕೊಟ್ಟಿರುವುದು, ಸೆಕ್ಷನ್ 40 ಮತ್ತು ಸೆಕ್ಷನ್ 104 ನ್ನು ಕೈಬಿಟ್ಟಿರುವುದು ಸರಿಯಲ್ಲ, ಅದನ್ನು ಉಳಿಸಿಕೊಳ್ಳಬೇಕು. ವಕ್ಫ್ ಆಸ್ತಿಗಳ ಸರ್ವೆ ನಡೆಸಲು ಸರ್ವೆ ಆಯುಕ್ತರ ಬದಲು ಜಿಲ್ಲಾಧಿಕಾರಿ ಯವರಿಗೆ ಅಧಿಕಾರ ನೀಡಿದ್ದು ಸರಿಯಲ್ಲ, 1995ರ ಕಾಯ್ದೆಯ 3ನೇ ಕಲಂ ಗೆ ಸೇರಿಸಿದ ಉಪ ಸೆಕ್ಷನ್ 3ಸಿ ಯನ್ನು ಕೈಬಿಡಬೇಕು. ಇಲ್ಲವಾದಲ್ಲಿ ಮುಸ್ಲಿಂ ಸಮುದಾಯಕ್ಕೆ ಬಹಳಷ್ಟು ಅನಾನುಕೂಲ, ತೊಂದರೆಗಳು ಆಗುವ ಸಾಧ್ಯತೆ ಇದೆ.

ಆದುದರಿಂದ ಈ ಬಗ್ಗೆ ಮುಸ್ಲಿಂ ಸಮುದಾಯವನ್ನು ‌ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು 

ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷ ಹನೀಫ್ ಹಾಜಿ ಗೊಳ್ತಮಜಲು, ಉಪಾಧ್ಯಕ್ಷ ಎಂ. ಎಸ್. ಮಹಮ್ಮದ್, ಕಾರ್ಯದರ್ಶಿ ಕೆ. ಅಬೂಬಕರ್ ವಕೀಲರು ವಿಟ್ಲ, ಕೋಶಾಧಿಕಾರಿ ಪಿ.ಎಸ್. ಅಬ್ದುಲ್ ಹಮೀದ್ ಜಂಟಿ ಹೇಳಿಕೆಯಲ್ಲಿ ವಿನಂತಿಸಿರುತ್ತಾರೆ.