ಡೈಲಿ ವಾರ್ತೆ: 11/ಆಗಸ್ಟ್/2024
ಮಾಣಿ : ಸ್ವಾತಂತ್ರೋತ್ಸವದ ಪ್ರಯುಕ್ತ ಕೊಡಾಜೆಯಲ್ಲಿ ರಕ್ತದಾನ ಶಿಬಿರ
ಬಂಟ್ವಾಳ : ಎಸ್ಕೆಎಸ್ಸೆಸ್ಸೆಫ್ ವಿಖಾಯ ಮಾಣಿ ವಲಯ ಇದರ ವತಿಯಿಂದ ಡಿಗ್ನಿಟಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಇವುಗಳ ಸಹಕಾರದೊಂದಿಗೆ ಸ್ವಾತಂತ್ರೋತ್ಸವದ ಪ್ರಯುಕ್ತ ರಕ್ತದಾನ ಶಿಬಿರವು ಭಾನುವಾರ ಕೊಡಾಜೆ ಡಿಗ್ನಿಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಿರಿಯ ಪತ್ರಕರ್ತ ಬದ್ರುದ್ದೀನ್ ಮಾಣಿ ಮಾತನಾಡಿ, ಸೇವೆ ಹಾಗೂ ಆರೋಗ್ಯಕರ ಕಾರ್ಯಕ್ರಮಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಎಸ್ಕೆಎಸ್ಸೆಸ್ಸೆಫ್ ವಿಖಾಯ ತಂಡವು ರಕ್ತದಾನದಂತಹ ಜೀವ ಉಳಿಸುವ ಕೈಂಕರ್ಯದಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾತನಾಡಿ, ಜಾತ್ಯಾತೀತ, ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಜಾತಿ ಮತ ಭೇದವನ್ನು ತೊರೆದು ಎಲ್ಲರೊಂದಿಗೂ ಪ್ರೀತಿಯಿಂದ ಮಾನವರಾಗಿ ಬದುಕೋಣ ಎಂದು ಕರೆ ನೀಡಿದರು.
ಕೊಡಾಜೆ ಬದ್ರಿಯಾ ಜುಮಾ ಮಸೀದಿ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಪೊನ್ಮಳ ಶಿಬಿರಕ್ಕೆ ಚಾಲನೆ ನೀಡಿದರು. ಡಿಗ್ನಿಟಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಅದ್ಯಕ್ಷ ರಫೀಕ್ ಹಾಜಿ ಸುಲ್ತಾನ್ ಶಿಬಿರವನ್ನು ಉದ್ಘಾಟಿಸಿ, ಎಸ್ಕೆಎಸ್ಸೆಸ್ಸೆಫ್ ಮಾಣಿ ವಲಯಾಧ್ಯಕ್ಷ ಇಲ್ಯಾಸ್ ನೇರಳಕಟ್ಟೆ ಅಧ್ಯಕ್ಷತೆ ವಹಿಸಿದರು. . ಮನೋಹರ್ ರೈ, ವಿಖಾಯ ದ.ಕ.ಈಸ್ಟ್ ಬ್ಲಡ್ ಉಸ್ತುವಾರಿ ಇಬ್ರಾಹಿಂ ಕಡವ ಮಾತನಾಡಿ ಶುಭ ಹಾರೈಸಿದರು.
ಉದ್ಯಮಿಗಳಾದ ಉಮ್ಮರ್ ಹಾಜಿ ರಾಜ್ ಕಮಲ್, ರಶೀದ್ ನೀರಪಾದೆ, ಅಹ್ಮದ್ ಖಾನ್ ಕೊಡಾಜೆ, ಪತ್ರಕರ್ತ ಲತೀಫ್ ನೇರಳಕಟ್ಟೆ, ಸೋಶಿಯಲ್ ಇಖ್ವಾ ಫೆಡರೇಶನ್ ಮಾಣಿ ಇದರ ಅಧ್ಯಕ್ಷ ರಹೀಂ ಸುಲ್ತಾನ್, ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ಪ್ರವೀಣ್ ಸಾಲ್ಯಾನ್, ಕೊಡಾಜೆ ಬದ್ರಿಯಾ ಜುಮಾ ಮಸೀದಿ ಕಾರ್ಯದರ್ಶಿ ನವಾಝ್ ಭಗವಂತ ಕೋಡಿ, ಪಾಟ್ರಕೋಡಿ ಜುಮಾ ಮಸೀದಿ ಅಧ್ಯಕ್ಷ ಹಾಜಿ ಇಬ್ರಾಹಿಂ ಬಾತಿಷ, ಗಡಿಯಾರ ಜುಮಾ ಮಸೀದಿ ಅಧ್ಯಕ್ಷ ರಿಯಾಝ್ ಕಲ್ಲಾಜೆ, ಪರ್ಲೊಟ್ಟು ಅಬೂಬಕ್ಕರ್ ಸಿದ್ದೀಕ್ ಜುಮಾ ಮಸೀದಿ ಅಧ್ಯಕ್ಷ ಹೈದರ್, ಸೂರಿಕುಮೇರು ಜುಮಾ ಮಸೀದಿ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್, ಪೆರ್ಲಾಪು ಜುಮಾ ಮಸೀದಿ ಅಧ್ಯಕ್ಷ ನಝೀರ್ ಪೆರ್ಲಾಪು, ಕೊಡಾಜೆ ತರ್ಬಿಯತುಲ್ ಇಸ್ಲಾಂ ಮದ್ರಸ ಮುಖ್ಯ ಶಿಕ್ಷಕ ಪಿ.ಎ.ಮರ್ದಾಳ, ಹಮೀದ್ ಮಾಸ್ಟರ್ ಮಾಣಿ,
ಎಸ್ಕೆಎಸ್ಸೆಸ್ಸೆಫ್ ವಿವಿಧ ಘಟಕಗಳ ಪ್ರಮುಖರಾದ ಮಜೀದ್ ದಾರಿಮಿ ಬುಡೋಳಿ, ಜಮಾಲ್ ಕೋಡಪದವು, ಮೂಸಾ ಕರೀಂ ಮಾಣಿ, ಅಬ್ದುಲ್ ಸತ್ತಾರ್ ಪಟಿಲ, ಅಬ್ದುಲ್ ಖಾದರ್ ಬಂಗೇರುಕಟ್ಟೆ, ಜಾಬಿರ್ ಮುಬಶ್ಶಿರ್, ಹನೀಫ್ ಅನಂತಾಡಿ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ರಕ್ತದಾನ ಶಿಬಿರದಲ್ಲಿ 70 ಮಂದಿ ರಕ್ತದಾನ ಮಾಡುವ ಮೂಲಕ ಜೀವದಾನಿಗಳಾದರು. ಎಸ್ಕೆಎಸ್ಸೆಸ್ಸೆಫ್ ವಿಖಾಯ ಮಾಣಿ ವಲಯ ಚೇರ್ಮನ್ ಮುಹಮ್ಮದ್ ಇಸ್ಹಾಕ್ ಕೌಸರಿ ಸ್ವಾಗತಿಸಿ, ನೌಫಳ್ ಕೊಡಾಜೆ ವಂದಿಸಿದರು. ಪಿ.ಜೆ.ಅಬ್ದುಲ್ ಅಝೀಝ್ ಗಡಿಯಾರ ಕಾರ್ಯಕ್ರಮ ನಿರೂಪಿಸಿದರು.