



ಡೈಲಿ ವಾರ್ತೆ: 14/ಆಗಸ್ಟ್/2024


ಪೊಲೀಸರ ಮೇಲಿನ ಕೋಪಕ್ಕೆ ವಿಧಾನಸೌಧದ ಮುಂದೆ ಬೈಕ್‌ಗೆ ಬೆಂಕಿ ಇಟ್ಟ ಸವಾರ
ಬೆಂಗಳೂರು: ಪೊಲೀಸರ ಮೇಲಿನ ಕೋಪಕ್ಕೆ ಸವಾರನೊಬ್ಬ ವಿಧಾನಸೌಧದ ಮುಂದೆ ತನ್ನ ಬೈಕ್‌ಗೆ ಬೆಂಕಿ ಹಚ್ಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಚಳ್ಳಕೆರೆ ಮೂಲದ ಪೃಥ್ವಿರಾಜ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಬೈಕ್‌ಗೆ ಬೆಂಕಿ ಹಚ್ಚಿದ ಪರಿಣಾಮ ಪೊಲೀಸರ ಮುಂದೆಯೇ ಬೈಕ್ ಸುಟ್ಟು ಕರಕಲಾಗಿದೆ.
ಬೈಕ್ ಸವಾರ ಪೃಥ್ವಿರಾಜ್ ಕೆಲ ದಿನಗಳ ಹಿಂದೆ ಟ್ರೆಕ್ಕಿಂಗ್ ಹೋಗಿದ್ದ. ಈ ಸಂದರ್ಭ ಮಗ ಮಿಸ್ ಆಗಿದ್ದಾನೆ ಎಂದು ಪೃಥ್ವಿರಾಜ್ ತಾಯಿ ಚಳ್ಳಕೆರೆ ಪೊಲೀಸ್ ಠಾಣೆಗೆ ಹೋಗಿದ್ದರು. ಈ ವೇಳೆ ಪೊಲೀಸರು ಪೃಥ್ವಿ ತಾಯಿಯನ್ನು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ಆರೋಪಿಸಲಾಗಿದೆ.
ಆ ಕೋಪಕ್ಕೆ ವಿಧಾನಸೌಧ ಮುಂಭಾಗ ಬೈಕ್ ನಿಲ್ಲಿಸಿ ಪೃಥ್ವಿರಾಜ್ ಬೈಕ್‌ಗೆ ಬೆಂಕಿ ಹಚ್ಚಿದ್ದಾನೆ. ಸದ್ಯ ಯುವಕನನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದಿದ್ದಾರೆ.