ಡೈಲಿ ವಾರ್ತೆ: 16/ಆಗಸ್ಟ್/2024
ಯಕ್ಷಗಾನದ ಕಲೆಯನ್ನು ಇನ್ನೆಷ್ಟು ಪ್ರೋತ್ಸಾಹಿಸಬೇಕು: ಕಿರಣ್ ಕೊಡ್ಗಿ
ಕುಂದಾಪುರ: 78ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕೋಟೇಶ್ವರದ ಸಹನಾ ಕನ್ವೆನ್ಷನ್ ಹಾಲ್ ನಲ್ಲಿ ನಿನ್ನೆ ದಿವಸ ನೆಡದ ಆದಿತ್ಯ ಟ್ರಸ್ಟ್ ಕ್ಯಾದಿಗೆ ಯಕ್ಷ ಸಂಭ್ರಮದಲ್ಲಿ ಯಕ್ಷ ಕಲಾಪ್ರಕಾರವನ್ನು ಉಳಿಸುವ ನಿಟ್ಟಿನಲ್ಲಿ ಕಳೆದ ಬಾರಿಯಿಂದ ಕಲಾಸಂಘ ಉಡುಪಿ ಇವರ ನೇತೃತ್ವದಲ್ಲಿ ಯಕ್ಷ ಶಿಕ್ಷಣ ಟ್ರಸ್ಟ್ ಇದರ ಮುಖಾಂತರ ಕಳೆದ ಬಾರಿ 13 ಹೈಸ್ಕೂಲ್ ಗೆ ಈ ತರಬೇತಿಯನ್ನು ನೀಡುತ್ತಾ ಈ ಬಾರಿ 23 ಹೈಸ್ಕೂಲ್ ನಲ್ಲಿ ಯಕ್ಷ ಶಿಕ್ಷಣವನ್ನು ಪ್ರಾರಂಭಿಸಲಾಗಿದೆ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿಯವರು ಉದ್ಘಾಟಿಸಿ ಮಾತನಾಡಿದ ಅವರು ಎಲ್ಲರೂ ಕೂಡ ಯಕ್ಷಗಾನದ ಕಲೆಯನ್ನು ಪ್ರೋತ್ಸಾಹಿಸಬೇಕು ಆಮೂಲಕವಾಗಿ ಯಕ್ಷಕಲೆಯನ್ನು ಬೆಳೆಸುವಂಥ ಆಗಬೇಕುಎಂದರು.
ಕಾರ್ಯಕ್ರಮದ ಆಯೋಜಕ ಖ್ಯಾತ ಹಾಸ್ಯಗಾರ, ಆದಿತ್ಯ ಟ್ರಸ್ಟ್ ಇದರ ಸ್ಥಾಪಕ ಮಹಾಬಲೇಶ್ವರ ಭಟ್ ಕ್ಯಾದಗಿ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಸುಗ್ಗಿ ಸುಧಾಕರ್ ಶೆಟ್ಟಿ ವಹಿಸಿದರು.
ಇದೇ ಸಂದರ್ಭದಲ್ಲಿ ಯಕ್ಷಗಾನದ ಹಿರಿಯ ಕಲಾವಿದ ಗೋಡೆ ನಾರಾಯಣ ಹೆಗಡೆ, ಹಾಗೂ ಯಕ್ಷ ಕಲಾ ಪೋಷಕ ಕುಂದಾಪುರ ಆದರ್ಶ ಹಾಸ್ಪಿಟಲ್ ವ್ಯವಸ್ಥಾಪಕರಾದ ಆದರ್ಶ ಹೆಬ್ಬಾರ್ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ
ಉದ್ಯಮಿ ಯೋಗೇಶ್ ಗಾಣಿಗ, ಸಾಲಿಗ್ರಾಮ ಮೇಳ ಯಜಮಾನ ಪಿ. ಕಿಶನ್ ಹೆಗಡೆ, ಶರತ್ ಶೆಟ್ಟಿ ವಕೀಲ ಕುಂದಾಪುರ,ಸುರೇಂದ್ರ ಶೆಟ್ಟಿ ಸಹನಾ ಕನ್ವೆನ್ಷನ್ ವ್ಯವಸ್ಥಾಪಕ, ಉದ್ಯಮಿ ಬಳ್ಕೂರು ಗೋಪಾಲ ಆಚಾರ್ಯ, ನಾಗೇಶ್ ಜೋಶಿ ಯಕ್ಷ ಕಲಾ ಬಳಗ ಜಿಲ್ಲಾಧ್ಯಕ್ಷ, ಸೀತಾರಾಮ್ ಶೆಟ್ಟಿ ಲಯನ್ಸ್ ಕ್ಲಬ್ ತೆಕ್ಕಟ್ಟೆ,, ರಾಜಾರಾಮ್ ಶೆಟ್ಟಿ, ಉದ್ಯಮಿಗಳು ಉಪಸ್ಥಿತರಿದ್ದರು
ಕಾರ್ಯಕ್ರಮದ ನಿರೂಪಣೆ ಹಾಗೂ
ಸ್ವಾಗತವನ್ನು ವೈಕೋ ಸುಂದರ್ ನಿರ್ವಹಿಸಿದರು.
ಸನ್ಮಾನದ ಪತ್ರವನ್ನು ವಕ್ವಾಡಿ ಅಂಬಿಕಾ ವಾಚಿಸಿದರು.
ಧನ್ಯವಾದ ಕ್ಯಾದಗಿ ಮಹಾಬಲೇಶ್ವರ ಭಟ್ ಸಮರ್ಪಿಸಿದರು
ತದನಂತರ, ನಾಲ್ಕು ಪೌರಾಣಿಕ ಪ್ರಸಂಗದೊಂದಿಗೆ ,ಬಡಗು ತಿಟ್ಟಿನ ಹಿರಿಯ ಮತ್ತು ಹಿರಿಯ ಕಲಾವಿದರ ಕೂಡುವಿಕೆಯೊಂದಿಗೆ ವಿಶಿಷ್ಟವಾಗಿ ವಿಭಿನ್ನವಾಗಿ ನೆರವೇರಿತು.
ಸಹಸ್ರಾರು ಪ್ರೇಕ್ಷಕರು ಯಕ್ಷಗಾನವನ್ನು ಕಣ್ತುಂಬಿ ಕೊಂಡರು.