ಡೈಲಿ ವಾರ್ತೆ: 18/ಆಗಸ್ಟ್/2024
ಕುಂದಾಪುರ ಕನ್ನಡದ ಹಬ್ಬವನ್ನು ಉದ್ಘಾಟಿಸಿದ ಶಾಸಕ ಕಿರಣ್ ಕೊಡ್ಗಿ
ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿಯವರು ಕುಂದಾಪ್ರ ಕನ್ನಡ ಹಬ್ಬದಲ್ಲಿ ಕುಂದಾಪುರ ಭಾಷೆಯ ಉಳಿಯು ಬೆಳವಣಿಗೆಯ ಈ ದೃಷ್ಟಿಯಿಂದ ಕುಂದಾಪುರ ಕನ್ನಡ ಹಬ್ಬ ಎಲ್ಲರಿಗೂ ಪ್ರೇರಣೆ.
ದಿನನಿತ್ಯದ ಬಳಕೆಯಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ನಮ್ಮ ಕುಂದಾಪ್ರ ಕನ್ನಡ ಮಾತನಾಡುವಂತಾಗಲಿ. ಹಾಗೆ ಇವತ್ತಿನ ದಿವಸ “ಕುಂದಾಪ್ರ ಕನ್ನಡ ಪ್ರತಿಷ್ಠಾನ” ಹಮ್ಮಿಕೊಂಡಿರುವ ಕುಂದಾಪ್ರ ಕನ್ನಡದ ಹಬ್ಬದ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಊರ ಗೌರವ ಸನ್ಮಾನ ಸ್ವೀಕರಿಸಿ ಎಲ್ಲಿಗೆ ಹೋದರು ಏನೇ ಮಾಡಿದರು ಎಲ್ಲಿಂದ ಬಂದಿದ್ದೀವಿ ಎನ್ನುವುದು ಮುಖ್ಯ ಆ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ನನ್ನ ಸಿನಿಮಾದ ಎಲ್ಲಾ ಕಥೆಗಳಿಗೂ ಕುಂದಾಪುರದ ನನ್ನೂರು ಕೆರಾಡಿಯೇ ಕಾರಣ ನಾನು ಬೆಳೆದ ಪರಿಸರವೇ ನನಗೆ ಪ್ರೇರಣೆ, ಹೀಗಾಗಿಯೇ ಕಾಂತಾರ ಸಿನಿಮಾ ಚಿತ್ರೀಕರಣ ಕೂಡ ಕುಂದಾಪುರ ಪರಿಸರದಲ್ಲಿ ಆಗಿರುವುದು ಎಂದು ಕಾಂತಾರ ಸಿನಿಮಾ ಖ್ಯಾತಿಯ ರಿಷಬ್ ಶೆಟ್ಟಿ ಮಾತನಾಡಿದರು .
ಸದ್ರಿ ಈ ಕಾರ್ಯಕ್ರಮದ ವೇದಿಕೆಯಲ್ಲಿ
ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು, ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟೆಹೊಳೆ, ಎಂ.ಎಸ್.ಮಂಜರು ಮಾರಣಕಟ್ಟೆ, ಕೃಷ್ಣಮೂರ್ತಿ ಮಂಜರು* ಮಾರಣಕಟ್ಟೆ ಚಾರಿಟೇಬಲ್ ಟ್ರಸ್ಟ್ ,,ಪ್ರವೀಣ್ ಕುಮಾರ್ ಶೆಟ್ಟಿ* ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರು ಎಂ.ಡಿ. ಕಿಶೋರ್ ಕುಮಾರ್ ಹೆಗ್ಡೆ, ಕನ್ನಡ ಪ್ರತಿಷ್ಠಾನದ ಗೌರವಾಧ್ಯಕ್ಷ ಉದಯ್ ಹೆಗ್ಡೆ ಅಧ್ಯಕ್ಷ ದೀಪಕ್ ಶೆಟ್ಟಿ,,ಉಪಾಧ್ಯಕ್ಷ ನರಸಿಂಹ ಬಿಜಾಡಿ ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ಕೋಶಾಧಿಕಾರಿ ವಿಜಯ್ ಶೆಟ್ಟಿ ಹಾಲಾಡಿ, ಹಾಗೂ ಮುಂತಾದವರು ಈ ಸಂದರ್ಭದಲ್ಲಿ ಉಪಸಿದ್ಧರಿದ್ದರು. ತದನಂತರ ಕುಂದಾಪುರ ಕನ್ನಡ ಹಬ್ಬದ ವೇದಿಕೆಯಲ್ಲಿ ವಿವಿಧ ಮನೋರಂಜನ ಕಾರ್ಯಕ್ರಮದ ಸಡಗರದಿಂದ ನೆರವೇರಿತು.