ಡೈಲಿ ವಾರ್ತೆ: 22/ಆಗಸ್ಟ್/2024

ಬ್ರಹ್ಮಶ್ರೀ ನಾರಾಯಣ ಗುರುಗಳ 170 ನೇ ಜನ್ಮ ದಿನಾಚರಣೆ – ನೂತನ ಸಂಸದ ಶ್ರೀನಿವಾಸ್ ಪೂಜಾರಿ ಮತ್ತು ಅವರ ಧರ್ಮ ಪತ್ನಿಗೆ ಸನ್ಮಾನ,ಅಭಿನಂದನೆ

ಕೋಟ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.)ಕೋಟ ಬ್ರಹ್ಮಶ್ರೀ ನಾರಾಯಣ ಗುರುಗಳ 170 ನೇ ಜನ್ಮ ದಿನಾಚರಣೆಯನ್ನು ಗುರುಮಂದಿರ ಕೋಟದಲ್ಲಿ ಆಚರಿಸಲಾಯಿತು.

ಗುರುಗಳ ವಿಶೇಷ ಪೂಜೆ ಸಾಮೂಹಿಕ ಸತ್ಯನಾರಾಯಣ ಪೂಜೆ ಮಹೇಶ್ ಶಾಂತಿ ತಂಡದವರಿಂದ ನಡೆಯಿತು. ನೂತನವಾಗಿ ಲೋಕ ಸಭೆಗೆ ಆಯ್ಕೆಯಾದ ಸಮಾಜದ ಹಿರಿಯ ರಾಜಕೀಯ ಮುತ್ಸದ್ದಿ ಕೋಟ ಶ್ರೀನಿವಾಸ ಪೂಜಾರಿ ಮತ್ತು ಅವರ ಧರ್ಮ ಪತ್ನಿ ಶ್ರೀಮತಿ ಶಾಂತ ಶ್ರೀನಿವಾಸ ಪೂಜಾರಿಯವರಿಗೆ ಸಂಸ್ಥೆಯ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಸದಾನಂದ ಜಿ. ,ಪ್ರಧಾನ ಕಾರ್ಯದರ್ಶಿ ಪ್ರಸಾದ್ ಬಿಲ್ಲವ, ಹಾಗೂ ಊರಿನ ಹಿರಿಯರಾದ ಆನಂದ್ ಸಿ ಕುಂದರ್,ದೇವಪ್ಪ ಕಾಂಚನ್ ಮಣೂರು ಪಡುಕರೆ,

ಕೋಟ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪಾಂಡು ಪೂಜಾರಿ, ಕೋಟ ಗ್ರಾಮ ಪಂಚಾಯತ್ ಸದಸ್ಯರಾದ ಅಜಿತ್ ದೇವಾಡಿಗ,ಚಂದ್ರ ಆಚಾರ್,ಯೋಗೇಂದ್ರ ಪೂಜಾರಿ ಗಿಳಿಯಾರು,ಸುಧಾ ಎ. ಪೂಜಾರಿ ,ಗುಲಾಬಿ ಪೂಜಾರಿ, ಪ್ರದೀಪ್ ಪಡುಕರೆ,ಕೋಟ್ತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ಬಾರಿಕೆರೆ, ಸದಸ್ಯರಾದ ವಾಸು ಪೂಜಾರಿ,ಪ್ರಕಾಶ್ ಹಂದಟ್ಟು,ಸರಸ್ವತಿ ಪೂಜಾರಿ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಹರೀಶ್ ಶೆಟ್ಟಿ,ಗುತ್ತಿಗೆದಾರರಾದ ಧೀರಜ್ ಹೆಜಮಾಡಿ.

ಸಂಘಟನೆಯಹಿರಿಯ ಸದಸ್ಯರಾದ ಶೀನ ಪೂಜಾರಿ ಹರ್ತಟ್ಟು, ರಾಜು ಪೂಜಾರಿ ಮಣೂರು ಪಡುಕರೆ,ಪುಟ್ಟಣ್ಣ ಪೂಜಾರಿ ಹರ್ತಟ್ಟು,ರಾಜು ಪೂಜಾರಿ ಹೋಬಳಿ ಮನೆ, ಆನಂದ್ ಪೂಜಾರಿ ಮಣೂರು ಪಡುಕರೆ, ಮೇಶ್ .ಜಿ ಪೂಜಾರಿ,ವೆಂಕಟೇಶ್ ಪೂಜಾರಿ ಕೆರೆ ಕಟ್ಚೆ ,ರಾಘವೇಂದ್ರ ರಮ್ಯಾ ಸ್ಟುಡಿಯೋ,ರಮೇಶ್ ಪೂಜಾರಿ ಪಡುಕರೆ,ಗೋಪಾಲ್ ಪೂಜಾರಿ ಪಡುಕರೆ,ಗೋಪಾಲ್ ಟೆಂಪೋ,ಚಂದ್ರ ಪೂಜಾರಿ ಪಡುಕರೆ,ರಮೇಶ್ ಪೂಜಾರಿ ಬಣ್ಣದ ಬೈಲ್,ನಾಗರಾಜ್ ಚಚ್ಕೇರಿ,ನಾಗೇಶ್ ಪೂಜಾರಿ ಗೊಬ್ಬರಬೆಟ್ಟು, ಮನೋಹರ್ ಪೂಜಾರಿ ಬಾರಿಕೆರೆ,ಸಂತೋಷ್ ಪೂಜಾರಿ ಬಾರಿಕೆರೆ,ರಾಘವೇಂದ್ರ ಪೂಜಾರಿ ಬಾರಿಕೆರೆ,ಉಮೇಶ್ ಪೂಜಾರಿ ಕದ್ರಿಕಟ್ಟು ,ಉಮೇಶ್ ಪೂಜಾರಿ ಹಂದಟ್ಟು,ನಿತ್ಯಾನಂದ ವಡ್ಡರ್ಸೆ,ಚಂದ್ರ ಪೂಜಾರಿ ಕದ್ರಿಕಟ್ಟು, ಸುಭಾಸ್ ಪೂಜಾರಿ ಹೊನ್ನಾರಿ.

ಮಹಿಳಾ ಘಟಕ ಅಧ್ಯಕ್ಷೆ ವಸಂತಿ ಉಮೇಶ್,ಮಹಿಳಾ ವಿವಿದ್ಧೋದೇಶ ಬ್ಯಾಂಕ್ ನ ಕಾರ್ಯದರ್ಶಿ ಸ್ಮಿತಾ ರಾಘವೇಂದ್ರ,ಯುವ ಸಂಘಟನೆ ಅಧ್ಯಕ್ಷರಾದ ಸುರೇಶ್ ಪೂಜಾರಿ ಗಿಳಿಯಾರು,ಅಶೋಕ್ ಪೂಜಾರಿ ಪಡುಕರೆ,ಉಮೇಶ್ ಪೂಜಾರಿ ಕಲ್ಮಾಡಿ,ರತ್ನಾಕರ ಪೂಜಾರಿ ಬಾಳೆಬೆಟ್ಟು,ವಿಜಯ್ ಪೂಜಾರಿ ಬಾರಿಕೆರೆ,ಕಿರಣ್ ತೆಕ್ಕಟ್ಟೆ,ಸುದಿನ ಕೋಡಿ,
ಮುಖಂಡರಾದ ವಿಠಲ್ ಪೂಜಾರಿ ಐರೋಡಿ ,ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ , ಜಿ .ತಿಮ್ಮ ಪೂಜಾರಿ,ನಾರಾಯಣ ಪೂಜಾರಿ,ಸಂತೋಷ್ ಸುವರ್ಣ ಮಣೂರು,ಜನಾರ್ಧನ ಪೂಜಾರಿ ಸಾಲಿಗ್ರಾಮ, ಬೆಂಗಳೂರು ಬಿಲ್ಲವ ಸಂಘದ ಅಧ್ಯಕ್ಷರಾದ ವಾಸು ಪೂಜಾರಿ ಉತ್ರಳ್ಳಿ, ಧಾರ್ಮಿಕ ಮುಖಂಡ ಕೆ.ಪಿ ಶೇಖರ್,ಸಾಸ್ತಾನ ಬಿಲ್ಲವ ಸಂಘದ ಅಧ್ಯಕ್ಷ ಎಮ್ ಸಿ ಚಂದ್ರಶೇಖರ್, ವಿಶ್ವಕರ್ಮ ಮುಖಂಡರಾದ ಕೋಟ ಸೀತಾರಾಮ್ ಆಚಾರ್,ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಪಂಜು ಪೂಜಾರಿ ಮೂಡಹಡು ,ಸುರೇಂದ್ರ ಪೂಜಾರಿ ಕೋಡಿ ಕನ್ಯಾನ,ಭಜರಂಗದಳ ಮುಖಂಡ ಶ್ರೀನಾಥ್ ಶೆಟ್ಟಿ ತೆಕ್ಕಟ್ಟೆ ,ಜಾಗರಣ ವೇದಿಕೆ ಪ್ರಮುಖರಾದ ಶಂಕರ್ ದೇವಾಡಿಗ ,ಸಾಮಾಜಿಕ ಕಾರ್ಯಕರ್ತ ದಿನೇಶ್ ಗಾಣಿಗ, ಗಾಣಿಗ ಸಂಘಟನೆ ಪ್ರಮುಖರಾದ ಸುರೇಶ್ ಶೇವಧಿ,ನರಸಿಂಹ ಗಾಣಿಗ,ಇನ್ನಿತರರು ಉಪಸ್ಥಿತರಿದ್ದರು .

ಅಪರಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ಮತ್ತು
ರಾತ್ರಿ 7 ರಿಂದ ಶ್ರೀ ರಾಮಮೃತ ಭಜನಾ ತಂಡ ಕೋಟ ಇವರ ಭಜನಾ ಕಾರ್ಯಕ್ರಮ ಜರುಗಿತು .