ಡೈಲಿ ವಾರ್ತೆ: 28/ಆಗಸ್ಟ್/2024

ಗದಗ ಜಿಲ್ಲೆಯ ಲಕ್ಷ್ಮೇಶ್ವರ ನಂ 3 ಶಾಲೆಯಲ್ಲಿ ಪ್ರತಿಭಾ ಕಾರಂಜಿ ಉದ್ಘಾಟಿಸಿದ ಶಾಸಕ ಡಾ ಚಂದ್ರು ಲಮಾಣಿ.

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ ಮತ್ತು ಶಿಕ್ಷಣ ಇಲಾಖೆಯಲ್ಲಿ ಹೆಚ್ಚಿನ ಕಾರ್ಯಕ್ರಮಗಳು ನಡೆಯುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಲಕ್ಷ್ಮೇಶ್ವರ ದಕ್ಷಿಣ ಕ್ಲಸ್ಟರ್ ನ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಡಾ ಚಂದ್ರು ಲಮಾಣಿ ಶಾಸಕರು ಶಿರಹಟ್ಟಿ ವಿಧಾನಸಭಾ ಕ್ಷೇತ್ರ ಅವರು ಡೊಳ್ಳು ಬಾರಿಸುವುದರ ಮೂಲಕ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಶ್ರೀ ಸೋಮೇಶ್ವರ ಸಹಿಪ್ರಾಶಾಲೆ ನಂ 3 ಲಕ್ಷ್ಮೇಶ್ವರ ಇಲ್ಲಿ ಲಕ್ಷ್ಮೇಶ್ವರ ದಕ್ಷಿಣ ಕ್ಲಸ್ಟರ್ ನ ಪ್ರತಿಭಾ ಕಾರಂಜಿ ಕಾರ್ಯಕ್ರಮ ಜರುಗಿತು.

ಎಲ್ಲಾ ವಿದ್ಯಾರ್ಥಿಗಳೂ ತಮ್ಮ ಪ್ರತಿಭೆ ಪ್ರದರ್ಶಿಸಲು ಈ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ. ಎಂದು ಪುರಸಭೆ ಸದಸ್ಯರಾದ ಅಶ್ವಿನಿ ಅಂಕಲಕೋಟಿ ಹೇಳಿದರು.

ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸಿ ತಾಲ್ಲೂಕು ಮಟ್ಟಕ್ಕೆ ಆಯ್ಕೆ ಆಗಿರಿ ಎಂದು ಹಾರೈಸಿ ಸೋಮಣ್ಣ ಮಾಗಡಿ ಎಸ್ ಡಿ ಎಂ ಸಿ ಅಧ್ಯಕ್ಷರು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್ ಎನ್ ನಾಯಕ್ ಬಿ ಎಸ್ ಭಜಂತ್ರಿ ಕ್ಷೇತ್ರ ಸಮನ್ವಯಾಧಿಕಾರಿಗಳು ಶಿರಹಟ್ಟಿ, ಬಿ ಆರ್ ಪಿ ಗಳಾದ ಈಶ್ವರ ಮೆಡ್ಲೇರಿ, ಬಸವರಾಜ ಯರಗುಪ್ಪಿ, ಮುಖ್ಯ ಶಿಕ್ಷಕರಾದ ಎಲ್ ಎ ನಡುವಿನಮನಿ, ಬಿ ಎಮ್ ಕುಂಬಾರ, ನಿರ್ಮಲಾ ಮಾಗಡಿ, ಸರೋಜ ಕಳ್ಳಿಮನಿ, ಎಸ್ ಎಚ್ ಪೂಜಾರ, ಎನ್ ಎಸ್ ಬಂಕಾಪುರ, ಜೆ ಎಸ್ ಹುಲ್ಲಣ್ಣವರ, ಜಿ ಎಚ್ ಮಾಣಿಕ, ಎಚ್ ಡಿ ನಿಂಗರೆಡ್ಡಿ, ನಾಗರಾಜ ಮಜ್ಜಿಗುಡ್ಡ, ಎಸ್ ಎ ಮತ್ತೂರ, ಎಲ್ ಆರ್ ಮಲಸಮುದ್ರ ಭಾಗವಹಿಸಿದ್ದರು.ವಿವಿಧ ಶಾಲೆ ಶಿಕ್ಷಕರು ಹಾಜರಿದ್ದರು. ಜೊತೆಗೆ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಲು 14 ಶಾಲೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಜೆ ಬಹುಮಾನ ವಿತರಣೆ ಕಾರ್ಯಕ್ರಮ ಜರುಗಿತು.

ಪ್ರಾಸ್ತಾವಿಕವಾಗಿ ಸಿ ಆರ್ ಪಿ ಲಕ್ಷ್ಮೇಶ್ವರ ದಕ್ಷಿಣ ಸತೀಶ ಬೋಮಲೆ ಮಾತನಾಡಿದರು. ಉಮೇಶ ನೇಕಾರ ಉತ್ತರ ಸಿ ಆರ್ ಪಿ ನಿರೂಪಿಸಿದರು. ಎಮ್ ಎಮ್ ಕಳಸೂರ ಸ್ವಾಗತಿಸಿದರು. ರಮೇಶ ಮಾಂಡ್ರೆ ವಂದಿಸಿದರು.