ಡೈಲಿ ವಾರ್ತೆ: 29/ಆಗಸ್ಟ್/2024

ಕುಂದಾಪುರ ಪುರಸಭೆಯ ಅಧ್ಯಕ್ಷ ಹಾಗೂ ,ಉಪಾಧ್ಯಕ್ಷ ಚುನಾವಣಾ ಪ್ರಕ್ರಿಯೆ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ಸಂಸದ ಕೋಟ ಭಾಗಿ

ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆಯ ಕಾರ್ಯದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ..ಕಿರಣ್ ಕುಮಾರ್ ಕೊಡ್ಗಿಯವರು ಹಾಗೂ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಭಾಗಿಯಾಗಿ ತಮ್ಮ ಮತವನ್ನು ಚಲಾಯಿಸಿದರು. ಚುನಾವಣೆಯ ಅಧಿಕಾರಿಯ ಕ್ಷಮ ಕ್ಷಮದಲ್ಲಿ ಮತದಾನ ಮುಗಿದು ಕುಂದಾಪುರ ಪುರಸಭೆಗೆ ಮೂರನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಗೊಂಡ ಕುಂದಾಪುರ ಪುರಸಭೆಯ ಸೆಂಟ್ರಲ್ ವಾರ್ಡ್ ನ ಬಿಜೆಪಿ ಪಕ್ಷದ ಸದಸ್ಯ ಮೋಹನ್ ದಾಸ್ ಶೆಣೈ ಹಾಗೂ ಉಪಾಧ್ಯಕ್ಷೆಯಾಗಿ ಕುಂದಾಪುರ ಶಾಂತಿನಿಕೇತನ ವಾರ್ಡ್ ನ ಬಿಜೆಪಿಯ ಸದಸ್ಯೆ ಶ್ರೀಮತಿ ವನಿತಾ ಬಿಲ್ಲವ ಆಯ್ಕೆಯಾದರು.

ಸದ್ರಿ ಈ ಚುನಾವಣೆ ನಡೆಯುವ ಸಂದರ್ಭದಲ್ಲಿ
ಕುಂದಾಪುರ ಬಿಜೆಪಿ ಕ್ಷೇತ್ರಧ್ಯಕ್ಷರಾದ
ಸುರೇಶ್ ಶೆಟ್ಟಿ ಗೊಪಾಡಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ವಕ್ವಾಡಿ, ಸುಧೀರ್.ಕೆ.ಎಸ್ ಹಾಗೂ ಜಿಲ್ಲಾ ಬಿಜೆಪಿ ಪಕ್ಷದ ಪ್ರಮುಖರು ಕುಂದಾಪುರ ಮಂಡಲದ ಪಕ್ಷದ ಪದಾಧಿಕಾರಿಗಳು ಹಾಗೂ ಪುರಸಭೆಯ ಸದಸ್ಯರು ಮತ್ತು ಪಕ್ಷದ ಮುಖಂಡರು ಮತ್ತು ಪುರಸಭೆಯ ನಾಗರಿಕರು ಉಪಸಿತರಿದ್ದರು.