ಡೈಲಿ ವಾರ್ತೆ: 31/ಆಗಸ್ಟ್/2024
ಪಂಚವರ್ಣದ ರೈತರೆಡೆಗೆ ನಮ್ಮ ನಡಿಗೆ 38ನೇ ಮಾಲಿಕೆ: ರೈತ ಬೆಳೆದ ಬೆಳೆಗೆ ರೈತನೇ ದರ ನಿಗದಿಪಡಿಸುವಂತ್ತಾಗಬೇಕು – ಕೆ.ಅನಂತಪದ್ಮನಾಭ ಐತಳ್
ಕೋಟ: ಯುವ ಸಮೂಹ ಕೃಷಿ ಕ್ಷೇತ್ರಕ್ಕೆ ಮುನ್ನಗ್ಗಬೇಕಿದೆ ಆ ಮೂಲಕ ಕೃಷಿ ಅವಲಂಬಿತ ಭಾರತ ಸದೃಢವಾಗಿಸಲು ಸಾಧ್ಯ ಎಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಟ್ರಸ್ಟಿ ಕೆ.ಅನಂತಪದ್ಮನಾಭ ಐತಾಳ್ ಹೇಳಿದರು.
ಶುಕ್ರವಾರ ಕೋಟ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು,ರೈತಧ್ವನಿ ಸಂಘ ಕೋಟ,ಗೆಳೆಯರ ಬಳಗ ಕಾರ್ಕಡ,ಎಸ್.ಸಿ.ಐ ಕೋಟ ಲಿಜನ್,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇವರುಗಳ ಸಹಯೋಗದೊಂದಿಗೆ ರೈತರೆಡೆಗೆ ನಮ್ಮ ನಡಿಗೆ ಸಾಧಕ ರೈತರನ್ನು ಗುರುತಿಸುವ 38ನೇ ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದೇಶದಲ್ಲಿ ಕೃಷಿಗಾಗಿ ಸಾಕಷ್ಟು ಪ್ರತಿಭಟನೆಗಳು,ಉಪವಾಸ ಸತ್ಯಾಗ್ರಹಗಳು ನಡೆಯುತ್ತದೆ ಆದರೆ ಇದ್ಯಾವುದು ಸರಕಾರದ ಕದ ತಟ್ಟುತ್ತಿಲ್ಲ ಇದಕ್ಕೆ ಪರ್ಯಾಯ ಮಾರ್ಗ ಎಂದರೆ ಈ ದೇಶದಲ್ಲಿ ರೈತನೆ ಅವನು ಬೆಳೆದ ಬೆಳೆಗೆ ದರ ನಿಗದಿಪಡಿಸುವಂತ್ತಾಗಬೇಕು ಆಗ ಮಾತ್ರ ರೈತ ಕಾಯಕ ನೈಜವಾಗಿ ಉಳಿಯಲು ಸಾಧ್ಯ ಯುವ ಸಮೂಹ ಕೃಷಿ ಕ್ಷೇತ್ರಕ್ಕೆ ಮುನ್ನುಗ್ಗಬೇಕಾದರೆ ಪಂಚವರ್ಣದಂತಹ ಸಂಘಟನೆಗಳು ಎಲ್ಲಾ ಭಾಗದಲ್ಲಿ ಹುಟ್ಟಿ ಕೊಳ್ಳಬೇಕು ಆ ಮೂಲಕ ರೈತ ಸಮೂಹ ವಿಶೇಷವಾಗಿ ಕಾರ್ಯೋನ್ಮುಖವಾಗಲು ಸಾಧ್ಯ ಎಂದರಲ್ಲದೆ ಸುಧಾರಕ್ ಶೆಟ್ಟಿ ಅಂತವರುತೆರೆಯ ಮರೆಯಲ್ಲಿ ರೈತ ಕಾಯಕ ನಡೆಸುತ್ತಿರುವುದು ಶ್ಲಾಘನೀಯ ಇಂತಹವರನ್ನು ಹುಡುಕಿ ಪ್ರಶಸ್ತಿ ನೀಡುವ ಸಂಸ್ಥೆಯ ಗೌರವ ಕೂಡಾ ಹೆಚ್ಚಿಸುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕೋಟದ ಕಾಸನಗುಂದು ಪರಿಸರದ ಹಿರಿಯ ಕೃಷಿಕ ಸುಧಾಕರ ಶೆಟ್ಟಿ ಇವರನ್ನು ಕೃಷಿ ಪರಿಕರ ನೀಡಿ ಗೌರವಿಸಲಾಯಿತು.
ಪರಿಸರ ಜಾಗೃತಿ ಮೆರೆಯುವ ದಿಸೆಯಿಂದ ಅವರ ತೋಟದಲ್ಲಿ ಗಿಡ ನೆಟ್ಟು ಸಂಭ್ರಮಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಕೋಟದ ಉದ್ಯಮಿ ಸದಾನಂದ ಪೂಜಾರಿ ಗಿಳಿಯಾರು,ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ಜಿ.ತಿಮ್ಮ ಪೂಜಾರಿ,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷಿಕರಾದ ಭಾಸ್ಕರ್ ಶೆಟ್ಟಿ ಮಣೂರು,ರೈತ ಧ್ವನಿ ಸಂಘ ಕೋಟ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ, ಕೋಟ ಗ್ರಾ.ಪಂ ಸದಸ್ಯೆ ವನೀತ ಶ್ರೀಧರ ಆಚಾರ್,ಗೆಳೆಯರ ಬಳಗ ಕಾರ್ಕಡ ಸದಸ್ಯ ಶೇಖರ್ ಮುಡೋಳಿ,ಎಸ್.ಸಿ.ಐಕೋಟ ಲಿಜನ್ ಅಧ್ಯಕ್ಷ ಕೇಶವ ಆಚಾರ್ ,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ,ಪಂಚವರ್ಣದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಮತ್ತಿತರರು.ಇದ್ದರು.ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿದರೆ,ಪಂಚವರ್ಣ ಮಹಿಳಾ ಮಂಡಲದ ಸಂಚಾಕಿ ಸುಜಾತ ಎಂ.ಬಾಯರಿ ಸನ್ಮಾನ ಪತ್ರವಾಚಿಸಿ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಶಶಿಧರ ತಿಂಗಳಾಯ ವಂದಿಸಿದರು.