ಡೈಲಿ ವಾರ್ತೆ: 31/ಆಗಸ್ಟ್/2024

ಮಿತ್ತೂರು: ನೌರತುಲ್ ಮದೀನಾ ಶಾಲೆಯಲ್ಲಿ ಲಿಟರರಿ ಕ್ಲಬ್ ಉದ್ಘಾಟನೆ

ಬಂಟ್ವಾಳ : ಮಿತ್ತೂರು ದಾರುಲ್ ಇರ್ಷಾದ್ ಅಧೀನದ ನೌರತುಲ್ ಮದೀನಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತ್ರಿಭಾಷಾ ಚಟುವಟಿಕೆಯ ಲಿಟರರಿ ಕ್ಲಬ್ ಉದ್ಘಾಟನಾ ಕಾರ್ಯಕ್ರಮ ಶನಿವಾರ ಮಿತ್ತೂರು ಕೆ.ಜಿ.ಎನ್ ಕ್ಯಾಂಪಸ್ ನಲ್ಲಿ ನಡೆಯಿತು.

ಸಂಸ್ಥೆಯ ಮುಖ್ಯಸ್ಥ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾಷಾ ಮೌಲ್ಯಗಳನ್ನು ಪೋಷಿಸುವ ಸಲುವಾಗಿ ಶಾಲೆಯ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

ಶಾಲೆಯ ಪ್ರಾಂಶುಪಾಲ ಮುಹಮ್ಮದ್ ಇಸ್ತಿಕಾರ್, ಕರೆಸ್ಪಾಂಡೆಂಟ್ ಅಶ್ರಫ್, ಮದ್ರಸಾ ಮುಖ್ಯ ಶಿಕ್ಷಕ ಅಶ್ರಫ್ ಜೌಹರಿ, ಕಬೀರ್ ಸಖಾಫಿ, ರಝಾನ್ ಮುಈನಿ, ಫಝಲ್ ಮುಈನಿ, ಸಿನಾನ್ ಮುಈನಿ ಶಾಲೆಯ ಕನ್ನಡ ,ಇಂಗ್ಲಿಷ್,ಹಿಂದಿ ಭಾಷಾ ಉಪನ್ಯಾಸಕರು ಭಾಗವಹಿಸಿದ್ದರು.

ವಿದ್ಯಾರ್ಥಿ ಫೈರೋಝ್ ಸ್ವಾಗತಿಸಿ, ಸಹಲ್ ವಂದಿಸಿದರು. ಶಿಯಾನ್ ಕಾರ್ಯಕ್ರಮ ನಿರೂಪಿಸಿದರು.