ಡೈಲಿ ವಾರ್ತೆ: 31/ಆಗಸ್ಟ್/2024
ಹದಿ ಹರೆಯದ ವಯಸ್ಸಿನಲ್ಲಿ ದೇಹದಲ್ಲಾಗುವ ಬದಲಾವಣೆಗಳು ಸಹಜ ಆದರೆ ಹೆದರದೆ ಜಾಗ್ರತರಾಗಿ – ಸುಷ್ಮಾ ಕರ್ವಾಲೋ
ಬ್ರಹ್ಮಾವರ: ಹದಿ ಹರೆಯದ ವಯಸ್ಸಿನಲ್ಲಿ ದೇಹದಲ್ಲಾಗುವ ಬದಲಾವಣೆಗಳು ಸಹಜ ಆದರೆ ಹೆದರದೆ ಜಾಗ್ರತರಾಗಿ
ಶ್ರೀ ವಿದ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ -ಬಾರಕೂರಿ ನಲ್ಲಿ ಶಾಲೆಯ 6ನೇ ತರಗತಿ ಯಿಂದ 10ನೇ ತರಗತಿಯ ವಿದ್ಯಾರ್ಥಿ ಗಳಿಗೋಸ್ಕರ ಹದಿ ಹರೆಯದ ಸಮಸ್ಯೆಗಳ ಕುರಿತು ಮಾಹಿತಿ ಕಾರ್ಯಕ್ರಮ ಏರ್ಪಡಿಸಲಾಯಿತು.
“ಹದಿ ಹರೆಯದ ವಯಸ್ಸಿನಲ್ಲಿ ದೇಹದಲ್ಲಾಗುವ ಬದಲಾವಣೆ ಸಹಜ ಆದರೆ ಹೆದರದೆ ಜಾಗ್ರತ ರಾಗಿರಿ”. ಎಂದು ಹದಿ ಹರೆಯದ ಸಮಸ್ಯೆ ಗಳ ಕುರಿತು ಮಾಹಿತಿ ಕಾರ್ಯಕ್ರಮ ದಲ್ಲಿ ಸಂಪನ್ಮೂಲ ವ್ಯಕ್ತಿ ಯಾದ ನರ್ಸಿಂಗ್ ನಲ್ಲಿ Bsc ಪದವಿ ಪಡೆದುಕೊಂಡ ಶ್ರೀಮತಿ ಸುಷ್ಮಾ ಕರ್ವಾಲೋ ರವರು ಹದಿ ಹರೆಯದ ಸಮಸ್ಸೆ ಗಳ ಕುರಿತು ಮಾಹಿತಿ ನೀಡಿದರು.
ಈ ಮಾಹಿತಿ ಕಾರ್ಯಾಗಾರದಲ್ಲಿ ಶಾಲೆಯ ಮುಖ್ಯಸ್ಥರಾದ ಶ್ರೀಮತಿ ಲಿಖಿತಾ ಕೊಠಾರಿ, ವಿಜ್ಞಾನ ಸಂಘದ ಉಸ್ತುವಾರಿ ಶಿಕ್ಷಕಿ ಶ್ರೀಮತಿ ಸುವೇದಾ, ವಿಜ್ಞಾನ ಸಂಘದ ಅಧ್ಯಕ್ಷ ರಾದ ಕೀರ್ತನಾ ಮತ್ತುಕಾರ್ಯದರ್ಶಿ ಅಭಿಜ್ಞಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ವಿಜ್ಞಾನ ಸಂಘದ ವಿದ್ಯಾರ್ಥಿ ಗಳಾದ ಅಂಡ್ರಿಯಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿ ಗಳಾದ ಈಶಾನಿ, ಶ್ರೀಪ್ರಭಾ, ಸಿಯಾನಾ, ಶ್ರೇಯ ಪ್ರಾರ್ಥಿಸಿದರು.ಅಶ್ರಿತಾ ಸ್ವಾಗತಿಸಿ ದರು,ಸಂಪನ್ಮೂಲ ವ್ಯಕ್ತಿಯ ಪರಿಚಯ ವನ್ನು ಚೈತ್ರಮಾಡಿದರು , ಜ್ಞಾನೇಶ್ ವಂದಿಸಿದರು. ವಿಜ್ಞಾನ ಸಂಘ ದ ಉಸ್ತುವಾರಿ ಶಿಕ್ಷಕಿಯರಾದ ಶ್ರೀಮತಿ ಅಮೃತ ಶೆಟ್ಟಿ ಮತ್ತು ಶ್ರೀಮತಿ ಅಪರ್ಣ ಮತ್ತು ಶಾಲಾ ಶಿಕ್ಷಕ -ಶಿಕ್ಷಕೇತರರು ಸಹಕರಿಸಿದರು.ಈ ಮಾಹಿತಿ ಕಾರ್ಯಕ್ರಮ ವನ್ನು ಶಾಲೆಯ ವಿಜ್ಞಾನ ಸಂಘ ದವರು ಸಂಯೋಜನೆ ಮಾಡಿದರು.