ಡೈಲಿ ವಾರ್ತೆ: 31/ಆಗಸ್ಟ್/2024

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸ ಮಾ ಪ್ರಾ ಶಾಲೆ ಗೊಜನೂರ ಮಕ್ಕಳ ಪ್ರತಿಭಾ ಕಾರಂಜಿ ಹಾಗೂ ಕ್ರೀಡಾಕೂಟದಲ್ಲಿ ಸಾಧನೆ

ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಗೊಜನೂರ ಶಾಲೆಯ ಮಕ್ಕಳು ಇತ್ತೀಚಿಗೆ ನಡೆದ ಗೊಜನೂರ ಗ್ರೂಪ್ ಮಟ್ಟದ ಕ್ರೀಡಾಕೂಟ ಹಾಗೂ ಬಟ್ಟೂರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿ ಅತೀ ಹೆಚ್ಚು ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿದ್ದಕ್ಕಾಗಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ H. ನಾಣಕಿ ನಾಯಕ ಹಾಗೂ ಕ್ಷೇತ್ರಸಮನ್ವಯಾಧಿಕಾರಿಳಾದ B.S. ಭಜಂತ್ರಿ , ಸಿ ಆರ್ ಪಿ ನವೀನ ಅಂಗಡಿ ಮತ್ತು ಶಾಲಾ SDMC ಅಧ್ಯಕ್ಷರಾದ ಮಹಾಂತೇಶ ಕಲ್ಲೂರ ಹಾಗೂ ಸರ್ವ ಸದಸ್ಯರು, ಗ್ರಾ . ಪಂ.ಅಧ್ಯಕ್ಷರಾದ ಶ್ರೀಮತಿ ನೀಲವ್ವ ಮಾದರ, ಉಪಾಧ್ಯಕ್ಷರಾದ ಮಹಂತಗೌಡ ಪಾಟೀಲ ಮತ್ತು ಸದಸ್ಯರು,ಗ್ರಾಮಸ್ಥರು , ಶಾಲಾ ಮುಖ್ಯೋಪಾಧ್ಯಯರಾದ B H ನಡುವಿನಮನಿ ಹಾಗೂ ಸಿಬ್ಬಂದಿವರ್ಗ ಅಭಿನಂದಿಸುವ ಮೂಲಕ ತಾಲೂಕಾ ಮಟ್ಟದ ಸ್ಪರ್ಧೆಗಳಿಗೆ ಶುಭ ಹಾರೈಸಿದರು.