ಡೈಲಿ ವಾರ್ತೆ: 31/ಆಗಸ್ಟ್/2024
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸ ಮಾ ಪ್ರಾ ಶಾಲೆ ಅಡರಕಟ್ಟಿಯಲ್ಲಿ ಸಾಮಾಜಿಕ ಪರಿಶೋಧನಾ ನಿಮಿತ್ಯ ಶಾಲಾ ಸಭೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಗದಗ, ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾ ge ಪಂಚಾಯತ ಗದಗ /ತಾಲೂಕ ಪಂಚಾಯತ ಲಕ್ಷ್ಮೇಶ್ವರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಶಿರಹಟ್ಟಿ ಹಾಗೂ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಅಡರಕಟ್ಟಿ ಇವರ ಸಹಯೋಗದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಸಾಮಾಜಿಕ ಪರಿಶೋಧನಾ ಪ್ರಯುಕ್ತ “ಶಾಲಾ ಸಭೆ /ಪೋಷಕರ ಸಭೆ”ಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಜಯಶ್ರೀ ವೀರೇಶ ಭಂಗಿ ಎಸ್ಡಿಎಂಸಿ ಅಧ್ಯಕ್ಷರು ವಹಿಸಿದರು, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶಾಲೆಯ ಎಸ್ ಡಿ ಎಂ ಸಿ ಯವರು/ ಪೋಷಕರು ಸಮುದಾಯದವರು/ಹಾಗೂ ಶಾಲೆಯ ಶಿಕ್ಷಕರು ಆಡಳಿತ ವರ್ಗ ಕ್ರಿಯಾಶೀಲವಾಗಿ ಕಾರ್ಯವನ್ನ ನಿರ್ವಹಿಸಿದಾಗ ಮಾತ್ರ ಶಿಕ್ಷಣ ಇಲಾಖೆಯ ಆಶಯ ಈಡೇರುತ್ತದೆ ಎಂದು ತಮ್ಮ ಪ್ರಸ್ತಾವಿಕ ನುಡಿಯನ್ನು ಶ್ರೀ ಮರಿಬಸನಗೌಡರು ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು ಸಾಮಾಜಿಕ ಪರಿಶೋಧನಾ ಜಿಲ್ಲಾ ಪಂಚಾಯತ ಗದಗ ಇವರು ನುಡಿದರು, ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀ ಮಂಜುನಾಥ ಚವ್ಹಾಣ, ಅರಣ್ಯ ಇಲಾಖೆ ಅಧಿಕಾರಿಗಳು ಶಾಲಾ ಹಂತದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಕೊಡುಗೆ ಬಹಳ ಅವಶ್ಯಕವಾಗಿದ್ದು ಹಳೆಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ನೂತನ ತಂತ್ರಜ್ಞಾನ ಆಧಾರಿತವಾದ ಶಿಕ್ಷಣ ಸಂಪನ್ಮೂಲಗಳ ಸೌಲಭ್ಯವನ್ನು ಪಡೆದಾಗ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಶ್ರೀಮತಿ ಎಸ್ ಎಚ್ ಉಮಚಗಿ ಪ್ರ.ಗು.ಯವರು ಮಾತನಾಡುತ್ತಾ ನಮ್ಮ ಶಾಲೆಗೆ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಶಾಲೆಯಲ್ಲಿ ಸಾಮಾಜಿಕ ಪರಿಶೋಧನಾ ಕಾರ್ಯವನ್ನು ಕೈಗೊಂಡು ಪಾಲಕರ ಹಾಗೂ ಶಿಕ್ಷಕರ ಜವಾಬ್ದಾರಿಯನ್ನು ಹೆಚ್ಚಿಸುವ ಕಾರ್ಯ ಮಾಡಿದ್ದಾರೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದರು. ಕಾರ್ಯಕ್ರಮದಲ್ಲಿ ಕುಮಾರಣ್ಣ ಚಕ್ರಸಾಲಿ, ರವಿನಾಯಕ ದೇವರಮನಿ, ಮಂಜುಳಾ ಪಾಟೀಲ, ಶ್ರೀ ವಿನಾಯಕ ಬಡಿಗೇರ, ಶ್ರೀ ಹನುಮಂತ ಕಾರಬಾರಿ, ಹನುಮಂತಪ್ಪ ಲಮಾಣಿ, ರೂಪಾ ಬೊಮ್ಮನಹಳ್ಳಿ, ಯಲ್ಲಪ್ಪ ಗಡಿಯಪ್ಪನವರ, ಎಸ್ ಡಿ ಎಂ ಸಿ ಸದಸ್ಯರು ಉಪಸ್ಥಿತರಿದ್ದರು. ಡಿ ಡಿ ಲಮಾಣಿ ಕಾರ್ಯಕ್ರಮ ನಿರೂಪಿಸಿದರು, ಪಿ ಸಿ ಕಾಳಶೆಟ್ಟಿ ವಂದಿಸಿದರು.