ಡೈಲಿ ವಾರ್ತೆ: 09/Sep/2024

ಬೀಜಾಡಿ: ಕೋಟಿಚೆನ್ನಯ್ಯ ಮಿತ್ರಕೂಟ ಸಮಿತಿಯ ಗಣೇಶೋತ್ಸವ ಶೋಭಾಯಾತ್ರೆಯಲ್ಲಿ ಭಾಗವಹಿಸಿದ ಭಕ್ತಾದಿಗಳಿಗೆ ತಂಪು ಪಾನೀಯ ನೀಡಿ ಸೌಹಾರ್ದತೆ ಮೆರೆದ ಬೀಜಾಡಿ ಮುಸ್ಲಿಂ ಬಾಂಧವರು

ಕೋಟೇಶ್ವರ: ಕುಂದಾಪುರ ತಾಲೂಕಿ ಹಳೆಅಳಿವೆ-ಬೀಜಾಡಿಯ ಕಡಲ ಕಿನಾರೆಯ ಕೋಟಿಚೆನ್ನಯ್ಯ ಮಿತ್ರಕೂಟ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ನಡೆದ ಶೋಭಾಯಾತ್ರೆಯಲ್ಲಿ ಭಾಗವಹಿಸಿದ ಭಕ್ತಾದಿಗಳಿಗೆ ಬೀಜಾಡಿಯ ತ್ರಿಮೂರ್ತಿ ಸರ್ಕಲ್ ನ ರಹ್ಮಾನಿಯ ಮಸೀದಿ ಆಡಳಿತ ಕಮಿಟಿ ವತಿಯಿಂದ ತಂಪು ಪಾನೀಯ ನೀಡಿ ಸೌಹಾರ್ದತೆ ಮೆರೆದಿದ್ದಾರೆ.

ಸೋಮವಾರ ಸಂಜೆ ಕೋಟಿಚೆನ್ನಯ್ಯ ಮಿತ್ರಕೂಟ ಸಾರ್ವಜನಿಕ ಗಣೇಶೋತ್ಸವದ ಶೋಭಾಯಾತ್ರೆಯು ಕಡಲ ಕಿನಾರೆಯಿಂದ ಹೊರಟು ಎಂ. ಕೋಡಿ ತನಕ ಸಾಗಿ ಅಲ್ಲಿಂದ ಪುನಃ ಬೀಜಾಡಿ ಹಳೆಅಳಿವೆ ಮಾರ್ಗವಾಗಿ ತೆರೆಲಿತು. ಈ ಮಧ್ಯೆ ಬೀಜಾಡಿ ತ್ರಿಮೂರ್ತಿ ಸರ್ಕಲಿಗೆ ಆಗಮಿಸಿದ ವೇಳೆ ಭಕ್ತಾದಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡ ಬೀಜಾಡಿ ರಹ್ಮಾನಿಯ ಮಸೀದಿಯ ಆಡಳಿತ ಕಮಿಟಿ ಸದಸ್ಯರು ಸೌಹಾರ್ತೆಯ ಸಂಕೇತವಾಗಿ ತಂಪುಪಾನಿ ನೀಡಿದರು.

ಈ ಸಂದರ್ಭದಲ್ಲಿ ಬೀಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಜಿ ಪೂಜಾರಿ, ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಮಂಜುನಾಥ್ ಕುಂದರ್ ಚಾತ್ರಬೆಟ್ಟು, ಮುರುಳಿ, ದಿನೇಶ್ ಹಾಗೂ ಮಸೀದಿ ಅಧ್ಯಕ್ಷರಾದ ಅಶ್ರಫ್, ಉಪಾಧ್ಯಕ್ಷ ಮೆಹಬೂಬ್, ಕೋಶಾಧಿಕಾರಿ ಅಬ್ದುಲ್ಲ ಹಾಲಾಡಿ, ಯಂಗ್ ಮೆನ್ಸ್ ಅಧ್ಯಕ್ಷ ಹಕೀಮ್ ಕೆಬಿ, ಉಪಾಧ್ಯಕ್ಷ ಮುಸ್ತಫಾ ಹಾಗೂ ಆಡಳಿತ ಕಮಿಟಿಯ ಎಲ್ಲಾ ಸದಸ್ಯರುಗಳು ಉಪಸ್ಥಿತರಿದ್ದು ಇಲ್ಲಿನ ಶಾಂತಿ ಸೌಹಾರ್ದತೆಯ ಮಾದರಿ ದೇಶದೆಲ್ಲೆಡೆ ಪಸರಿಸಲಿ ಎಂದು ಶುಭ ಹಾರೈಸಿದರು.