ಡೈಲಿ ವಾರ್ತೆ: 10/Sep/2024
ಗಣೇಶೋತ್ಸವದ ಮೆರವಣಿಗೆಯಲ್ಲಿ ಹಿಂದೂ ಮುಸ್ಲಿಂ -ಸೌಹಾರ್ದತೆಯ ಸಂಕೇತವಾದ ಕುಂದಾಪುರ ಕೋಡಿ
ಕುಂದಾಪುರ: ಕುಂದಾಪುರ ತಾಲೂಕಿನ ಎಂ.ಕೋಡಿಯಲ್ಲಿ ಮೂರು ದಿಕ್ಕುಗಳಿಂದ ಸಾಗಿ ಬಂದ ಗಣೇಶೋತ್ಸವದ ಮೆರವಣಿಗೆಯ ಭಕ್ತಾದಿಗಳಿಗೆ ಕುಂದಾಪುರ ಕೋಡಿ ಮುಸ್ಲಿಂ ಬಾಂಧವರು ತಂಪು ಪಾನೀಯ ನೀಡಿ ಸೌಹಾರ್ದತೆ ಮೆರೆದಿದ್ದಾರೆ.
ಸೋಮವಾರ ಸಂಜೆ ಕುಂದಾಪುರ ಎಂ ಕೋಡಿಗೆ ಅದ್ದೂರಿಯಾಗಿ ಸಾಗಿ ಬಂದ ವಿನಾಯಕ ಮಿತ್ರವೃಂದ ಗೆಳೆಯರ ಬಳಗ ಹಂಗಳೂರು, ಶ್ರೀರಾಮ ವಿದ್ಯಾ ಕೇಂದ್ರ ರಾಮನಗರ ಕೋಡಿ, ಕೋಟಿಚೆನ್ನಯ್ಯ ಹಳೆಅಳಿವೆ ಈ ಮೂರು ಕಡೆಯ ಗಣೇಶೋತ್ಸವದ ಮೆರವಣಿಗೆಯಲ್ಲಿ ಬಂದಂತ ಎಲ್ಲಾ ಭಕ್ತಾದಿಗಳಿಗೆ ಕುಂದಾಪುರ ಪುರಸಭೆ ಸದಸ್ಯ ಆಷ್ಪಾಕ್ ಕೋಡಿ, ಸಮಾಜ ಸೇವಕ ಅಬ್ಬಾಸ್ ಕೋಡಿ ಹಾಗೂ ಕೋಡಿಯ ಎಲ್ಲಾ ಮುಸ್ಲಿಂ ಬಾಂಧವರು ಸೇರಿ ಸೌಹಾರ್ದತೆಯ ಸಂಕೇತವಾಗಿ ತಂಪು ಪಾನೀಯ ನೀಡಿ ಸೌಹಾರ್ದತೆಗೆ ಪಾತ್ರರಾದರು.
ಅಲ್ಲದೆ ಅಂತ್ಯದಿನದವರೆಗೂ ನಮ್ಮ ಊರಲ್ಲಿ ಶಾಂತಿ ಸೌಹಾರ್ದತೆ ನೆಲೆ ನಿಲ್ಲಲಿ ಎಂದು ಹಾರೈಸಿದರು.