ಡೈಲಿ ವಾರ್ತೆ: 13/Sep/2024

ವಂಡಾರುನಲ್ಲಿ ಕಾಡು ಕೋಣ ಹೊಡೆದ ಬಗ್ಗೆ ಅಂತೆ, ಕಂತೆಗಳ ದೊಡ್ಡಮಟ್ಟದಲ್ಲಿ ಸುದ್ದಿ.!

ಕೋಟ: ಕಾಡು ಕೋಣ ಹೊಡೆದ ಬಗ್ಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ಘಟನೆ ಬ್ರಹ್ಮಾವರ ತಾಲೂಕಿನ
ವಂಡಾರು ಗ್ರಾಮದಲ್ಲಿ ನಡೆದಿದೆ.

ರಾತ್ರಿ ಹೊತ್ತಿನಲ್ಲಿ ಯಾರೋ ಬಂದರಂತೆ ಕಾಡು ಕೋಣ ಹೊಡೆದರಂತೆ ಟಿ ಟಿ ಗಾಡಿಯಲ್ಲಿ ತೆಗೆದುಕೊಂಡು ಹೋದರಂತೆ ಹೀಗೆ ಅಂತೆಗಳ ಕಂತೆಯನ್ನೆ ವಂಡಾರುವಿನಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿ ಕೊನೆಗೂ ಅರಣ್ಯ ಇಲಾಖೆಗೆ ಸುದ್ದಿ ತಲುಪಿದೆ. ಅರಣ್ಯ ಇಲಾಖೆಯವರು ವೈದ್ಯರ ಮೊರೆ ಹೋಗಿದ್ದಾರೆ ಇಲ್ಲಿ ಬಿದ್ದಿರುವ ಕರಳು ಮತ್ತು ಸೆಗಣೆ ಯಾವ ಪ್ರಾಣಿದ್ದು ಎಂದು ವೈದ್ಯರು ದೃಡಿಕರಿಸಿದ ನಂತರವೇ ತನಿಖೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.