ಡೈಲಿ ವಾರ್ತೆ: 13/Sep/2024

ವಿಜೃಂಭಣೆಯಿಂದ ಜರುಗಿದ ಶಿರೂರು ಮುದ್ದು ಮನೆಯ 23ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

  • ಧಾರ್ಮಿಕತೆಯ ಹಿತ ಚಿಂತನೆಗಳು ಸಮಾಜಕ್ಕೆ ಪ್ರಸ್ತುತ, ಧಾರ್ಮಿಕ ಕಾರ್ಯಕ್ರಮಗಳು ಸಾಮಾಜಿಕ ಮೌಲ್ಯಕ್ಕೆ ಕಟ್ಟಿಬದ್ಧವಾಗುತ್ತಿದೆ, ಇಂದಿನ ಮಕ್ಕಳಿಗೆ ಧಾರ್ಮಿಕತೆಯ ನೈತಿಕ ಪಠ್ಯ ಕಲಿಸಬೇಕಿದೆ, ಭಕ್ತಿ ಮತ್ತು ಶಕ್ತಿ ಇಂತಹ ಕಾರ್ಯಕ್ರಮಗಳಿಂದ ಉಳಿಯಲು ಸಾಧ್ಯ” : ಎಚ್. ಗಂಗಾಧರ್ ಶೆಟ್ಟಿ

ವರದಿ :ಕೆ. ಸಂತೋಷ್ ಶೆಟ್ಟಿ, ಮೊಳಹಳ್ಳಿ, ಕುಂದಾಪುರ.

ಧಾರ್ಮಿಕತೆಯ ಹಿತ ಚಿಂತನೆಗಳು ಗ್ರಾಮೀಣ ಭಾಗದಲ್ಲಿ ಬಹಳಷ್ಟು ಕಾರ್ಯನಿರ್ವಹಿಸುತ್ತಿದೆ. ಭಕ್ತಿ ಮತ್ತು ಶಕ್ತಿ ಶ್ರದ್ಧಾ ಕೇಂದ್ರಗಳು ಇಂತಹ ಕಾರ್ಯಕ್ರಮಗಳಿಂದ ಸಾಧ್ಯ, ಧಾರ್ಮಿಕತೆಯ ಕುರುಹುಗಳು ನಮ್ಮವರಿಂದಲೇ ಪ್ರಾರಂಭವಾಗಿ, ಇಂತಹ ಗ್ರಾಮೀಣ ಪ್ರದೇಶದಲ್ಲಿ ನೆಲೆಗಟ್ಟಿನ ಚೌಕಟ್ಟಾಗಿದೆ. ಅದರೊಂದಿಗೆ ಧಾರ್ಮಿಕತೆಯು ಪ್ರತಿಯೊಬ್ಬ ಮನುಷ್ಯನ ಅವಿಭಾಜ್ಯ ಅಂಗವಾಗುವುದರೊಂದಿಗೆ,ಧಾರ್ಮಿಕತೆಯ ನೆಲೆಬೀಡಾಗಿ ಈ ಕ್ಷೇತ್ರ ಮುಂದುವರಿಯಬೇಕಾಗಿದೆ. ಅದಲ್ಲದೆ ಯುವ ಪೀಳಿಗೆಗೆ ಧಾರ್ಮಿಕತೆಯ ಕ್ರಾಂತಿಯನ್ನ ಮೂಡಿಸಬೇಕಿದೆ ಎಂದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ
ಹೆಚ್. ಗಂಗಾಧರ ಶೆಟ್ಟಿ ಅಧ್ಯಕ್ಷರು ಮಂದರ್ತಿ ಸೇವಾ ಸಹಕಾರಿ ಸಂಘ ನಿಯಮಿತ ಮಂದಾರ್ತಿ, ಇವರು ಮುಖ್ಯ ಅತಿಥಿಗಳ ಭಾಷಣದಲ್ಲಿ ಸ್ಪಷ್ಟಪಡಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪತ್ರಕರ್ತ, ಅಂಕಣಕಾರ ಕೆ.ಸಂತೋಷ್ ಶೆಟ್ಟಿ ಮೊಳಹಳ್ಳಿ ಮಾತನಾಡಿ “ಧಾರ್ಮಿಕತೆಯ ಸಂಕೇತವಾಗಿರುವ ಗಣೇಶೋತ್ಸವ ಇಂದಿನ ಸಮಾಜಕ್ಕೆ ಬಹಳಷ್ಟು ಸಂದೇಶವನ್ನು ನೀಡುತ್ತದೆ, ಮಕ್ಕಳಲ್ಲಿನ ಧಾರ್ಮಿಕತೆಯ ವ್ಯಾಮೋಹ ಹಿಂದಿನ ದಿನದಲ್ಲಿ ಕಡಿಮೆಯಾಗುತ್ತಿತ್ತು, ಮಕ್ಕಳಿಗೆ ಈಗಿಂದಲೇ ಬದುಕುವ ನೈತಿಕ ಶಿಕ್ಷಣದ ಅಗತ್ಯತೆ ಇಂದಿನ ಸಮಾಜಕ್ಕಿದೆ, ಆತ್ಮಬಲ ಮತ್ತು ಗುರುಹಿರಿಯರಿಗೆ ಕೊಡುವಂತಹ ಗೌರವ ಇಂದಿನ ಮಕ್ಕಳಿಗೆ ಪಾಠವಾಗಿ ಕಲಿಸಬೇಕಾಗಿದೆ, ಆಡಂಬರದ ಶಿಕ್ಷಣದ ಜೊತೆಯಲ್ಲಿ ಸಂಸ್ಕೃತಿ ಹೀನವಾಗುತ್ತಿದೆ, ಇದು ನಮ್ಮೆಲ್ಲರ ದುಸ್ತರದ ಬದುಕಿಗೆ ಕಾರಣ ಎಂದು ಹೇಳಿದರು.

ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸಭಾ ಕಾರ್ಯಕ್ರಮ ಸಭಾಧ್ಯಕ್ಷತೆ , ಶ್ರೀ ಗುರುಪ್ರಸಾದ್ ಗೌರವಾಧ್ಯಕ್ಷ ರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶಿರೂರು ಮುದ್ದು ಮನೆ ವಹಿಸಿದ್ದರು.
ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೆ.ಸಂತೋಷ್ ಶೆಟ್ಟಿ,ಮೊಳಹಳ್ಳಿ, ಪತ್ರಕರ್ತರು ಮತ್ತು ಮಾಧ್ಯಮ ವಿಶ್ಲೇಷಕರು, ಶ್ರೀಮತಿ ಲತಾ ಸಂತೋಷ ಶೆಟ್ಟಿ ಸಾಹಿತಿ ಮತ್ತು ಬರಹಗಾರು, ಶ್ರೀ ಶಶಿಧರ ಶೆಟ್ಟಿ ಗೌರವಾಧ್ಯಕ್ಷರು ಗಣೇಶೋತ್ಸವ ಸಮಿತಿ ,ಕರುಣಾಕರ ಆಚಾರ್ಯ ಅಧ್ಯಕ್ಷರು ಗಣೇಶೋತ್ಸವ ಸಮಿತಿ , ರಮಣಿ ಶೆಟ್ಟಿ ಗೌರವಾಧ್ಯಕ್ಷರು ಮಹಿಳಾ ಸಮಿತಿ
ಶ್ರೀಮತಿ ಆಶಾ ಅಧ್ಯಕ್ಷರು, ಮಹಿಳಾ ಸಮಿತಿ.
ಕಾರ್ಯಕ್ರಮವನ್ನು ಶ್ರೀ ಅಮರ್ ಹೆಗ್ಡೆ ಸ್ವಾಗತಿಸಿ, ಶ್ರೀಮತಿ ಶ್ವೇತಾ ಹೆಗ್ಡೆ ನಿರೂಪಿಸಿ,
ಸುಧಾಮ ಎಸ್. ವಂದಿಸಿದರು. ಕಾರ್ಯಕ್ರಮದ ನಂತರ ಸ್ಥಳೀಯ ಯುವಕರಿಂದ ಮತ್ತು ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ಹಿರಿಯರಾದ
ಎಸ್. ರಾಮಣ್ಣ ಶೆಟ್ಟಿ ಆಡಳಿತ ಮುಖ್ಯಸ್ಥರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶಿರೂರು ಮುದ್ದುಮನೆ,
ಮೋಹನ ದಾಸ ಶೆಟ್ಟಿ ನಿವ್ರತ ಶಿಕ್ಷಕರು ಶಿರೂರು ಕಲ್ಮನೆ ಇವರನ್ನು ಅತ್ಯಂತ ಗೌರವ ಪೂರಕವಾಗಿ ಸನ್ಮಾನಿಸಲಾಯಿತು.