ಡೈಲಿ ವಾರ್ತೆ: 15/Sep/2024
ಸಮಾನತೆಗೋಸ್ಕರ ಹೋರಾಟ ಮಾಡಿ ಸಮಾನತೆಗೆ ಅವಕಾಶ ಪಡೆದು ಆ ಕಟ್ಟ ಕಡೆಯ ಮನುಷ್ಯರು ಮುಖ್ಯ ವಾಹಿನಿಗೆ ಬರಬೇಕಾಗಿ ಮೀಸಲಾತಿ ತರಲಾಗಿದೆ. ಸಂಸದ ಕೋಟ
ಕುಂದಾಪುರ: ಭಾರತೀಯ ಜನತಾ ಪಾರ್ಟಿ, ಕುಂದಾಪುರ ಹಾಗೂ ಜಿಲ್ಲಾ ಎಸ್ ಸಿ ಮತ್ತು ಎಸ್ ಟಿ ಮೋರ್ಚದ ನೇತೃತ್ವದಲ್ಲಿ ಮೀಸಲಾತಿ ರದ್ದು ಪಡಿಸುವ ಹೇಳಿಕೆ ನೀಡಿರುವ ರಾಹುಲ್ ಗಾಂಧಿ ವಿರುದ್ಧ ಕುಂದಾಪುರದ ಬಿಜೆಪಿಯ ಕಚೇರಿ ಸಮೀಪ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ ಆಡಿದ ಮಾತನ್ನು ದೇಶ ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತದೆ.
ಎಂಬ ಚರ್ಚೆ ಬೇರೆ ಇದೆ. ಈ ದೇಶದ ಪ್ರತಿಪಕ್ಷದ ನಾಯಕನಾಗಿ ರಾಹುಲ್ ಗಾಂಧಿ ಹಾಡಿರುವ ಮಾತು ಇಡೀ ದೇಶಕ್ಕೆ ಮತ್ತು ಪ್ರಪಂಚದ ಅನೇಕ ಕಡೆ ದಿಗ್ಭ್ರಮೆಯನ್ನು ಉಂಟು ಮಾಡಿದೆ.
ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ್ ಪೂಜಾರಿಯವರು ಮಾತನಾಡುತ್ತಾ.
ಭಾರತದ ಸಂವಿಧಾನ ಹೇಳುತ್ತೆ ಸಮಾನತೆಗೋಸ್ಕರ ಮೀಸಲಾತಿ ಕೊಟ್ಟಿದೀವಿ, ಆ ಸಂವಿಧಾನದ ಆಶಯನ್ನು ಅರ್ಥ ಮಾಡಿಕೊಂಡು ಭಾರತೀಯ ಜನತಾ ಪಾರ್ಟಿ ಅಧಿಕಾರ ಇದ್ದಾಗ ಪ್ರಥಮ ಬಾರಿಗೆ ಭಾರತಕ್ಕೆ ಸ್ವಾತಂತ್ರ್ಯ ಬಂದು ಇಲ್ಲಿಯವರೆಗೆ ಯಾವ ರೀತಿ ಬದಲಾವಣೆ ಆಗೋದಕ್ಕಿಂತ ಹೆಚ್ಚಾಗಿ ಇತ್ತೀಚಿನ ವರ್ಷಗಳಲ್ಲಿ ಪ್ರಥಮ ಬಾರಿಗೆ ಪರಿಶಿಷ್ಟ ಪಂಗಡದವರಿಗೆ ಮೀಸಲಾತಿಯನ್ನು ಮೂರರಿಂದ ಏಳು ಪರ್ಸೆಂಟ್ ವರೆಗೆ ಏರಿಸಿದ್ದು ಯಾರಾದರೂ ಇದ್ರೆ ಅದು ಈ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿಯ ಬೊಮ್ಮಾಯಿ ಅವರ ಸರ್ಕಾರ ಎನ್ನುವುದು ದಾಖಲಾಗಿಬಿಟ್ಟಿದೆ.
ಮುಂದುವರಿದು 15 ಪರ್ಸೆಂಟ್ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು 17% ಏರಿಸಿದ್ದು ಕೂಡ ಬಿಜೆಪಿ ಎನ್ನುವುದು ಕೂಡ ದಾಖಲಾಗಿ ಹೋಗಿದೆ.
ದುರಾದೃಷ್ಟಕ್ಕೆ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬಂದು ಮೀಸಲಾತಿ ಹೆಚ್ಚು ಮಾಡಿತ್ತು ರಾಹುಲ್ ಗಾಂಧಿಯವರು ವಿದೇಶದಲ್ಲಿ ನಿಂತುಕೊಂಡು ಮೀಸಲಾತಿಯನ್ನು ಇವತ್ತು ಮೀಸಲಾತಿಯನ್ನು ರದ್ದು ಮಾಡ್ತೀವಿ ಅಂತ ಮಾತುಗಳನ್ನು ಹೇಳುತ್ತಾ ಇರುವುದಕ್ಕೆ ಇದಕ್ಕಿಂತ ಘೋರವಾದ ಅಪರಾಧವಿಲ್ಲ ಇದನ್ನು ಖಂಡಿಸಿ.
ಭಾರತೀಯ ಜನತಾ ಪಾರ್ಟಿ, ಇದನ್ನು ಕಟುವಾಗಿ ವಿರೋಧ ಮಾಡಿ ಕುಂದಾಪುರದಲ್ಲಿ ನೂರಾರು ಜನ ಸೇರಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರ ಮೀಸಲಾತಿ ರದ್ದು ಮಾಡ್ತೀವಿ ಅಂತ ರಾಹುಲ್ ಗಾಂಧಿಯವರ ಮಾತುಗಳನ್ನ ಖಂಡಿಸ್ತೇವೆ.
ಅಂತ ಹೇಳುವುದರ ಮೂಲಕ ಇವತ್ತು ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆಯನ್ನ ಕೊಡ್ತಾ ಇದ್ದೇವೆ ಯಾವುದೇ ಕಾರಣಕ್ಕೆ ಇಂತಹ ಅನ್ಯಾಯವನ್ನು ಮುಂದುವರಿಸಿದರೆ ಭಾರತೀಯ ಜನತಾ ಪಕ್ಷ ರಾಷ್ಟ್ರಾದ್ಯಂತ ಪರಿಶಿಷ್ಟಜಾತಿ ಪರಿಶಿಷ್ಟ ಪಂಗಡದವರ ಪರವಾಗಿ ನಿಂತು ಹೋರಾಟ ಮಾಡುತ್ತೀವಿ ಅಂತ ಎಚ್ಚರಿಕೆ ಮಾತುಗಳನ್ನಾಡಿದರು.
ಸದ್ರಿ ಈ ಪ್ರತಿಭಟನೆಯಲ್ಲಿ
ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ, ಕುಂದಾಪುರ ಮಂಡಲಾ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ, ಜಿಲ್ಲಾ ಎಸ್ ಸಿ ಮೋರ್ಚಾದ ಅಧ್ಯಕ್ಷ ಚಂದ್ರ ಪಂಚವಟಿ, ಎಸ್ ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಕುಮಾರ್ ದಾಸ್ ರಾಜ್ಯ ಎಸ್ಸಿ ಮೋರ್ಚದ ಉಪಾಧ್ಯಕ್ಷ ದಿನಕರ ಬಾಬು, ಮಾಜಿ ನಿಕಟ ಪೂರ್ವ ಎಸ್ಸಿ ಮೋರ್ಚ ಜಿಲ್ಲಾಧ್ಯಕ್ಷ ಗೋಪಾಲ್ ಕಳಂಜಿ, ಜಿಲ್ಲಾ ಎಸ್ ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಡಿ. ಬಿ, ಕುಂದಾಪುರ ಮಂಡಲ ಎಸ್ ಸಿ ಮೋರ್ಚದ ಅಧ್ಯಕ್ಷ ಮಂಜುನಾಥ್, ಮಂಡಲ ಎಸ್ಸಿ ಮೋರ್ಚ ನಿಕಟ ಪೂರ್ವ ಅಧ್ಯಕ್ಷ ಮಹೇಶ ಜಿಲ್ಲಾ ಎಸ್ ಸಿ ಮೋರ್ಚಾದ ಉಪಾಧ್ಯಕ್ಷ ನಾಗರಾಜ್ ಚೋನಳ್ಳಿ, ಕುಂದಾಪುರ ಮಂಡಲ ನಿಕಟಪೂರ್ವ ಅಧ್ಯಕ್ಷ ಶಂಕರ ಅಂಕದಕಟ್ಟೆ, ಕುಂದಾಪುರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ವಕ್ವಾಡಿ ಸುಧೀರ್ ಕೆ.ಎಸ್. ಮಂಗಳೂರು ಸಹಪ್ರಭಾರಿ ರಾಜೇಶ್ ಕಾವೇರಿ ವಿವಿಧ ಮೋರ್ಚಗಳ ಪ್ರಮುಖರು ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು.