ಡೈಲಿ ವಾರ್ತೆ: 15/Sep/2024

ಆರ್ ಆರ್ ಎಮ್ ಬಿ ಬಿ ನಿಕ್ಕಮ್ ಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ: ಕುಂದಾಪುರ ಶಾಸಕ ಕಿರಣ್ ಕೊಡ್ಗಿ ಭಾಗಿ

ಕುಂದಾಪುರ: ಆರು ವರ್ಷಗಳ ಕಾಲ ಕಾರವಾರ ವಿಭಾಗೀಯ ವ್ಯವಸ್ತಾಪಕರಾಗಿ ಜನಮೆಚ್ಚುಗೆ ಗಳಿಸಿ ಇದೀಗ ಮುಂಬಯಿಗೆ ಬಡ್ತಿ ಪಡೆದು ವರ್ಗಾವಣೆಗೊಂಡ ಶ್ರಿ ಬಿ.ಬಿ ನಿಕ್ಕಮ್ ಇವರಿಗೆ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯು ಲಯನ್ಸ್ ಕ್ಲಬ್ ಹಂಗ್ಲೂರು ಸಹಯೋಗದೊಂದಿಗೆ ಆಯೋಜಿಸಲಾದ ಬೀಳ್ಕೊಡುವ ಸಮಾರಂಭದ ಕಾರ್ಯಕ್ರಮದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಭಾಗವಹಿಸಿ ರೈಲ್ವೇ ಅಧಿಕಾರಿಗಳಿಗೆ ಸಾರ್ವಜನಿಕ ಬೀಳ್ಕೊಡುಗೆ ತೀರಾ ಅಪರೂಪವಾಗಿದ್ದು ಜನರ ಪ್ರೀತಿ ಇರುವ ಅಧಿಕಾರಿಗಳಿಗೆ ಮಾತ್ರ ಇದು ಲಭ್ಯವಾಗುತ್ತದೆ ಎಂದು ಶ್ಲಾಘಿಸಿದರು.

ಬಿ.ಬಿ.ನಿಕ್ಕಮ್ ಕೊಂಕಣ ರೈಲ್ವೆ ನಿಗಮವನ್ನು ಜನರ ಬಳಿ ತರಲು ನಡೆಸಿದ ಶ್ರಮ ಹಾಗು ಸಾರ್ವಜನಿಕರು ಮತ್ತು ರೈಲು ನಿಗಮದ ನಡುವೆ ಇದ್ದ ಅಂತರ ತಗ್ಗಿಸಲು ಕೈಗೊಂಡ ಕ್ರಮಗಳನ್ನು ಕುಂದಾಪುರ ರೈಲ್ವೇ ಸಮಿತಿ ಸ್ಮರಿಸಿತು.

ಇದೇ ಹೊತ್ತಲ್ಲಿ , ಕುಂದಾಪುರ ನಿಲ್ದಾಣಕ್ಕೆ ಸುಮಾರು ನಲವತ್ತು ಲಕ್ಷ ರೂಪಾಯಿಗೂ ಅಧಿಕ ಲಯನ್ಸ್ ಕ್ಲಬ್ ಹಂಗ್ಲೂರು ಪ್ರಾಯೋಜಕತ್ವದಲ್ಲಿ ಉದ್ದೇಶಿತ ಪ್ಲಾಟ್ ಪಾರಂ ಪ್ಲೋರಿಂಗ್,ರೂಫಿಂಗ್ ಮತ್ತು ಶೌಚಾಲಯ ವಿನ್ಯಾಸವನ್ನು ಶಾಸಕರು ಬಿಡುಗಡೆ ಮಾಡಿದರು.

ಇದೇ ಸಂಧರ್ಭದಲ್ಲಿ ಲಯನ್ಸ್ ಕ್ಲಬ್ ಹಂಗ್ಲೂರಿನ ಈ ಉದಾತ್ತವಾದ ಸಾರ್ವಜನಿಕರಿಗೆ ಅನುಕೂಲವಾಗುತ್ತಿರುವ ಕೊಡುಗೆಯನ್ನು ನೀಡಲು ಹೊರಟ ಲಯನ್ಸ್ ಕ್ಲಬ್ ಹಂಗ್ಲೂರಿನ ಸರ್ವ ಸದಸ್ಯರನ್ನ ಮುಕ್ತ ಕಂಠದಿಂದ ಶ್ಲಾಘಿಸಿದರು.

ಅಲ್ಲದೆ ಬಿಬಿ ನಿಕ್ಕಮ್ ಅಧಿಕಾರದ ಅವಧಿಯಲ್ಲಿ ಕತ್ತಲೆ ತುಂಬಿದ್ದ ನಿಲ್ದಾಣಕ್ಜೆ ಅಭಿವೃದ್ಧಿ ಕಾರ್ಯಗಳಾದ ಹೈಮಾಸ್ಡ್, ಟಿಕೆಟ್ ವ್ಯವಸ್ತೆ ,ಪಂಚಗಂಗಾ ರೈಲಿನ ಸುಧಾರಣೆ ,ಹೊಸ ಮೈಸೂರು ರೈಲು ಹೊಸ ನಿಲುಗಡೆ ಇತ್ಯಾದಿ ,ಪ್ರಿಪೈಡ್ ಕೌಂಟರ್ ಇತ್ಯಾದಿ ಅಭಿವೃದ್ಧಿ ಕಾರ್ಯಗಳನ್ನು ಸ್ಮರಿಸಲಾಯಿತು.

ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್ ಸರ್ವರನ್ನು ಸ್ವಾಗತಿಸಿ.
ಮುಂದೆ ಕೂಡ ಪದನ್ನೊತಿ ಹೊಂದಿದ ಬಿಬಿ ನಿಕ್ಕಮ್ ಅವರಿಂದ ಕರಾವಳಿಗೆ ಸಹಾಯ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಸಿಗಲಿರುವ ಆಶಾ ಭಾವನೆ ವ್ಯಕ್ತ ಪಡಿಸಿ ಪ್ರಾಸ್ತಾವಿಕ ಮಾತನಾಡಿದರು.

ಲಯನ್ಸ್ ಕ್ಲಬ್ ಪರವಾಗಿ ಲಯನ್ಸ್ ವಲಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿ ಲಯನ್ಸ್ ಕ್ಲಬ್ ಗೆ ಇಂಥಾ ಉನ್ನತ ಕಾರ್ಯ ಮಾಡಲು ಅವಕಾಶ ಲಭಿಸಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದರು

ಸಮಿತಿ ಸಂಚಾಲಕ ವಿವೇಕ್ ನಾಯಕ್ ಕಾರ್ಯಕ್ರಮ ನಿರೂಪಿಸಿ, ತಾಂತ್ರಿಕ ಸಲಹೆಗಾರ ಗೌತಮ್ ಶೆಟ್ಟಿ. ಬಿಬಿ ನಿಕ್ಕಮ್ ಅವರನ್ನ ಸಭೆಯಲ್ಲಿ ಪರಿಚಯಿಸಿದರು,ಕಾರ್ಯದರ್ಶಿ ಪ್ರವೀಣ್.ಟಿ.ವಂದಿಸಿದರು. ವೇದಿಕೆಯಲ್ಲಿ ಲಯನ್ಸ್ ಹಂಗ್ಲೂರು ಅಧ್ಯಕ್ಷ ರೋವನ್ ಡಿ ಕೋಸ್ಟಾ,ಜೊತೆ ಕಾರ್ಯದರ್ಶಿ ರಮೇಶ್ ಶೆಟ್ಟಿ, ಕೋಶಾಧಿಕಾರಿ ಪುನೀತ್ ಉಪಸ್ಥಿತರಿದ್ದರು. ಅಲ್ಲದೆ ಈ ಸಭೆಯಲ್ಲಿ ಲಯನ್ಸ್ ಕ್ಲಬ್ ಹಂಗ್ಲೂರು, ಕುಂದಾಪುರ ಅಮೃತಧಾರಾ, ಕೋಟೇಶ್ವರ,ಕ್ಲೀನ್ ಕುಂದಾಪುರ ಪ್ರಾಜೆಕ್ಟ್,ರೆಡ್ ಕ್ರಾಸ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು