ಡೈಲಿ ವಾರ್ತೆ: 19/Sep/2024

ಬ್ಯಾರಿ ಭಾಷೆಯ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಉಮರ್ ಯು. ಎಚ್

ಮಂಗಳೂರು : ಬ್ಯಾರಿ ಭಾಷೆಯ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್ ಯು.ಎಚ್ ಹೇಳಿದರು.

ಅವರು ಇತ್ತೀಚೆಗೆ ಸಮನ್ವಯ ಶಿಕ್ಷಕರ ಸಂಘ ದಕ್ಷಿಣ ಕನ್ನಡ ಜಿಲ್ಲೆಯ ಪದಾಧಿಕಾರಿಗಳೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ಅಕಾಡೆಮಿ ಮತ್ತು ಸಮನ್ವಯ ಜೊತೆಯಾಗಿ ಬ್ಯಾರಿ ಭಾಷೆ-ಸಾಹಿತ್ಯ-ಸಂಸ್ಕೃತಿ ಯನ್ನು ಉಳಿಸಿ ಬೆಳೆಸುವಲ್ಲಿ ಸಹಾಯವಾಗುವ ರೂಪುರೇಷೆಗಳನ್ನು ತಯಾರಿಸುವ ಬಗ್ಗೆ ಚರ್ಚಿಸಿದರು. ನಮ್ಮ ಮುಂದಿನ ತಲೆಮಾರುಗಳ ಭವಿಷ್ಯ ಮತ್ತು ಪ್ರತಿಭೆಗಳನ್ನು ಗರುತಿಸಿ ಬೆಳೆಸಿದಲ್ಲಿ ಸಮಾಜಕ್ಕೆ ದೊರಕುವ ಉಪಯುಕ್ತ ಮಾನವ ಸಂಪನ್ಮೂಲವನ್ನು ನಿರ್ಮಿಸುವ ಬಗ್ಗೆ ಜೊತೆಯಾಗಿ ಕೆಲಸ ಮಾಡುವ ಎಂದು ಕರೆಕೊಟ್ಟರು.

ಈ ಬಗ್ಗೆ ಪ್ರಾಥಮಿಕ-ಪ್ರೌಢ-ಪದವಿ ಮಟ್ಟದ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಪ್ರತಿಭಾನ್ವೇಷಣೆ ನಡೆಸುವಲ್ಲಿ ಅಕಾಡೆಮಿಯೊಂದಿಗೆ ಕೈಜೋಡಿಸಿ ಎಂದರು.

ಸಂವಾದ ಕಾರ್ಯಕ್ರಮದಲ್ಲಿ ಸಮನ್ವಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಬ್ದುಲ್ ಮಜೀದ್ ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಸ್ತಾವನೆಯಲ್ಲಿ ನಮ್ಮಲ್ಲಿರುವ ಯುವ ಶಿಕ್ಷಕರ ಕಾರ್ಯವೈಖರಿಯ ದಕ್ಷತೆ, ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವಲ್ಲಿ ಮತ್ತು ಸಮುದಾಯದ ಗರಿಷ್ಠಮಟ್ಟದ ಸಬಲೀಕರಣಕ್ಕೆ ಸಮನ್ವಯ ಶಿಕ್ಷಕರ ಸಂಘದ ಕಾರ್ಯಚಟುವಟಿಕೆಗಳು ಎಷ್ಟರ ಮಟ್ಟಿಗೆ ಪೂರಕವಾಗಿದೆ ಎಂಬುವುದನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಯೂಸುಫ್ ವಿಟ್ಲ, ಬಿ. ಮೊಹಮ್ಮದ್ ತುಂಬೆ, ಸಮಿವುಲ್ಲಾ, ಆದಂ ಸಾಹೇಬ್, ಹಮೀದ್ ಕೆ ಮಾಣಿ, ನೂರುದ್ದೀನ್, ನಾಸಿರ್. ಎ. ಮನಾಝಿರ್ ಮುಡಿಪು, ಶಾಹಿದ್ ವಲವೂರ್, ಲಿಯಾವುದ್ದಿನ್, ಹಸೀನಾ ಮಲ್ನಾಡು, ಫಾಝಿಲಾ ಕಾವಳಕಟ್ಟೆ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಹಾರೀಸ್ ಬಾಂಬಿಲ ಸ್ವಾಗತಿಸಿ, ತೌಸೀಫ್ ಪಾಂಡವರಕಲ್ಲು ವಂದಿಸಿದರು. ಶಾಹಿದ್ ವಳವೂರು ಕಾರ್ಯಕ್ರಮ ನಿರೂಪಿಸಿದರು.