ಡೈಲಿ ವಾರ್ತೆ: 19/Sep/2024
ಪರ್ಲೊಟ್ಟು : ಇಶ್ಟೇ ಮದೀನಾ ಮೀಲಾದ್ ಪೆಸ್ಟ್
ಬಂಟ್ವಾಳ : ಪರ್ಲೊಟ್ಟು ಅಬೂಬಕ್ಕರ್ ಸಿದ್ದೀಕ್ ಜುಮಾ ಮಸೀದಿ ಮತ್ತು ನೂರುಲ್ ಹುದಾ ಮದರಸ ಇದರ ವತಿಯಿಂದ ಇಶ್ಟೇ ಮದೀನಾ ಮೀಲಾದ್ ಪೆಸ್ಟ್ ಕಾರ್ಯಕ್ರಮ ಬುಧವಾರ ರಾತ್ರಿ ಮಸೀದಿ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೊಡಾಜೆ ಬದ್ರಿಯಾ ಜುಮಾ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಪೊನ್ಮಳ ಮಾತನಾಡಿ, ಲೋಕ ಪ್ರವಾದಿ ಮುಹಮ್ಮದ್ ಪೈಗಂಬರರ ಜೀವನ ಚರ್ಯೆ ಸರ್ವರಿಗೂ ಮಾದರಿ, ಪ್ರವಾದಿಯವರ ಜೀವನಶೈಲಿ ಯಾರನ್ನು ನಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡು ಶಾಂತಿ ಸೌಹಾರ್ದತೆಯಿಂದ ಜೀವಿಸೋಣ ಎಂದು ಕರೆ ನೀಡಿದರು.
ಮಸೀದಿ ಅಧ್ಯಕ್ಷ ಹೈದರ್ ಪರ್ಲೊಟ್ಟು ಅಧ್ಯಕ್ಷತೆ ವಹಿಸಿದ್ದರು. ಮಿತ್ತೂರು ಸಿರಾಜುಲ್ ಹುದಾ ಜುಮಾ ಮಸೀದಿ ಖತೀಬ್ ಇಬ್ರಾಹಿಂ ದಾರಿಮಿ ಉದ್ಘಾಟಿಸಿದರು.
ಕೆ.ಬಿ.ಕಾಸಿಂ ಹಾಜಿ ಮಿತ್ತೂರು, ಫಾರೂಕ್ ಹನೀಫಿ, ಇಸಾಕ್ ಕೌಸರಿ, ದ.ಕ.ಜಿಲ್ಲಾ ಮದರಸ ಮೆನೇಜರ್ ಮೆಂಟ್ ಪ್ರಧಾನ ಕಾರ್ಯದರ್ಶಿ ರಫೀಕ್ ಹಾಜಿ ನೇರಳಕಟ್ಟೆ ಮಾತನಾಡಿ ಶುಭ ಹಾರೈಸಿದರು.
ಪರ್ಲೊಟ್ಟು ಅಬೂಬಕ್ಕರ್ ಸಿದ್ದೀಕ್ ಜುಮಾ ಮಸೀದಿ ಆಡಳಿತ ಸಮಿತಿ ಉಪಾಧ್ಯಕ್ಷ ಪಿ.ಕೆ.ಅಬ್ಬಾಸ್, ಕಾರ್ಯದರ್ಶಿ ಪಿ.ಕೆ.ಝುಬೈರ್, ಜೊತೆ ಕಾರ್ಯದರ್ಶಿ ಆಶಿಕ್, ಪ್ರಮುಖರಾದ ಫಾರೂಕ್ ಹಾಜಿ ಸುಲ್ತಾನ್, ಅಬ್ದುಲ್ ಖಾದರ್ ದರ್ಬಾರ್, ಪಿ.ಕೆ. ರಶೀದ್, ಸಾಹುಲ್ ಹಮೀದ್ (ಅಮ್ಮಿ), ಸಿದ್ದೀಕ್, ಸಮದ್, ಜುನೈದ್, ಕೆ.ಬಿ. ಇಸ್ಮಾಯಿಲ್, ಪಿ.ಕೆ. ರಹಿಮಾನ್ (ಅದ್ದು), ಶರೀಫ್ ಪರ್ಲೊಟ್ಟು , ಯೂಸುಫ್ ಸಹೀದ್ ನೇರಳಕಟ್ಟೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು
ಇದೇ ವೇಳೆ ಮದರಸ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಸೀದಿ ಖತೀಬ್ ಸೈದಾಲಿ ಮುಸ್ಲಿಯಾರ್ ಹಾಗೂ ಮುಅಝ್ಝಿನ್ ಅಬ್ದುಲ್ ಹಮೀದ್ ಮುಸ್ಲಿಯಾರ್ ಅವರನ್ನು ಗೌರವಿಸಲಾಯಿತು.
ಪರ್ಲೊಟ್ಟು ಅಬೂಬಕ್ಕರ್ ಸಿದ್ದೀಕ್ ಜುಮಾ ಮಸೀದಿ ಖತೀಬ್ ಸೈದಾಲಿ ಮುಸ್ಲಿಯಾರ್ ಸ್ವಾಗತಿಸಿ, ಲತೀಫ್ ನೇರಳಕಟ್ಟೆ ವಂದಿಸಿದರು. ಮದ್ರಸ ವಿದ್ಯಾರ್ಥಿ ಸಜ್ಜಾದ್ ಕಿರಾಅತ್ ಪಠಿಸಿದರು. ಪಿ.ಕೆ.ಶರೀಫ್ ಕಾರ್ಯಕ್ರಮ ನಿರೂಪಿಸಿದರು.