ಡೈಲಿ ವಾರ್ತೆ: 21/Sep/2024

“ಜೀವನದ ಪ್ರಗತಿಗೆ ಬೌದ್ಧಿಕ ಶಿಕ್ಷಣ ಹೇಗೆ ಅಗತ್ಯವೋ ಶಾರೀರಿಕ ಬೆಳವಣಿಗೆ ಗೆ ದೈಹಿಕ ಕ್ರೀಡಾ ಚಟುವಟಿಕೆ ಅಗತ್ಯ ”

ಕರ್ನಾಟಕ ಸರಕಾರ, ಜಿಲ್ಲಾ ಪಂಚಾಯತ್ ಉಡುಪಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಪ ನಿರ್ದೇಶಕರ ಕಛೇರಿ ಉಡುಪಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಬ್ರಹ್ಮಾವರ ಮತ್ತು ಶ್ರೀ ವಿದ್ಯೇಶ ವಿದ್ಯಾಮಾನ್ಯ ನೇಶನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ – ಬಾರಕೂರಿ ನ ಜಂಟಿ ಆಶ್ರಯ ದಲ್ಲಿ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಬಾಲಕ ಮತ್ತು ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ನಡೆಯಿತು.

” ಜೀವನದ ಪ್ರಗತಿಗೆ ಬೌದ್ಧಿಕ ಶಿಕ್ಷಣ ಹೇಗೆ ಅಗತ್ಯವೋ ಶಾರೀರಿಕ ಬೆಳವಣಿಗೆಗೆ ದೈಹಿಕ ಕ್ರೀಡಾ ಚಟುವಟಿಕೆ ಅಗತ್ಯ ” ಎಂದು ಶ್ರೀ ವಿದ್ಯೇಶ ವಿದ್ಯಾಮಾನ್ಯ ನೇಶನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ ಶಾಲೆಯ ಸಂಚಾಲಕರಾದ ಶ್ರೀ ರಾಜಾರಾಮ್ ಶೆಟ್ಟಿ ರವರು ಉಡುಪಿ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ ತಮ್ಮ ಮಾತುಗಳನ್ನಾಡಿದರು

ಈ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾರಕೂರು ಎಜುಕೇಶನಲ್ ಸೊಸೈಟಿ (ರಿ ) ಬಾರಕೂರಿನ ಅಧ್ಯಕ್ಷ ರಾದ ಶ್ರೀ. ಬಿ. ಶಾಂತರಾಮ್ ಶೆಟ್ಟಿ ರವರು ವಹಿಸಿದ್ದರು.

ವೇದಿಕೆಯಲ್ಲಿ ಶ್ರೀ ಅಶೋಕ ಕುಮಾರ್ ಶೆಟ್ಟಿ, ಕಾರ್ಯದರ್ಶಿ, ಬಾರಕೂರು ಎಜುಕೇಷನಲ್ ಸೊಸೈಟಿ (ರಿ) ಬಾರಕೂರು,ಶ್ರೀ ಆರ್ಚಿ ಬಾಲ್ಡ್ ಫುಟಾರ್ದೋ ಬಾರಕೂರು ಎಜುಕೇಷನಲ್ ಸೊಸೈಟಿ (ರಿ )ಬಾರಕೂರನ ಆಡಳಿತ ಕ್ಕೆ ಒಳ ಪಟ್ಟ ಸಂಸ್ಥೆ ಗಳ ಆಡಳಿತ ಸoಯೋಜಕರು, ಶ್ರೀ ಪ್ರಕಾಶ. ಬಿ. ಬಿ, ಬಿ. ಆರ್. ಸಿ ಮಂದಾರ್ತಿ ಹೋಬಳಿ, ಶ್ರೀ ವಿಜಯಕುಮಾರ್ ಶೆಟ್ಟಿ, ಹವರಾಲು, ಅಡ್ವಕೇಟ್ ಉಡುಪಿ. ಶ್ರೀವಿಜಯಕುಮಾರ್ ಶೆಟ್ಟಿ ಅಧ್ಯಕ್ಷರು, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಉಡುಪಿ ಜಿಲ್ಲೆ. ಶ್ರೀ ಪ್ರಸನ್ನ ಕುಮಾರ್ ಶೆಟ್ಟಿ ಅಧ್ಯಕ್ಷರು, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಶ್ರೀ ರಾಜಾರಾಮ್ ಶೆಟ್ಟಿ, ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ , ಶ್ರೀ ರವೀಂದ್ರ, ದೈಹಿಕ ಶಿಕ್ಷಣ ಪರಿವೀಕ್ಷಣಾಧೀ ಕಾರಿ ಉಡುಪಿ ವಲಯ , ಶ್ರೀ ಅರುಣ್ ಕುಮಾರ್, ದೈಹಿಕ ಶಿಕ್ಷಣ ಪರಿವೀ ಕ್ಷಣಾಧಿಕಾರಿ ಬೈಂದೂರು ವಲಯ , ಶ್ರೀ ಗಣೇಶ ಶೆಟ್ಟಿ ಅಧ್ಯಕ್ಷರು, ರೋಟರಿ ಕ್ಲಬ್ ಬಾರಕೂರು, ಶ್ರೀ ಜಯರಾಮ್ ಆಚಾರ್, ಅಧ್ಯಕ್ಷರು, ರಕ್ಷಕ – ಶಿಕ್ಷಕ ಸಂಘ SVVNEMS . ಶ್ರೀಮತಿ ಲಲಿತಾ ಸಿ.ಆರ್.ಪಿ ಬಾರಕೂರು ಕ್ಲಸ್ಟರ್

ಶ್ರೀಮತಿ ಲಿಕಿತಾ ಕೊಠಾರಿ ಮುಖ್ಯೋಪಾಧ್ಯಾಯರು SVVNEMS. ಹೇರಾಡಿ
ಉಪಸ್ಥಿತರಿದ್ದರು.

ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ದ ಸಮಾರೋಪ ಸಮಾರಂಭದಲ್ಲಿ ಬಾರಕೂರು ಎಜುಕೇಷನಲ್ ಸೊಸೈಟಿ (ರಿ )ಬಾರಕೂರ ನ ಉಪಾಧ್ಯಕ್ಷರಾದ ಶ್ರೀ ವಿಠ್ಠಲ್ ಶೆಟ್ಟಿ ಮತ್ತು ಶ್ರೀ. ಬಿ.ಸೀತಾರಾಮ್ ಶೆಟ್ಟಿ,ಶ್ರೀ ರಾಜಾರಾಮ್ ಶೆಟ್ಟಿ, ಸಂಚಾಲಕರು, SVVNEMS. ಶ್ರೀ ಚಂದ್ರ ಶೇಖರ್ ಶೆಟ್ಟಿ,ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಉಡುಪಿ, ಶ್ರೀ ವಿಜಯ ಕುಮಾರ್ ಶೆಟ್ಟಿ, ಅಧ್ಯಕ್ಷರು ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಉಡುಪಿ ಜಿಲ್ಲೆ, ಶ್ರೀ ಗಣೇಶ ಶೆಟ್ಟಿ ಅಧ್ಯಕ್ಷ ರು ರೋಟರಿ ಕ್ಲಬ್ ಬಾರಕೂರು. ಶ್ರೀ ಜಯರಾಮ್ ಆಚಾರ್, ಅಧ್ಯಕ್ಷರು,ರಕ್ಷಕ ಶಿಕ್ಷಕ ಸಂಘ SVVNEMS, ಶ್ರೀಮತಿ ಲಿಕಿತಾ ಕೊಠಾರಿ, ಮುಖ್ಯ ಶಿಕ್ಷಕಿ, SVVNEMS ಹೇರಾಡಿ, ಶಾಲಾ ವಿದ್ಯಾರ್ಥಿ ಮುಖಂಡ ಪ್ರತೀಕ್ ವಿದ್ಯಾರ್ಥಿ ಕ್ರೀಡಾ ಕಾರ್ಯದರ್ಶಿ ಶೋಭಿತ್ ಉಪಸ್ಥಿತರಿದ್ದಿದರು.

ಉಡುಪಿ ಜಿಲ್ಲಾ ಮಟ್ಟದ ಪಂದ್ಯಾಟ ದಲ್ಲಿ 5 ವಲಯದಿಂದ ಸ್ಪರ್ಧಾಳುಗಳು ಭಾಗವಹಿಸಿದ್ದರು.

ಜಿಲ್ಲಾ ಮಟ್ಟದ ಪಂದ್ಯಾಟ ದಲ್ಲಿ 17 ರ ವಯೋ ಮಾನ ಬಾಲಕಿಯರ ವಿಭಾಗ ದಲ್ಲಿ ಪ್ರಥಮ ಸ್ಥಾನ ಬ್ರಹ್ಮಾವರ ವಲಯದ
SVVN ಆಂಗ್ಲ ಮಾಧ್ಯಮ ಶಾಲೆ ಹೇರಾಡಿ.

ದ್ವಿತೀಯ ಸ್ಥಾನ ವನ್ನು ಕಾರ್ಕಳ ವಲಯದ SVT. ಗರ್ಲ್ಸ್ ಪಿ. ಯು ಕಾಲೇಜ ಕಾರ್ಕಳ,

17ವಯೋ ಮಾನದ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ವನ್ನು ಬ್ರಹ್ಮಾವರ ವಲಯದ ನೇಶನಲ್ ಜೂನಿಯರ್ ಕಾಲೇಜ್ ಬಾರಕೂರು,

ದ್ವಿತೀಯ ಸ್ಥಾನ ವನ್ನು ಕುಂದಾಪುರ ವಲಯದ ಶ್ರೀ ಸರಸ್ವತಿ ವಿದ್ಯಾ ಮಂದಿರ ಗಂಗೊಳ್ಳಿ

14 ವಯೋ ಮಾನದ ಬಾಲಕರ ವಿಭಾಗ ದಲ್ಲಿ ಪ್ರಥಮ ಸ್ಥಾನವನ್ನು ಬ್ರಹ್ಮಾವರ ವಲಯದ SVVN ಆಂಗ್ಲ ಮಾಧ್ಯಮ ಶಾಲೆ ಹೇರಾಡಿ.

ದ್ವಿತೀಯ ಸ್ಥಾನ ವನ್ನು ಕುಂದಾಪುರ ವಲಯದ ಶ್ರೀ ಸರಸ್ವತಿ ವಿದ್ಯಾಮಂದಿರ ಗಂಗೊಳ್ಳಿ.

14 ವಯೋ ಮಾನದ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ವನ್ನು ಬ್ರಹ್ಮಾವರ ವಲಯದ SVVN ಆಂಗ್ಲ ಮಾಧ್ಯಮ ಶಾಲೆ ಹೇರಾಡಿ

ದ್ವಿತೀಯ ಸ್ಥಾನ ವನ್ನು ಕಾರ್ಕಳ ವಲಯದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪೆರ್ವಾಜೆ, ಕಾರ್ಕಳ. ಪ್ರಶಸ್ತಿ ಯನ್ನು ಪಡೆದು ಕೊಂಡರು.

ಜಿಲ್ಲಾ ಮಟ್ಟದ ಈ ಪಂದ್ಯಾಟ ಕ್ಕೆ ಕೊಡುಗೆ ನೀಡಿದ ದಾನಿ ಗಳನ್ನು ಗುರುತಿಸಿ ಕೊಳ್ಳಲಾಯಿತು.

ಶಾಲಾ ವಿದ್ಯಾರ್ಥಿ ಗಳಾದ , ಧನುಶ್ರೀ,ಪ್ರತೀಕ್ಷಾ, ಪ್ರಸ್ತುತಿ,ಶ್ರೀಲಕ್ಷ್ಮಿ ಅನ್ವಿತಾ ಪ್ರಾರ್ಥನೆ ಸಲ್ಲಿಸಿದರು.

ಈ ಕಾರ್ಯಕ್ರಮ ವನ್ನು ಶಾಲಾ ಶಿಕ್ಷಕ ರಾದ ಶ್ರೀ ನಾಗೇಂದ್ರ ಆಚಾರ್ ನಿರೂಪಿಸಿದರು, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಲಿಖಿತಾ ಕೊಠಾರಿ ರವರು ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಸುರೇಶ ಶೆಟ್ಟಿ ಮತ್ತು ಶ್ರೀಮತಿ ಜ್ಯೋತಿ ವಂದಿಸಿದರು. ಶಾಲಾ ಶಿಕ್ಷಕ -ಶಿಕ್ಷಕೇತರರು ಸಹಕರಿಸಿದರು.