ಡೈಲಿ ವಾರ್ತೆ: 22/Sep/2024

.ಕೆ.ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ.:ಮೊ :9632581508(ಪತ್ರಕರ್ತರು ಮಾಧ್ಯಮ ವಿಶ್ಲೇಷಕರು )

” ಆಯುರ್ವೇದಿಕ್ ವೈದ್ಯಕೀಯ ವಿಭಾಗ ದಲ್ಲಿ ಪದವಿಯ ಗೌರವ ಪುರಸ್ಕಾರಕ್ಕೆ ಪಾತ್ರವಾದ ಬಿದ್ಕಲ್ ಕಟ್ಟೆ ಮಾಡ್ ಮನೆಯ ಡಾ. ಕೀರ್ತಿ ಶೆಟ್ಟಿ….!” ಬಡತನದ ಹಂಬಲದಲ್ಲಿಯೇ ಸಾಧನೆಗೆ ಸಾಕ್ಷಿ ಆಯಿತು ” ಗೌರವ ಪುರಸ್ಕಾರ ….!” ವೈದ್ಯಕೀಯದ ಅದಮ್ಯ ಸೆಳೆತ, ಶ್ರದ್ಧೆ, ಅನವರತ ಶ್ರಮದ ಫಲವೇ ಗ್ರಾಮೀಣ ಭಾಗಕ್ಕೆ ಒಲಿದು ಬಂತು “ಕೀರ್ತಿ”ಯ ಪತಾಕೆ…!” ಇದು ಗ್ರಾಮೀಣ ಭಾಗದ ವಿದ್ಯಾರ್ಥಿನಿಯ ಮಹತ್ತರ ಸಾಧನೆ…!”

ಸುದ್ದಿ: ಬಿದ್ಕಲ್ ಕಟ್ಟೆ: (ಮಾಡ್ ಮನೆ )”ಸಾಧನೆಗೆ ಅಸಾಧ್ಯವಾದದ್ದುಯಾವುದು ಇಲ್ಲ, ಸಾಧಿಸುವಂತಹ ಛಲ ನಮ್ಮಲ್ಲಿರಬೇಕು..” ನಾವು ಸಾಧಿಸುವಂಥ ಕ್ಷೇತ್ರ ಯಾವುದಾದರೂ ಸಮಾಜಕ್ಕೆ ಮಹತ್ವಪೂರ್ಣವಾಗಿ ನಮ್ಮ ಸೇವಾ ಕಾರ್ಯ ದೊರಕುವಂತಿರಬೇಕು ಮತ್ತು ನಮ್ಮಿಂದ ಆಗುವಂತಹ ಸಹಾಯವನ್ನ ಸಮಾಜ ಪರ ಕಾರ್ಯ ತತ್ವದೊಂದಿಗೆ ಮಾಡುತ್ತಿರಬೇಕು. ಆಗ ಮಾತ್ರ ಸಮಾಜದಲ್ಲಿ ಒಂದಿಷ್ಟು ಬೆಳವಣಿಗೆಗಳು ಮತ್ತು ನಮ್ಮನ್ನ ಮಾದರಿಯಾಗಿರಿಸಿಕೊಂಡು, ಕೆಲವರು ಅಂತಹ ಯೋಜನೆಯಲ್ಲಿ ಅಭಿವೃದ್ಧಿಯನ್ನ ಕಂಡುಕೊಳ್ಳುತ್ತಾರೆ.

ವೈದ್ಯಕೀಯ ವಿಭಾಗದಲ್ಲಿ ಏನಾದರು ಸಾಧಿಸಬೇಕೆನ್ನುವ ಛಲ ಎನ್ನುವುದು ಮನುಷ್ಯನ ಮೆದುಳಿಗೆ ಹೊಕ್ಕಬೇಕು, ಆಗ ಮಾತ್ರ ಅಂತಹ ಸಾಧನೆಯನ್ನು ಕ್ಷಣಾಅರ್ಧದಲ್ಲೇ ಮುಗಿಸುವ ಪ್ರಯತ್ನ ತಲುಪುವುದು ನಮ್ಮ ಕರ್ತವ್ಯವಾಗಿರುತ್ತದೆ. ಆಯುರ್ವೇದಿಕ್ ತಂತ್ರಜ್ಞಾನದಲ್ಲಿ ವಿಶ್ಲೇಷಣಾತ್ಮಕ ಜ್ಞಾನವನ್ನು ಅಭಿವೃದ್ಧಿ ಮಾಡಿಕೊಂಡು, ಹೊಸತನವನ್ನು ಕಂಡುಕೊಳ್ಳುವ ಪ್ರಯತ್ನ ವೈದ್ಯ ಲೋಕಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ಅಂತಹ ಸಾಧನೆಯ ಸಾಧಕರ ಸಾಲಿನಲ್ಲಿ ನಿಲ್ಲುವ ನಮ್ಮ ಕುಂದಾ ಕನ್ನಡದ ಮಗಳು ಕುಮಾರಿ ಕೀರ್ತಿ ಶೆಟ್ಟಿ ಎನ್ನುವ ವಿದ್ಯಾರ್ಥಿನಿ ಆಯುರ್ವೇದಿಕ್ ವಿಭಾಗ ದಲ್ಲಿ ಗೌರವ ಪುರಸ್ಕಾರ ಪಡೆದು ಗ್ರಾಮೀಣ ಮಹಿಳೆಯರಿಗೆ ಸೆಡ್ಡು ಹೊಡೆದು ನಿಂತಿದ್ದಾರೆ. ಪ್ರತಿಭೆಗಳು ನಿಂತ ನೀರಾಗದೆ,ಸಮಾಜಕ್ಕೆ ಹಾಗೂ ಸಮಾಜದ ಒಂದಿಷ್ಟು ಜನರಿಗೆ ಸಹಾಯವಾಗುವಂತ ನಿಟ್ಟಿನಲ್ಲಿ ನಾವು ಕಾರ್ಯಾಚರಣೆ ಹೊಂದಬೇಕು. ಬದುಕು ಬದುಕಿನ ಜೊತೆಗೆ ನಾವು ಇಟ್ಟುಕೊಂಡಂತಹ ಗುರಿಯನ್ನು ಸಮರ್ಪಕವಾಗಿ ಗುರಿ ಮುಟ್ಟುವ ತನಕ ನಿಲ್ಲೋದು ಆತ್ಮಸ್ಥೈರ್ಯ ಪ್ರತೀಕ, ಅದಮ್ಯ ಸೆಳೆತ,ಶ್ರಮ, ಆತ್ಮವಿಶ್ವಾಸ ಹಾಗೂ ಕಷ್ಟಪಟ್ಟು ಜೀವನದ ಎತ್ತರಕ್ಕೆ ಸಾಗುವಲ್ಲಿ ಪ್ರಯತ್ನ ಸಾಕಷ್ಟು ಇರುತ್ತದೆ. ಅಂತಹ ಸಾಧನೆಯನ್ನು ಮಾಡಿರುವ ಕುಮಾರಿ ಕೀರ್ತಿ ಶೆಟ್ಟಿ ಎನ್ನುವ ವಿದ್ಯಾರ್ಥಿನಿ ಆಯುರ್ವೇದಿಕ್ ವಿಭಾಗದಲ್ಲಿ ತನ್ನನ್ನು ಗುರುತಿಸಿಕೊಳ್ಳುವ ಮಟ್ಟಿಗೆ ಬೆಳೆದು ನಿಂತಿದ್ದಾಳೆ. ಅಂತಹ ಮಹಾನ್ ಸಾಧನೆ ಮಾಡಿರುವ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದ್ಕಲ್ ಕಟ್ಟೆ ಸಮೀಪದ “ಮಾಡ್ ಮನೆ “ಯ ನಿವಾಸಿ ಶಶಿ ಶೇಖರ್ ಶೆಟ್ಟಿ ಮತ್ತು ಶ್ರೀಮತಿ ಶೋಭಾ ಶೆಟ್ಟಿ ರವರ ಪುತ್ರಿ ಕುಮಾರಿ ಕೀರ್ತಿ ಶೆಟ್ಟಿ ಎನ್ನುವ ವಿದ್ಯಾರ್ಥಿನಿಯ ಮಹತ್ತರ ಸಾಧನೆ ಯನ್ನು ಸಮಾಜಕ್ಕೆ ಮಾದರಿಯಾಗುವಂತಹ ನಿಟ್ಟಿನಲ್ಲಿ ನಾವು ವಿವರಿಸುತ್ತಿದ್ದೇವೆ. ಗ್ರಾಮೀಣ ಭಾಗದಲ್ಲಿ ಕನಸನ್ನ ಕಟ್ಟಿಕೊಂಡು ಎತ್ತರಕ್ಕೆ ಏರುವಲ್ಲಿ ಪ್ರಯತ್ನಪಟ್ಟಿದ್ದು ಈ ಸಾಧನೆಗೆ ಸಾಕ್ಷಿಯಾಗಿ ನಿಲ್ಲುತ್ತದೆ.

ಆಕೆ ಕಡುಬಡತನದಲ್ಲಿ ಬದುಕನ್ನ ಕಟ್ಟಿಕೊಂಡವಳು, ವಿದ್ಯುತ್ ದೀಪಗಳಿಲ್ಲದೆ ಅಂದಿನ ಕಾಲದಲ್ಲಿ ಕಷ್ಟಪಟ್ಟು ವಿಧ್ಯರ್ಜನೆಯನ್ನು ಮಾಡಿರುವಳು, ಶೈಕ್ಷಣಿಕ ತಳಹದಿಗೆ ಭದ್ರ ಬುನಾದಿಯನ್ನ ತಾನಾಗಿಯೇ ರಚಿಸಿಕೊಂಡವಳು, ಕಷ್ಟಪಟ್ಟು ದುಡಿದು ಸಮಾಜದಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಇರುವ ವಿದ್ಯಾರ್ಥಿ, ಕಷ್ಟವನ್ನು ಉಡಿಯಲ್ಲೇ ಇಟ್ಟುಕೊಂಡು, ಆಯುರ್ವೇದಿಕ್ ಸಾಧನೆ ಮಾಡಲು ವೈದ್ಯಕ್ಷೇತ್ರಕ್ಕೆ ಕಾಲಿಟ್ಟಿದ್ದು ಸಮಾಜಕ್ಕೆ ಏನಾದರೂ ಕೊಡುಗೆಯನ್ನು ನೀಡಬೇಕೆಂದು ಮನಟ್ಟಿನಲ್ಲಿ ಆಯುರ್ವೇದಿಕ್ ವಿಭಾಗದಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಪ್ರಯತ್ನಪಟ್ಟಿದ್ದಾಳೆ. ಮೊದಮೊದಲು ಮಗಳ ವೈದ್ಯಕೀಯ ಕಾಳಜಿ ನೋಡಿ ತಂದೆ ತಾಯಿಯಲ್ಲಿ ಆತಂಕ ಶುರುವಾಗಿತ್ತು, ಆದರೆ ಮಗಳ ಸಾಧನೆಯನ್ನ ಮೆಚ್ಚಿ ಇದೀಗ ಸಂತಸಪಟ್ಟಿದ್ದಾರೆ. ತಂದೆ ತಾಯಿಗಳಿಬ್ಬರು ಕೃಷಿ ಮತ್ತು ತೋಟಗಾರಿಕೆಯಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಅದಕ್ಕೆ ಸಹಕಾರ ನೀಡುವ ನಿಟ್ಟಿನಲ್ಲಿ ಅಜ್ಜ ನಾರಾಯಣ ಶೆಟ್ಟಿ ಮತ್ತು ಬೇಬಿ ಶೆಟ್ಟಿ ಕೃಷಿ ಕಾಯಕ ಹೈನುಗಾರಿಕೆಯನ್ನು ಮೊದಲಿನಿಂದಲೂ ಬದುಕಿನಲ್ಲಿ ಅಳವಡಿಸಿಕೊಂಡಿದ್ದಾರೆ. ಇವರು ಶೈಕ್ಷಣಿಕ ವಿದ್ಯಾಭ್ಯಾಸವನ್ನು
(ಕೀರ್ತಿಶೆಟ್ಟಿ) 1ರಿಂದ ಮತ್ತು 7ನೇ ತರಗತಿಯವರೆಗೆ ಬಿದ್ಕಲ್ ಕಟ್ಟೆ ಪ್ರಾಥಮಿಕ ಶಾಲೆಯಲ್ಲಿಯೂ, ತದನಂತರ 08 ರಿಂದ ಮತ್ತು 10ನೇ ತರಗತಿವರೆಗೆ ಬಿದ್ಕಲ್ ಕಟ್ಟೆಯ ಪ್ರೌಢಶಾಲೆಯಲ್ಲಿ ವ್ಯಾಸಂಗ ಮುಗಿಸಿ, ನಂತರ ಉನ್ನತ ವ್ಯಾಸಂಗಕ್ಕಾಗಿ ಮದರ್ ತೆರೇಸಾ ಪ್ರೌಢಶಾಲೆಯಲ್ಲಿ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ಮುಗಿಸಿರುತ್ತಾರೆ. ಅದೇ ರೀತಿ 2017 ಮತ್ತು 2018 ಸಾಲಿನಲ್ಲಿ ಪ್ರಾರಂಭಿಕ ಹಂತವಾಗಿ ಆಯುರ್ವೇದಿಕ್ ವೈದ್ಯಕೀಯ ವಿಭಾಗಕ್ಕೆ ಸೇರ್ಪಡೆಗೊಂಡಿರುವುದು, 2022 ರಲ್ಲಿ ತಮ್ಮ ಪೂರ್ಣ ವಿಭಾಗದ ವೈದ್ಯಕೀಯ ಕೋರ್ಸ್ ಮುಗಿಸಿರುತ್ತಾರೆ,2024 ರಲ್ಲಿ ಇತ್ತೀಚಿಗೆ ಆಯುರ್ವೇದಿಕ್ ವಿಭಾಗದಲ್ಲಿ ಗೌರವ ಪುರಸ್ಕಾರದ ಪದವಿ ನೀಡಿ ಶಿಕ್ಷಣ ಸಂಸ್ಥೆಯು ಗೌರವಿಸಲಾಯಿತು.

ಗೌರವ ಪುರಸ್ಕಾರ ನೀಡಿದ ಕ್ಷಣ :
ಮುನಿಯಾಲ್ ಇನ್ಸ್ಟಿಟ್ಯೂಟ್ ಆಯುರ್ವೇದ ಮೆಡಿಕಲ್ ಸೈನ್ಸ್,ಮಣಿಪಾಲ ( ಡಾ. ಯು. ಕೃಷ್ಣ ಮುನಿಯಾಲ್ ಮೆಮೋರಿಯಲ್ ಟ್ರಸ್ಟ್ ರಿ.)ಮಣಿಪಾಲ, ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ಬೆಂಗಳೂರು ಕರ್ನಾಟಕ, ಇವರು ಡಾ. ಕೀರ್ತಿ ಶೆಟ್ಟಿ ಇವರಿಗೆ ಬ್ಯಾಚುಲರ್ ಆಫ್ ಆಯುರ್ವೇದಿಕ್ ಮೆಡಿಸನ್ ಅಂಡ್ ಸರ್ಜರಿ (BAMS) ವಿಭಾಗದಲ್ಲಿ ಮಹತ್ತರವಾದ ಗೌರವ ಪುರಸ್ಕಾರ ನೀಡಿ ಗೌರವಿಸಿದೆ. ಇತ್ತೀಚಿಗೆ ಇವರಿಗೆ ಅಮ್ಮಣ್ಣಿ ರಾಮಣ್ಣ ಶೆಟ್ಟಿ ರಂಗಮಂದಿರ ಉಡುಪಿಯಲ್ಲಿ ಟ್ರಸ್ಟ್ನ ಅಧ್ಯಕ್ಷರಾದ ವಿಜಯ ಬಾನು ಶೆಟ್ಟಿ ಹಾಗೂ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷರಾದ ಮೋಹನ್ ಆಳ್ವ, ಆಯುರ್ವೇದಿಕ್ ಕಾಲೇಜಿನ ಪ್ರಿನ್ಸಿಪಾಲರಾದ ಶ್ರೀ ಸತ್ಯನಾರಾಯಣ ಭಟ್, ಹಾಗೂ ಇತರ ಗಣ್ಯರು, ವಿದ್ಯಾರ್ಥಿಗಳ ಸಮಸ್ತ ಪೋಷಕರು ಸಾರ್ವಜನಿಕರ ಉಪಸ್ಥಿತಿಯಲ್ಲಿ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು.

ಗೌರವ ಪುರಸ್ಕಾರದ ಪದವಿಯನ್ನು ನೀಡುತ್ತಿದ್ದಂತೆಯೇ ಮನೆಯಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು. ಊರವರು ಹಾಗೂ ಸಂಬಂಧಿಕರು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಅತಿ ಚಿಕ್ಕ ವಯಸ್ಸಿನಲ್ಲಿ ವೈದ್ಯಕೀಯ ಆಯುರ್ವೇದದ ವಿಭಾಗದಲ್ಲಿ ತನ್ನ ಸಾಧನೆಯನ್ನು ಇತರರಿಗೆ ಮಾದರಿಯಾಗಿ ತೋರ್ಪಡಿಸಿದ್ದಾಳೆ. ಆರೋಗ್ಯ ಕ್ಷೇತ್ರ ಮೇಲಿರುವ ಅಪಾರ ಆಸಕ್ತಿ, ಕಲಿಯುವಂತಹ ನಿಷ್ಠೆ ಇವೆಲ್ಲವೂ ಗೌರವ ಪುರಸ್ಕಾರ ದ ಆಯ್ಕೆ ಮೂಲಕ ಸಾಕ್ಷಿ ಆಯಿತು. ಕೀರ್ತಿ ಶೆಟ್ಟಿ ಎನ್ನುವ ವಿದ್ಯಾರ್ಥಿನಿಯ ಶೈಕ್ಷಣಿಕ ಬದುಕು ಉಜ್ಜಲವಾಗುವುದರೊಂದಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಮಹಾನ್ ಸಾಧನೆ ಮಾಡಲು ಹೊರಟಿರುವ ಇವಳ ಬದುಕು ಯಶಸ್ವಿಯಾಗುವುದರೊಂದಿಗೆ ಸಮಾಜದ ಇನ್ನಷ್ಟು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎನ್ನುವುದೇ ಪತ್ರಿಕೆಯ ಸದಾಶಯ. ಇವರಿಗೆ ಶುಭವನ್ನ ಹಾರೈಸಲು ಈ ಸಂಖ್ಯೆಗೆ ಕರೆ ಮಾಡಿ :97315 05543.