ಡೈಲಿ ವಾರ್ತೆ: 22/Sep/2024

ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ – ಕು. ಐಶಾನಿ ಶೆಟ್ಟಿ ಹಾವಂಜೆ

ಯುನಿವರ್ಸಲ್ ಯೋಗ ಸ್ಪೋರ್ಟ್ಸ್ ಫೆಡರೇಷನ್ ವತಿಯಿಂದ ದಿನಾಂಕ 17.09.2024 ರಂದು ಥೈಲ್ಯಾಂಡ್ ನ ಗ್ರ್ಯಾಂಡ್ ಪಲಾಜ್ಜೋನಲ್ಲಿ ನಡೆದ ಏಷ್ಯಾ ಪೆಸಿಫಿಕ್ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್ ಶಿಪ್ 2024 ಕಿರಿಯ ಬಾಲಕಿಯರ ವಿಭಾಗದ ಸ್ಪರ್ಧೆಯಲ್ಲಿ ಕು. ಐಶಾನಿ ಶೆಟ್ಟಿ ಹಾವಂಜೆ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಪಡೆದಿರುತ್ತಾರೆ.

ಇವರು ‘ನ್ಯಾಷನಲ್ ಹಿಲ್ ವೀವ್ ಪಬ್ಲಿಕ್ ಸ್ಕೂಲ್, ಬೆಂಗಳೂರು’ ಇಲ್ಲಿನ 3ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಉಮೇಶ್ ಶೆಟ್ಟಿ ವಂಡ್ಸೆ ಅಡಿಕೆಕೊಡ್ಲು ಹಾಗೂ ರಶ್ಮಿತಾ ಶೆಟ್ಟಿ ದಾಸಬೆಟ್ಟು ಹಾವಂಜೆ ದಂಪತಿಗಳ ಸುಪುತ್ರಿಯಾಗಿದ್ದಾರೆ.