ಡೈಲಿ ವಾರ್ತೆ: 23/Sep/2024
ಪಿ.ಎಂ.ಶ್ರೀ ಸ. ಹಿ. ಪ್ರಾ.ಶಾಲೆ ಕುಕ್ಕೆಹಳ್ಳಿಯಲ್ಲಿ ಪಿ.ಎಂ.ಶ್ರೀ ಯೋಜನೆಯ ಡಿಜಿಟಲ್ ಗ್ರಂಥಾಲಯ, ಹ್ಯಾಪಿ ಇಂಗ್ಲೀಷ್ ಕ್ಲಾಸ್ ಉದ್ಘಾಟನೆ ಹಾಗೂ ದಾನಿಗಳಿಗೆ ಸನ್ಮಾನ.
ಬ್ರಹ್ಮಾವರ: ಪಿ.ಎಂ.ಶ್ರೀ ಯೋಜನೆಯಡಿಯಲ್ಲಿ ಮಂಜೂರಾದ ಡಿಜಿಟಲ್ ಗ್ರಂಥಾಲಯ ಹಾಗೂ ಪಿ.ಎಂ.ಶ್ರೀ. ಯೋಜನೆಯ ಅನುದಾನದ ಸಹಾಯದಿಂದ ರಚಿಸಿದ ಹ್ಯಾಪಿ ಇಂಗ್ಲೀಷ್ ಕ್ಲಾಸ್ ಅನ್ನು ದಿನಾಂಕ 19.09.2024ರಂದು ಉದ್ಘಾಟಿಸಲಾಯಿತು.
ಶಾಲೆಯ ನಲಿ-ಕಲಿ ವಿದ್ಯಾರ್ಥಿಗಳಿಗೆ ರೌಂಡ್ ಟೇಬಲ್ ಗಳನ್ನು ಕೊಡುಗೆಯಾಗಿ ನೀಡಿದ ಲಯನ್ಸ್ ಮಿಡ್ ಟೌನ್ ಉಡುಪಿಯ ಲಯನ್ ಅನಂತ ಶೆಟ್ಟಿ . ಪಿಎಂ.ಶ್ರೀ ಶಾಲಾ ನಾಮ ಫಲಕ ವನ್ನು ದಿವಂಗತ ಸೋಮ ಮರಕಾಲ ಇವರ ಸ್ಮರಣಾರ್ಥ ಕೊಡುಗೆಯಾಗಿ ನೀಡಿದ ಇವರ ಕುಟುಂಬಸ್ಥರ ಪರವಾಗಿ ರಮೇಶ್ ಸುವರ್ಣ ಬಜೆ ಹಾಗೂ ರಾಜ್ಯ ಸರ್ಕಾರಿ ನೌಕರರ ಕ್ರೀಡಾ ಕೂಟದಲ್ಲಿ ‘ಚಕ್ರ’ ಎಸೆತದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಪದವೀಧರ ಸಹಶಿಕ್ಷಕಿ ಶ್ರೀಮತಿ ಅನುಷಾ .ಎಸ್.ಶೆಟ್ಟಿ ಇವರೆಲ್ಲರನ್ನು ಶಾಲಾ ಎಸ್.ಡಿ.ಎಂ.ಸಿ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ ಯ ಅಧ್ಯಕ್ಷರಾದ ದೇವೇಂದ್ರ ಕುಲಾಲ್ ಅವರು ವಹಿಸಿದ್ದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಜಯಶ್ರೀ ಪ್ರಭಾಕರ್ , ಸ್ಥಳೀಯ ಗ್ರಾ.ಪಂಚಾಯತ್ ಪ್ರತಿನಿಧಿ ಶಂಕರ್ ಸಾಲ್ಯಾನ್ , ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪ್ರಸಾದ್ ಹೆಗ್ಡೆ , ತಾಲೂಕು ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯ ಅಧ್ಯಕ್ಷರಾದ ವಿಶ್ವನಾಥ್ ಬೆಳ್ಳಂಪಳ್ಳಿ ಮತ್ತು ಗುಣಕರ ಹೆಗ್ಡೆ ಕುಕ್ಕೆಹಳ್ಳಿ , ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ಭಟ್ , ಸಿ.ಆರ್.ಪಿ ಶ್ರೀಮತಿ ಶಾಂತಾ ಹಾಗೂ ಎಸ್.ಡಿ.ಎಂ.ಸಿ ಯ ಎಲ್ಲಾ ಸದಸ್ಯರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕರಾದ ಶ್ರೀಮತಿ ಸರಸ್ವತಿ ಸ್ವಾಗತಿಸಿದರು ಸಹಶಿಕ್ಷಕರಾದ ಶ್ರೀಮತಿ ಅಶಾ ವಂದಿಸಿದರು . ದೈಹಿಕ ಶಿಕ್ಷಕರಾದ ಗಣೇಶ್ ಕಾರ್ಯಕ್ರಮ ನಿರೂಪಿಸಿದರು.