ಡೈಲಿ ವಾರ್ತೆ: 24/Sep/2024

ಅ. 9, 10 ರಂದು ಶಿರೂರು ಮುದ್ದುಮನೆ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿವತಿಯಿಂದ ನಮ್ಮೂರ ಸಂಭ್ರಮ

ಕೋಟ: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಶಿರೂರು ಮುದ್ದುಮನೆ ಇದರ ವತಿಯಿಂದ ದಿನಾಂಕ 09-10-2024 ಬುಧವಾರ ಹಾಗೂ ದಿನಾಂಕ 10-10-2024 ಗುರುವಾರ
ನಮ್ಮೂರ ಸಂಭ್ರಮ – 6, ಕಾರ್ಯಕ್ರಮ ನಡೆಯಲಿದೆ.

ದಿನಾಂಕ : 09-10-2024ನೇ ಬುಧವಾರ ಮೈರ್ಕೊಮೆಯಿಂದ ಶ್ರೀ ಶಾರದೆಯ ವಿಗ್ರಹವನ್ನು ಭಜನೆ, ವಿಶೇಷ ಚಂಡೆ ವಾದನದೊಂದಿಗೆ “ಪುರಪ್ರವೇಶ”

ಬೆಳಿಗ್ಗೆ ಗಂಟೆ 9.35ಕ್ಕೆ : ಶಾರದ ದೇವಿಯ ಪ್ರತಿಷ್ಠಾಪನೆ
ಬೆಳಿಗ್ಗೆ ಗಂಟೆ 10.00ಕ್ಕೆ: ಅಲಂಕಾರ ಪೂಜೆ
ಬೆಳಿಗ್ಗೆ ಗಂಟೆ 10.30ಕ್ಕೆ: ಸಾರ್ವಜನಿಕರಿಗೆ ಕ್ರೀಡಾ & ಸಾಂಸ್ಕೃತಿಕ ಸ್ಪರ್ಧೆ
ಮಧ್ಯಾಹ್ನ ಗಂಟೆ 12.30ಕ್ಕೆ: ಮಹಾಪೂಜೆ
ಸಂಜೆ 6.00ಕ್ಕೆ : ಸಾರ್ವಜನಿಕರಿಂದ ಸಾಂಸ್ಕೃತಿಕ ವೈಭವ
ಸಂಜೆ ಗಂಟೆ 7.00 ರಿಂದ : ಧಾರ್ಮಿಕ ಸಭಾ ಕಾರ್ಯಕ್ರಮ
ಶತಮಾನದ ಶಾಲೆಗೆ ಸೇವೆ ಸಲ್ಲಿಸಿದ ಗುರುಗಳಿಗೊಂದು ಧನ್ಯತಾ ಕಾರ್ಯಕ್ರಮ
ಶಿರೂರು ಸಿರಿ ಪ್ರತಿಭಾ ಪುರಸ್ಕಾರ
ಆಸರೆ – ವಿದ್ಯಾಸ್ಫೂರ್ತಿ
ಸನ್ಮಾನ: ಕು. ಅಕ್ಷತಾ ಜೆ. ಶೆಟ್ಟಿ, ಶಿರೂರು ಮಳಮನೆ ರಾಷ್ಟ್ರೀಯ ಯೋಗಪಟು ಹಾಗೂ ಶ್ರೀ ಸುಬ್ರಹ್ಮಣ್ಯ, ಶ್ರೀ ವಿಠಲ ಬಂದಕೇರಿ ಇವರಿಗೆ ಸನ್ಮಾನ
ರಾತ್ರಿ ಗಂಟೆ 8.30ಕ್ಕೆ
ಶಿರೂರು ನೃತ್ಯೋಲ್ಲಾಸ – 2024
ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆ ನಡೆಯಲಿದೆ.

ದಿನಾಂಕ : 10-10-2024ನೇ ಗುರುವಾರ
ಬೆಳಿಗ್ಗೆ ಗಂಟೆ 08.00ಕ್ಕೆ: ಸಾಮೂಹಿಕ ದುರ್ಗಾಹೋಮ
ಬೆಳಿಗ್ಗೆ ಗಂಟೆ 9.30ಕ್ಕೆ ಭಜನಾ ಕಾರ್ಯಕ್ರಮ:ಭಾಗವಹಿಸುವ ಭಜನಾ ತಂಡಗಳು
ಶ್ರೀ ಓಂಕಾರ ಭಜನಾ ಮಂಡಳಿ, ಕೋಟಂಬೈಲು ಕೊಕ್ಕರ್ಣೆ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ, ಶಿರೂರು ಮುದ್ದು ಮನೆ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ, ಶಿರೂರು ಅಬ್ಕಲ್‌ಮಕ್ಕಿ ಶ್ರೀ ಶಾರದೆ ಭಜನಾ ಮಂಡಳಿ, ಬಿಲ್ಲಾಡಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಮಧ್ಯಾಹ್ನ ಗಂಟೆ 12.00ಕ್ಕೆ
ಕಲಾಸ್ತುತಿ ಹವ್ಯಾಸಿ ಮಕ್ಕಳ ಕಲಾತಂಡ ಮಂದಾರ್ತಿ ಇವರಿಂದ ಕುಂದ ಗನ್ನಡದ ಹಾಸ್ಯಮಯಾ ನಗೆ ನಾಟಕ ‘ನಮ್ ಗೋಳು ಕೆಂಬರ್ಯಾರ್?’
ನಡೆಯಲಿದೆ.
ಮಧ್ಯಾಹ್ನ ಗಂಟೆ 1.00ಕ್ಕೆ “ಮಹಾ ಅನ್ನಸಂತರ್ಪಣೆ”

ಸಂಜೆ ಗಂಟೆ 4.00ಕ್ಕೆ
ಅದ್ದೂರಿಯಾಗಿ ಶ್ರೀ ಶಾರದ ದೇವಿಯ ವಿಗ್ರಹದ ವಿಸರ್ಜನಾ ಮೆರವಣಿಗೆ ನಡೆಯಲಿದೆ ಎಂದು ಆಡಳಿತ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ
.