


ಡೈಲಿ ವಾರ್ತೆ: 07/OCT/2024


ಉಡುಪಿ: ವಾಹನದಿಂದ ತೈಲ ಸೋರಿಕೆ – ಹಲವು ದ್ವಿಚಕ್ರಗಳು ವಾಹನಗಳು ಪಲ್ಟಿ, ಅಗ್ನಿ ಶಾಮಕ ದಳ ಕಾರ್ಯಾಚರಣೆ

ಉಡುಪಿ: ವಾಹವೊಂದರಿಂದ ತೈಲ ಸೋರಿಕೆಯಾದ ಕಾರಣ ದ್ವಿಚಕ್ರ ವಾಹನಗಳು ಪಲ್ಟಿ ಹೊಡೆದ ಘಟನೆ ಉಡುಪಿ ಸಿಟಿ ಬಸ್ಸು ನಿಲ್ದಾಣದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವರದಿಯಾಗಿದೆ.
ಪ್ರತ್ಯಕ್ಷದರ್ಶಿಗಳ ಮಾಹಿತಿಯ ಪ್ರಕಾರ ಮೂರರಿಂದ ನಾಲ್ಕು ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಬಿದ್ದಿದೆ.
ರಾಜ್ ಟವರ್ ಎದುರು ಘಟನೆ ಸಂಭವಿಸಿದ್ದು ಮಲ್ಪೆ ಅಗ್ನಿ ಶಾಮಕ ದಳದ ಅಗ್ನಿ ಸಿಬ್ಬಂದಿಗಳು ರಸ್ತೆಗೆ ನೀರು ಸಿಂಪಡಿಸಿ ಸ್ವಚ್ಛಗೊಳಿಸಿದರು. ಕಾರ್ಯಾಚಾರಣೆಯಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿಗಳಾದ ಪದ್ಮನಾಭ ಕಂಚಾನ್, ದಿವಾಕರ್, ಅರುಣ್ ಭಾಗವಹಿಸಿದ್ದರು. ಸಮಾಜ ಸೇವಕ ನಿತ್ಯನಂದ ಒಳಕಾಡು ಸಹಕರಿಸಿದರು.
ಈ ಸಂದರ್ಭದಲ್ಲಿ ಟ್ರಾಫಿಕ್ ಪೊಲೀಸ್ ದುಂಡಪ್ಪ ಮಾದರ್ ವಾಹನ ನಿಯಂತ್ರಿಸಿದರು.