ಡೈಲಿ ವಾರ್ತೆ: 21/OCT/2024

ಧಾರವಾಡದಲ್ಲಿ ಪಂ. ಪುಟ್ಟರಾಜ ಸಾಹಿತ್ಯೋತ್ಸವ-2024

ಸರಕಾರವೇ ಪಂ. ಪುಟ್ಟರಾಜರ ಸಮಗ್ರ ಸಾಹಿತ್ಯ ಸಂಪುಟ ಹೊರತರಲಿ -ಚನ್ನವೀರಶ್ರೀ
ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರು, ಕನ್ನಡ, ಹಿಂದಿ ಮತ್ತು ಸಂಸ್ಕೃತದಲ್ಲಿ ವಿವಿಧ ಪ್ರಕಾರದ ಸಾಹಿತ್ಯ ರಚಿಸಿದ್ದು, ಸರಕಾರವೇ ಪೂಜ್ಯರ ಸಮಗ್ರ ಸಾಹಿತ್ಯ ಸಂಪುಟ ಪ್ರಕಟಿಸಿ ಅವರ ಸಾಹಿತ್ಯ, ಜನ ಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡಲಿ ಎಂದು ಕಡಣಿ ಸಂಸ್ಥಾನ ಹಿರೇಮಠದ ವೇ. ಚನ್ನವೀರ ಸ್ವಾಮಿಗಳು ಗದಗ ಇವರು ಸರಕಾರಕ್ಕೆ ಒತ್ತಾಯಿಸಿದರು. ಅವರು ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಗದಗ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ೨೦ ಅಕ್ಟೋಬರ್ ೨೦೨೪ ರಂದು ಧಾರವಾಡದ ರಂಗಾಯಣದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಪಂ. ಪುಟ್ಟರಾಜ ಸಾಹಿತ್ಯೋತ್ಸವ-೨೪ ಸಮಾರಂಭದ ಉದ್ಘಾಟನೆ ಮಾಡಿ ಮಾತನಾಡಿದ ಶ್ರೀಗಳು, ಮುಂದುವರೆದು ಮಾತನಾಡುತ್ತ, ಪಂ. ಪುಟ್ಟರಾಜರ ಹುಟ್ಟು ಹಬ್ಬವನ್ನು ಸರಕಾರದಿಂದ ಆಚರಿಸಬೇಕು ಎಂದು ಸೇವಾ ಸಮಿತಿಯಿಂದ ಸರಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಿದ್ದು, ಸರಕಾರ ಸ್ಪಂದಿಸಿ ಪೂಜ್ಯರ ಹುಟ್ಟುಹಬ್ಬ ಆಚರಣೆಗೆ ಚಾಲನೆ ನೀಡಲಿ ಎಂದು ಹೇಳಿದರು.


ಕ.ವಿ.ವಿ.ಲಲಿತಕಲಾ ಹಾಗೂ ಸಂಗೀತ ಮಹಾವಿದ್ಯಾಲಯದ ಸಹಾಯಕ ಉಪನ್ಯಾಸಕರಾದ, ಸಾಹಿತಿ ಡಾ, ಎ. ಎಲ್. ದೇಸಾಯಿ, ದಾರವಾಡ ಇವರು ಪೂಜ್ಯರ ಸಮಗ್ರ ಸಾಹಿತ್ಯ ಸೇವೆಯ ಕುರಿತು ಮಾತನಾಡಿ ಪಂ. ಪಂಚಾಕ್ಷರಿ ಗವಾಯಿಗಳವರ ನಾಟಕ ರಂಗಾಯಣದ ಮೂಲಕ ಪ್ರಯೋಗವಾಗಬೇಕು ಈ ಕೆಲಸ ಧಾರವಾಡದ ರಂಗಾಯಣದ ನಿರ್ದೇಶಕರರಾದ ರಾಜು ತಾಳಿಕೋಟಿ ಪ್ರಯತ್ನ ಮಾಡಬೇಕು ಎಂದು ವಿನಂತಿಸಿಕೊಂಡರು.
ರಂಗಾಯಣದ ನಿರ್ದೇಶಕ ಡಾ. ರಾಜು ತಾಳಿಕೊಟಿಯವರು ಪೂಜ್ಯ ಗುರು ಪುಟ್ಟರಾಜ ಕವಿಗವಾಯಿಗಳವರೊಂದಿಗಿನ ಒಡನಾಟ ಮತ್ತು ಪೂಜ್ಯರ ವೃತ್ತಿರಂಗಭೂಮಿಯ ಕುರಿತಾದ ಕಾಳಜಿ ಮತ್ತು ತಮ್ಮ ವೃತ್ತಿ ಬದುಕಿನಲ್ಲಿ ಪೂಜ್ಯರ ಆರ್ಶೀವಾದ ಕುರಿತಾಗಿ ಭಾವತುಂಬಿ ಪೂಜ್ಯರನ್ನು ಸ್ಮರಸಿಕೊಂಡರು. ಮಾತನಾಡಿ
ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿಕೊಂಡಿದ್ದ ಮನ್ಸೂರಿನ ರೇವಣಸಿದ್ಧೇಶ್ವರ ಮಠದ ಪೂಜ್ಯಶ್ರೀ ಡಾ. ಬಸವರಾಜ ದೇವರು ಮಾತನಾಡಿ ಪೂಜ್ಯ ಗುರು ಪುಟ್ಟರಾಜರ ಒಡನಾಟದ ಸವಿ ನೆನಪು ಹಂಚಿಕೊಂಡು ಸೇವಾ ಸಮಿತಿಯ ಬೇಡಿಕೆಗೆ ನಾವು ಸಂಪೂರ್ಣ ಬೆಂಬಲಿಸುತ್ತೇವೆ ಮಾತ್ರವಲ್ಲದೇ, ಗುರು ಪುಟ್ಟರಾಜರಿಗೆ ಭಾರತ ರತ್ನ ಪ್ರಶಸ್ತಿಗೆ ಕರ್ನಾಟಕ ಸರಕಾರ ಸಿಫಾರಸು ಮಾಡಬೇಕು ಎಂದು ಹೇಳಿ ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಮತ್ತು ಅವಶ್ಯಕತೆ ಬಿದ್ದರೇ ಡಾ. ರಾಜು ತಾಳಿಕೋಟಿಯವರು ಮತ್ತು ನಾವೆಲ್ಲರು ಸೇರಿ ಮುಖ್ಯಮಂತ್ರಿಗಳಿಗೆ ಭೇಟಿ ಆಗೋಣ ಎಂದು ಹೇಳಿದರು. ಸೇವಾ ಸಮಿತಿಯ ಗುರು ಸೇವೆಗೆ ಮೆಚ್ಚುಗೆ ವ್ಯೆಕ್ತಪಡಿಸಿದರು.


ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಗೌರವ ಅಧ್ಯಕ್ಷರಾದ ಕೆಂಬಾವಿ ಸಂಸ್ಥಾನ ಹಿರೇಮಠದ ಶ್ರೀ ಷ. ಬ್ರ. ಚನ್ನಬಸವ ಶಿವಾಚಾರ್ಯ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿಕೊಂಡಿದ್ದರು. ಇದೇ ಸಂದರ್ಭದಲ್ಲಿ ‘ರಾಜ್ಯ ಸಂಗೀತ ವಿದ್ವಾನ’ ಪಂ. ಬಸವರಾಜ ಹೆಡಿಗ್ಗೊಂಡ, ರಂಗಾಯಣದ ನೂತನ ನಿರ್ದೇಶಕರರಾದ ರಾಜು ತಾಳಿಕೋಟಿ ಇವರುಗಳಿಗೆ ಸನ್ಮಾನಿಸಲಾಯಿತು. ಎಸ್. ಎಸ್. ಪಾಟೀಲ್ ಸಂಪಾದಕರು: ವಿಶ್ವದರ್ಶನ ದಿನಪತ್ರಿಕೆ, ಹುಬ್ಬಳ್ಳಿ ವೇದಿಕೆಯಲ್ಲಿ ಇದ್ದರು.


ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ೨೦೨೪ ನೆಯ ‘ವರ್ಷದ ಶೇಷ್ಠ ಕೃತಿ ರತ್ನ ಪ್ರಶಸ್ತಿ’ ಗೆ ಭಾಜನ ಕೃತಿ ಕರ್ತರಾದ ಭಾತ್ರಂಬದ ಪೂಜ್ಯ ಜಗದ್ಗುರು ಶಿವಯೋಗೀಶ್ವರ ಮಹಾಸ್ವಾಮಿಗಳ ಬೆಳಗಾವಿಯ, ಡಾ. ಪಿ. ನಾಗರಾಜ, ಚಿಂಚನಸೂರನ ಶಿವಪುತ್ರ ಕಂಠಿ, ಕಲಬುರ್ಗಿಯ ಡಾ. ಅಂಬುಜಾ ಎನ್. ಮಳಖೇಡಕರ, ಬಾದಾಮಿ ಸುರೇಶ ಅರಳಿಮರ, ಹುಬ್ಬಳಿಯ ಪದ್ಮಜಾ ಜಯತೀರ್ಥ ಉಮರ್ಜಿ, ಧಾರವಾಡದ ಡಾ. ಈರಣ್ಣ ಇಂಜಗನೇರಿ, ಭೈರಾಪೂರದ ಯಲ್ಲಪ್ಪ ಮ. ಹರ್ನಾಳಗಿ, ಧಾರವಾಡದ ಸರಸ್ವತಿ ರಾ. ಬೋಸಲೆ, ಧಾರವಾಡದ ಡಾ. ವೀಣಾ ಸಂಕನಗೌಡರ ಇವರುಗಳಿಗೆ ಪ್ರಶಸ್ತಿ ಪ್ರದಾನಮಾಡಲಾಯಿತು. ಡಾ. ಸುರೇಶ ಕಳಸನ್ನವರ ಸ್ವಾಗತಿಸಿದರು, ಬಸವರಾಜ ಹಡಪದ ಕಾರ್ಯಕ್ರಮ ನಿರೂಪಣೆ ಮಾಡಿದರು.


ಮಧ್ಯಾಹ್ನದ ಭೋಜನದ ವಿರಾಮದ ನಂತರ ಶ್ರೀ ಎಂ. ಪಿ. ಎಂ. ಕೊಟ್ರಯ್ಯ ನಿವೃತ್ತ ಪ್ರಾಧ್ಯಾಪಕರು, ಹೂವಿನ ಹಡಗಲಿ ಇವರ ಅಧ್ಯಕ್ಷತೆಯಲ್ಲಿ ಕವಿ ಗೋಷ್ಠಿ ಎರ್ಪಡಿಸಲಾಗಿತ್ತು. ಕಸ್ತೂರಿ ಗಂಜಿಗಟ್ಟಿ. ಪ್ರೊ. ಪ್ರವೀಣ್ ಕುಲಕರ್ಣಿ ಜಮಖಂಡಿ. ವನಶ್ರೀ ಶಿಂಧೆ, ಶಿವರಾಜ ಅರಳಿ, ಮೇಲ್ಮರಿ. ಜಯಶ್ರೀ ಹಿರೇಮಠ, ಧಾರವಾಡ. ಬಸವರಾಜ ಎನ್ ಹಡಪದ, ಶಾಂತಾ ಹೆಚ್, ಬಸವಂತಿ ಇಂಗಳಳ್ಳಿ ಇವರುಗಳು ಪೂಜ್ಯರ ಕುರಿತು ರಚಿಸಿದ ಸ್ವರಚಿತ ಕವನ ವಾಚನ ಮಾಡಿದರು.ಸಂಜೆ ನಡೆದ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಜಗದ್ಗುರು ಶಿವಯೋಗೀಶ್ವರ ಮಹಾ ಸ್ವಾಮಿಗಳು ಜಗದ್ಗುರು ನಿರಂಜನ ಸಂಸ್ಥಾನ ಮಠ ಭಾತಂಬ್ರಾ ಬೀದರ ಇವರು ವಹಿಸಿಕೊಂಡಿದ್ದರು. ಪ್ರೊ. ಸಿದ್ಧಲಿಂಗೇಶ ಉ. ಸಜ್ಜನಶೆಟ್ಟರ, ಗದಗ ಇವರು ಕನ್ನಡ ಸಾಹಿತ್ಯ ಪರಂಪರೆ ಕುರಿತು ಮಾತನಾಡಿದರು ಸೌಮ್ಯ ಸುರೇಶ ಧಾರವಾಡ ಜಿಲ್ಲಾ ಅಧ್ಯಕ್ಷರು, ಡಾ. ಪಂ. ಪುಟ್ಟರಾಜ ಸೇವಾ ಸಮಿತಿ, ಮಹಿಳಾ ಘಟಕ, ದಾವಣಗೆರೆ ಇವರುಗಳು ವೇದಿಕೆಯಲ್ಲಿ ಇದ್ದರು.
ಇದೇ ಸಂದರ್ಭದಲ್ಲಿ ತೀರ್ಪುಗಾರರ ಮೆಚ್ಚಿನ ಕೃತಿ ಅಭಿನಂದನಾ ಪ್ರಶಸ್ತಿ’ಗೆ ಭಾಜನರಾದ ಮಹಾಂತೇಶ ಕುಂಬಾರ (ಎಮ್ಮಾರ್ಕೆ) ರನ್ನ ಬೆಳಗಲಿ, ಎ. ಆರ್. ಪಂಪಣ್ಣ, ವಟ್ಟಮ್ಮನಹಳ್ಳಿ, ರೂಪಾದೇವಿ ಬಂಗಾರ, ಸೇಡಂ, ಮಾಲತೇಶ ಅಂಗೂರ, ಹಾವೇರಿ, ಶ್ರೀಮತಿ ರಂಜಿತಾ ಮಹಾಜನ ಮತ್ತು ವಿನುತ ಹಂಚಿನಮನಿ ಧಾರವಾಡ, ಇವರುಗಳಿಗೆ ಅಭಿನಂದಿಸಲಾಯಿತು.


‘ವಿದುಷಿ’ ರೋಹಿಣಿ ಇಮಾರತಿ ಧಾರವಾಡ, ‘ವಿದುಷಿ’ ಡಾ. ಸುಮಾ ಹಡಪದ ಹಳಿಯಾಳ, ಧಾರವಾಡ ‘ವಿದುಷಿ’ ವಿಜಯಲಕ್ಷ್ಮಿ ಬಸಯ್ಯ ಬನ್ನಿಗೋಳಮಠ, ಹುಬ್ಬಳ್ಳಿ ಇವರುಗಳಿಗೆ ಪುಟ್ಟರಾಜ ಸಂಗೀತ/ನೃತ್ಯ ಸೇವಾ ಶ್ರೀ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಳಗಿನ ಮತ್ತು ಸಂಜೆ ಸಭಾ ಕಾರ್ಯಕ್ರಮದ ನಂತರ ಭೂಮಿಕಾ ಮಹಿಳಾ ಸಮಾಜ, ಗದಗ. ಅಭಿವ್ಯಕ್ತಿ ಕಲಾ ತಂಡ ಧಾರವಾಡ. ಶ್ರೀ ಗಣೇಶ ನೃತ್ಯ ಶಾಲೆ ಧಾರವಾಡ. ಪಂ. ಪುಟ್ಟರಾಜ ಸಂಗೀತ ಶಾಲೆ ಧಾರವಾಡ. ಕಲಾ ವೈಭವ ಸಂಸ್ಥೆ, ಲಕ್ಷ್ಮೇಶ್ವರ . ಬೆಳ್ಳಿಚುಕ್ಕಿ ಸಂಸ್ಕೃತಿಕ ಅಕಾಡೆಮಿ, ಬೆಳಗಾವಿ. ನಾಟ್ಯ ಲೋಕ ಕಲೆ ಹಾಗೂ ಸಾಂಸ್ಕೃತಿಕ ಸಂಸ್ಥೆ ಹುಬ್ಬಳ್ಳಿ. ವಿಶಾರದ ನೃತ್ಯಾಲಯ ಹುಬ್ಬಳ್ಳಿ. ಸ್ವರಾಮೃತ ಸಾಂಸ್ಕೃತಿ ಸಂಸ್ಥೆ ಮುಂಡರಗಿ. ಅಖಿಲ ಭಾರತ ಕನ್ನಡ ಮಕ್ಕಳ ಮನೆ, ಗದಗ ತಂಡಗಳಿಂದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳು ನಡೆದವು.