ಡೈಲಿ ವಾರ್ತೆ: 04/NOV/2024
ರಾಜ್ಯೋತ್ಸವದಂದು ಮಾತ್ರ ಕನ್ನಡ ಸೀಮಿತವಾಗಿರಬಾರದು.- ಶಾಸಕ ಕಿರಣ್ ಕೊಡ್ಗಿ
ಕುಂದಾಪುರ: ನ:02 ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ರಥೋತ್ಸವ ಹಾಗೂ ಎರಡನೇ ದಿವಸದ ಸಾಂಸ್ಕೃತಿಕ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿಯವರು ಭಾಗವಹಿಸಿ
ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜನರಿಗೆ ಮನವರಿಕೆಯಾಗಬೇಕು ಎನ್ನುವ ದೃಷ್ಟಿಯಲ್ಲಿ ಈ ಕಾರ್ಯಕ್ರಮ ಇದು ಕೇವಲ ರಾಜ್ಯೋತ್ಸವ ದಿನದಂದು ಮಾತ್ರ ಕನ್ನಡ ಸೀಮಿತವಾದರೆ ಕನ್ನಡ ಬೆಳೆಯಲು ಕಷ್ಟ.
ಅದರ ಉಳಿವಿಗೋಸ್ಕರ ಒಂದು ವಾರ ಕಾಲ ಕಲಾಕ್ಷೇತ್ರ ಕುಂದಾಪುರ ಇದನ್ನು ಸಂಘಟಿಸಿದ್ದು ನಿಜವಾಗಲೂ ಶ್ಲಾಘನೀಯ ವಿಚಾರ, ಮುಂದೆ ಕೂಡ ಇಂತಹ ಕಾರ್ಯಕ್ರಮ ನೆರವಿರುವಂತಾಗಲಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಇದರ ಅಧ್ಯಕ್ಷರಾದ ಬಿ.ಕಿಶೋರ್ ಕುಮಾರ್ ಕುಂದಾಪುರ ವಹಿಸಿದರು
ಸದ್ರಿ ಈ ಕಾರ್ಯಕ್ರಮದಲ್ಲಿ ವಿ.ನಾಗೇಂದ್ರ ಪ್ರಸಾದ್ ಖ್ಯಾತ ಕನ್ನಡ ಚಲನಚಿತ್ರದ ಸಾಹಿತಿ, ದಿನೇಶ್ ಕುಂದಾಪುರ ಉದ್ಯಮಿ, ಜಗದೀಶ್ ಶೆಟ್ಟಿ ಕುದ್ರಗೋಡು ಉದ್ಯಮಿ, ಸತೀಶ್ ಮುಳ್ಳುಗುಡ್ಡೆ ಧ್ವನಿ ಬೆಳಕು ಸಂಘಟನೆಯ ಅಧ್ಯಕ್ಷರು ಕುಂದಾಪುರ, ಗಿರೀಶ್ ಜೆ.ಕೆ. ಪುರಸಭೆಯ ಸದಸ್ಯರು ಕುಂದಾಪುರ, ಉಪಸ್ಥಿತರಿದ್ದರು.
ಶ್ರೀಧರ್ ಸುವರ್ಣ ಸ್ವಾಗತಿಸಿದರು
ರಾಜೇಶ್ ಕಾವೇರಿ ಕಾರ್ಯಕ್ರಮವನ್ನು ನಿರೂಪಿಸಿದರು.