ಡೈಲಿ ವಾರ್ತೆ: 04/NOV/2024

ಡಾ. ಪ್ರಕಾಶ್ ತೋಳಾರ್ ಅವರಿಗೆ ವರುಣತೀರ್ಥ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಕೋಟ: ಇಲ್ಲಿನ ವರುಣತೀರ್ಥ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ನ. 3 ರ ಭಾನುವಾರ ಕೋಟ ವರುಣ ತೀರ್ಥ ಕೆರೆಯ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕೋಟದ ಗೀತಾಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ ಕುಂದರ್
ಮಾತನಾಡಿ ವರುಣತೀರ್ಥ ವೇದಿಕೆಯ ಯುವಕರು ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು ಎನ್ನುವ ಉದ್ದೇಶದಿಂದ “ನಿರಂತರ” ಎನ್ನುವ ಹೆಸರನ್ನು ಇಟ್ಟು ನಡೆಸುತ್ತ ಬಂದಿದ್ದಾರೆ.

1956 ರಲ್ಲಿ ಏಕೀಕರಣವಾಗಿ ಮೈಸೂರು ಅಂತ ನಮ್ಮ ಕರ್ನಾಟಕ ರಾಜ್ಯಕ್ಕೆ ಹೆಸರು ಬಂತು. ನಂತರ 1973 ರಲ್ಲಿ ಅದು ಕರ್ನಾಟಕ ಅಂತ ಮರು ನಾಮಕರಣವಾಗಿದೆ.
ಅಂದಿನಿಂದ ಕರ್ನಾಟಕ ಎಂದು ಹೆಸರು ಇಟ್ಟು ಇಂದಿಗೆ 50ನೇ ವರ್ಷ ತುಂಬಿದೆ. ಸುವರ್ಣ ಕರ್ನಾಟಕದ ನೆನಪಿನಲ್ಲಿ ಸರಕಾರವು ಹಲವು ಸಾಧಕರನ್ನು ಗುರುತಿಸಿ ಸನ್ಮಾನ ಮಾಡಿದ್ದಾರೆ. ನಿಜವಾಗಿಯೂ ಸರಕಾರದ ನೆಲೆಯಲ್ಲಿ ಒಂದು ಅರ್ಥಪೂರ್ಣವಾದ ಕಾರ್ಯಕ್ರಮವನ್ನು ಮಾಡಿದ್ದಾರೆ. ಅದೇ ರೀತಿ ನಮ್ಮ ವರುಣತೀರ್ಥ ವೇದಿಕೆಯ ಯುವಕರು ದ್ಯೇಯ,ದೋರಣೆ ಮುಂದಿಟ್ಟುಕೊಂಡು ಒಳ್ಳೆಯ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.

ಡಾ. ಎಚ್. ಅಶೋಕ್ ಪ್ರಾಸ್ತಾವಿಕವಾಗಿ ಮಾತನಾಡಿ ಕೋಟ ವರುಣತೀರ್ಥ ವೇದಿಕೆಯ ನಮ್ಮ ಉತ್ಸಾಹಿ ಯುವಕರ ತಂಡವು ಸುಮಾರು 25 ವರ್ಷದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಾ ಬಂದಿದ್ದಾರೆ.
ಈ ನಮ್ಮ ಕಾರ್ಯಕ್ರಮದ ಮುಖ್ಯ ಉದ್ದೇಶ ಸ್ಥಳೀಯ ಪ್ರತಿಭೆಗಳನ್ನು ಗುರುತಿಸುವುದು.
ನಾವು ಮೊದಲು ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಗೌರವಿಸಿದರೆ ನಮ್ಮ ಊರಿಗೂ ಹೆಮ್ಮೆ, ನಮ್ಮ ಪರಿಸರಕ್ಕೂ ಒಂದು ಗೌರವ ಎನ್ನುವ ಒಂದೇ ಒಂದು ಉದ್ದೇಶದಿಂದ ಈ ರೀತಿ ಸ್ಥಳೀಯ ಪ್ರತಿಭೆಗಳನ್ನು ಗೌರವಿಸುತ್ತಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವರುಣತೀರ್ಥ ವೇದಿಕೆಯ ಅಧ್ಯಕ್ಷರ ಉದಯ ದೇವಾಡಿಗ ವಹಿಸಿದ್ದರು.

ಇದೇ ಸಂದರ್ಭ ವರುಣತೀರ್ಥ ರಾಜ್ಯೋತ್ಸವ ಪ್ರಶಸ್ತಿಯನ್ನು ಖ್ಯಾತ ಮನೋ ವೈದ್ಯರ ಡಾ. ಪ್ರಕಾಶ ತೋಳಾರ್ ಅವರಿಗೆ ಪ್ರದಾನ ಮಾಡಲಾಯಿತು.

ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರಿಗೆ ವಿಶೇಷ ಗೌರವ ಅಭಿನಂದನಾ ಪುರಸ್ಕಾರ ನೀಡಲಾಯಿತು.

ಸಮಾಜ ಸೇವಕ ಜೇಸಿ ದಿನೇಶ್ ಬಾಂಧವ್ಯ ಸಾಸ್ತಾನ, ಹಿರಿಯ ಕೃಷಿಕ ಕೋಟ ಒಳಮಾಡು ಸೋಮಣ್ಣ, ಸುವರ್ಣ ಸಂಭ್ರಮದ ಮಕ್ಕಳ ಮೇಳ ಸಾಲಿಗ್ರಾಮ ಇದರ ವ್ಯವಸ್ಥಾಪಕ ಸುಜಯಿಂದ್ರ ಹಂದೆ ಹಾಗೂ ತುಳುಸಿ ಕುಣಿತದ ಗುಂಡು ಪೂಜಾರಿ ಅವರಿಗೆ ಗೌರವ ಅಭಿನಂದನಾ ಪುರಸ್ಕಾರ ನೀಡಲಾಯಿತು.

ಉಪನ್ಯಾಸಕ ಸದಾಶಿವ ಹೊಳ್ಳ ಹರ್ತಟ್ಟು, ಉದ್ಯಮಿ ಸುರೇಶ್ ಪ್ರಭು, ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಭರತ್ ಕುಮಾರ್ ಶೆಟ್ಟಿ, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರೆ, ಕೋಟ ಸಿ.ಎ. ಬ್ಯಾಂಕ್ ಅಧ್ಯಕ್ಷ ಡಾ. ಕೆ. ಕೃಷ್ಣ ಕಾಂಚನ್, ಮಣೂರು ಮಹಾಲಿಂಗೇಶ್ವರ ದೇವಾಲಯದ ಅಧ್ಯಕ್ಷ ಸತೀಶ್ ಎಚ್ ಕುಂದರ್, ಪ್ರಗತಿಪರ ಕೃಷಿಕ ಪಾರಂಪಳ್ಳಿ ರವೀಂದ್ರ ಐತಾಳ್, ರಮೇಶ್ ಪ್ರಭು ಕೋಟ, ಕುಶಾಲ್ ಶೆಟ್ಟಿ ಕೋಟ ಉಪಸ್ಥಿತರಿದ್ದರು.
ಚಂದ್ರ ಆಚಾರಿ ಕೋಟ ಸ್ವಾಗತಿಸಿದರು.
ಅಧ್ಯಾಪಕ ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಪ್ರಸಾದ್ ಬಿಲ್ಲವ ವಂದಿಸಿದರು. ನಂತರ ಉಡುಪಿ ಸನ್ನಿಧಿ ಕಲಾವಿದರಿಂದ ಮಂತ್ರದೇವತೆ ನಾಟಕ ಪ್ರದರ್ಶನಗೊಂಡಿತು.