ಡೈಲಿ ವಾರ್ತೆ: 07/NOV/2024
ಬಸ್ ಚಲಾಯಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ: ಬಿಎಂಟಿಸಿ ಚಾಲಕ ಮೃತ್ಯು
ಬೆಂಗಳೂರು: ಬಸ್ ಚಾಲನೆ ಮಾಡುತ್ತಿದ್ದ ವೇಳೆಯೇ ಬಿಎಂಟಿಸಿ ಬಸ್ ಚಾಲಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಇಲ್ಲಿನ ಬಿನ್ನಮಂಗಲದಲ್ಲಿ ನಡೆದಿದೆ.
ಹಾಸನ ನಿವಾಸಿ ಕಿರಣ್ ಕುಮಾರ್ (40) ಮೃತಪಟ್ಟಿರುವ ಬಿಎಂಟಿಸಿ ಚಾಲಕ ಎಂದು ಗುರುತಿಸಲಾಗಿದೆ.
ಬುಧವಾರ ನೆಲಮಂಗಲದಿಂದ ದಾಸನಪುರ ಘಟಕಕ್ಕೆ ಬರುತ್ತಿದ್ದ ವೇಳೆ ನೆಲಮಂಗಲದ ಬಿನ್ನಮಂಗಲ ಬಸ್ ನಿಲ್ದಾಣದ ಬಳಿ ತಲುಪಿದಾಗ ಕಿರಣ್ಕುಮಾರ್ಗೆ ಎದೆನೋವು ಕಾಣಿಸಿಕೊಂಡು ಹೃದಯಾಘಾತವಾಗಿದೆ ಎನ್ನಲಾಗಿದೆ.
ಚಾಲಕ ನಿಯಂತ್ರಣ ತಪ್ಪಿ ವಾಲಿದಾಗ ಕೂಡಲೇ ನಿರ್ವಾಹಕನ ಸಮಯಪ್ರಜ್ಞೆಯಿಂದ ಬಸ್ ಅಪಘಾತಕ್ಕೀಡಾಗುವುದನ್ನು ತಡೆದಿದ್ದಾರೆ.
ನಿರ್ವಾಹಕ ಓಬಳೇಶ್ ಧೈರ್ಯದಿಂದ ಮುಂದೆ ಹೋಗಿ ಕಿರಣ್ ಕುಮಾರ್ ರನ್ನು ಸೀಟಿನಿಂದ ಪಕ್ಕಕ್ಕೆ ಎಳೆದು ಕೂರಿಸಿ ನಂತರ ಬಸ್ ನಿಯಂತ್ರಣಕ್ಕೆ ತೆಗೆದುಕೊಂಡು ಬಸ್ ನಿಲ್ಲಿಸಿದರು. ಹೀಗಾಗಿ ಬಸ್ ನಲ್ಲಿದ್ದ ಪ್ರಯಾಣಿಕರು ನಿಟ್ಟಿಸಿರು ಬಿಡುವಂತಾಯಿತು. ನಂತರ ಓಬಳೇಶ್ ಕಿರಣ್ ಕುಮಾರ್ ರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಪರೀಕ್ಷಿಸಿದ ನಂತರ ಚಾಲಕ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಘೋಷಿಸಿದರು
ಈ ಸಂಬಂಧ ಬಿಎಂಟಿಸಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
.