ಡೈಲಿ ವಾರ್ತೆ: 09/NOV/2024
ದಕ್ಷಿಣ ಕನ್ನಡ: ದಾರಿ ವಿವಾದ – ಕತ್ತಿಯಿಂದ ಕಡಿದು ಪ್ರಗತಿಪರ ಕೃಷಿಕನ ಭೀಕರ ಕೊಲೆ!
ಉಪ್ಪಿನಂಗಡಿ: ದಾರಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಗತಿಪರ ಕೃಷಿಕರೋರ್ವರ ಅವರ ಸಂಬಂಧಿಕನೇ ರಾತ್ರಿ ಹೊತ್ತು ಕಾದು ಕುಳಿತು ಅಟ್ಟಾಡಿಸಿ ಕತ್ತಿಯಿಂದ ಭೀಕರವಾಗಿ ಕೊಲೆ ಮಾಡಿದ ಘಟನೆ ಶುಕ್ರವಾರ ರಾತ್ರಿ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಗೋಳಿತೊಟ್ಟು ಸಮೀಪದ ಆಲಂತಾಯ ಗ್ರಾಮದ ಪೆರ್ಲ ಎಂಬಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿ ಪೆರ್ಲ ನಿವಾಸಿ ಪ್ರಗತಿಪರ ಕೃಷಿಕ ವೆಂಕಪ್ಪ ಗೌಡರ ಪುತ್ರ ರಮೇಶ ಗೌಡ (50) ಎಂದು ಗುರುತಿಸಲಾಗಿದೆ.
ಕೊಲೆ ಆರೋಪಿ ರಮೇಶ್ ಗೌಡರ ಹತ್ತಿರದ ಸಂಬಂಧಿ ಪೆರ್ಲದ ಕಲ್ಲಂಡದ ಹರೀಶ್ (38) ಹಾಗೂ ಮತ್ತಿತರ ಇಬ್ಬರು ಸೇರಿ ಕೃತ್ಯ ನಡೆಸಿ ಪರಾರಿಯಾದ ಆರೋಪಿಗಳು.
ಘಟನೆ ವಿವರ: ರಮೇಶ ಗೌಡರ ಮನೆಯ ಬಳಿ ಹರೀಶನಿಗೆ ಸೇರಿದ ತೋಟವೊಂದಿದ್ದು. ಆ ತೋಟಕ್ಕೆ ರಮೇಶ ಗೌಡರ ಮನೆಯ ಬಳಿಯಿಂದ ದಾರಿಯಿದ್ದು. ಆ ದಾರಿಯ ವಿಷಯಕ್ಕೆ ಸಂಬಂಧಿಸಿ ಇವರಿಬ್ಬರೊಳಗೆ ಪದೇ ಪದೇ ಜಗಳ ನಡೆಯುತ್ತಿತ್ತು.
ನ. 8 ರ ಬೆಳಿಗ್ಗೆ ಕೂಡ ಜಗಳ ನಡೆದಿತ್ತು. ನಿನ್ನೆ ಶುಕ್ರವಾರ ರಾತ್ರಿ 7 ಗಂಟೆ ಸುಮಾರಿಗೆ ರಮೇಶ ಗೌಡ ಪೆರ್ಲ ದೇವಸ್ಥಾನದಲ್ಲಿ ನಡೆಯುವ ವಾರದ ಭಜನೆಗೆ ತನ್ನ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಮನೆಯಿಂದ ಸುಮಾರು 500 ಮೀಟರ್ ದೂರದಲ್ಲಿ ದೇವಸ್ಥಾನಕ್ಕೆ ತಿರುಗುವ ಜಾಗದಲ್ಲಿ ಆರೋಪಿ ಹರೀಶ್ ಮತ್ತಿಬ್ಬರು ಕಾದು ಕುಳಿತಿದ್ದು.
ಇವರ ಬೈಕ್ ಗೆ ಅಡ್ಡ ಹೋಗಿ ರಮೇಶ್ ಅವರಿಗೆ ಕತ್ತಿಯಿಂದ ಕಡಿದಿದ್ದಾರೆ.
ಈ ಸಂದರ್ಭ ಬೈಕ್ ಪಲ್ಟಿಯಾಗಿದ್ದು ಜೀವ ರಕ್ಷಣೆಗೆಂದು ಮತ್ತೊಂದು ದಾರಿಯಲ್ಲಿ ರಮೇಶ್ ಅವರು ಓಡಿ ಹೋಗಿದ್ದಾರೆ.
ಆಗ ಬೆನ್ನಟ್ಟಿದ ಆರೋಪಿಯು ಕುಸುಮ ಎಂಬವರ ಮನೆಯ ಸಮೀಪ ರಮೇಶ್ ಅವರನ್ನ ಭೀಕರವಾಗಿ ಕತ್ತಿಯಿಂದ ಕಡಿದು ಕೊಲೆ ಮಾಡಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧಿಕ್ಷಕ ಯತೀಶ್ ಎನ್., ಪುತ್ತೂರು ಡಿವೈ ಎಸ್ಪಿ ಅರುಣ್ ನಾಗೇಗೌಡ, ವೃತ್ತ ನಿರೀಕ್ಷಕ ರವಿ ಬಿ ಎಸ್, ಉಪ್ಪಿನಂಗಡಿ ಪೊಲೀಸ್ ಉಪನಿರೀಕ್ಷಕ ಅವಿನಾಶ್ ಗೌಡ, ಭೇಟಿ ನೀಡಿದ್ದು. ಮಹಜರು ಪ್ರಕ್ರಿಯೆ ನಡೆಸಿದರು.
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.