ಡೈಲಿ ವಾರ್ತೆ: 11/NOV/2024

ವರದಿ: ಅಬ್ದುಲ್ ರಶೀದ್ ಮಣಿಪಾಲ

ಮಣಿಪಾಲ: ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ರಿಕ್ಷಾ ಪಲ್ಟಿ – ಮೂವರು ವಿದ್ಯಾರ್ಥಿಗಳಿಗೆ ಗಾಯ

ಮಣಿಪಾಲ: ಶಾಲಾ ಮಕ್ಕಳನ್ನು ಸಂಜೆ ಮನೆಗೆ ಕರೆದುಕೊಂಡು ಹೋಗುತ್ತಿದ್ದ ಆಟೋ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ಮೂವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ನ. 11 ರಂದು ಸೋಮವಾರ ಕೆಳಪರ್ಕಳದ ಈಶ್ವರ ನಗರದ ನಗರಸಭೆಯ ಪಂಪಹೌಸ್ ಬಳಿ ಸಂಭವಿಸಿದೆ.

ಮಾಧವ ಕೃಪಾ ಶಾಲೆಯಿಂದ 8 ಮಂದಿ ಮಕ್ಕಳನ್ನು ಸಂಜೆ ಆಟೋ ರಿಕ್ಷಾದಲ್ಲಿ ಮನೆಗೆ ಕರೆದುಕೊಂಡು ಮಣಿಪಾಲದಿಂದ ಪರ್ಕಳದ ಕಡೆ ಹೋಗುತ್ತಿದ್ದ ವೇಳೆ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ.
ಇದರಿಂದ ರಿಕ್ಷಾದಲ್ಲಿದ್ದ ಮೂವರು ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೆ ರಿಕ್ಷಾ ಚಾಲಕ ಸಣ್ಣಪುಟ್ಟ ಗಾಯಗೊಂಡಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ. ಮಣಿಪಾಲ ಆಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಸದಸ್ಯರಾದ ಸಣ್ಣಕಿಬೆಟ್ಟು ಮಂಜು ನಾಯ್ಕ್ ಹಾಗೂ ದಿನೇಶ್ ಪೂಜಾರಿ ಈಶ್ವರನಗರ ಇವರು ಅಪಘಾತವಾದ ಆಟೋ ರಿಕ್ಷಾದಲ್ಲಿದ್ದ ಮಕ್ಕಳನ್ನು ಸುರಕ್ಷಿತಾವಾಗಿ ಹೆತ್ತವರ ಮಡಿಲು ಸೇರಿಸಿ ಸಾರ್ವಜನಿಕರ ಪ್ರೀತಿ ಪ್ರಶಂಸೆಗೆ ಪಾತ್ರರಾಗಿದರೆ.
ಸ್ಥಳಕ್ಕೆ ಮಣಿಪಾಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆಟೋ ರಿಕ್ಷಾದಲ್ಲಿ ಒಟ್ಟು 8 ಮಂದಿ ವಿದ್ಯಾರ್ಥಿಗಳು ಇದ್ದರು ಎನ್ನಲಾಗಿದೆ.
ಈ ಸ್ಥಳದಲ್ಲಿ ಪದೇಪದೇ ವಾಹನ ಅಪಘಾತವಾಗುತ್ತಿದ್ದು ಇದರಿಂದಾಗಿ ಸಾರ್ವಜನಿಕರು ರೋಸಿ ಹೋಗಿದ್ದಾರೆ.