ಡೈಲಿ ವಾರ್ತೆ: 14/NOV/2024

✍️ಓಂಕಾರ ಎಸ್. ವಿ. ತಾಳಗುಪ್ಪ

ಖಾಸಗಿ ಶಾಲೆಗೆ ಅಪ್ರಾಪ್ತ ಶಾಲಾ ಮಕ್ಕಳನ್ನು ಕಾನೂನು ಮೀರಿ ಕೊಂಡೋಯ್ಯುವ ಯಮ ಕಿಂಕರ ಸ್ವರೂಪದ ವಾಹನಗಳ ತಪಾಸಣೆ ನೆಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಶಿಸ್ತು ಕಾನೂನು ಕ್ರಮಕ್ಕೆ ಒತ್ತಾಯ

ಸಾಗರ: ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಸಾಗರ ಪಟ್ಟಣದಲ್ಲಿರುವ ಖಾಸಗಿ ಶಾಲೆಗಳ ಮತ್ತೊಂದು ಕರ್ಮಕಾಂಡ ಜಾಣ ಕುರುಡುತನ ನಡೆಯ ಬೆತ್ತಲೆ ಜಗತ್ತು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದೆ.

ಅಪ್ರಾಪ್ತ ಶಾಲಾ ಮಕ್ಕಳನ್ನು ಸಾಗರ ಪಟ್ಟಣದಲ್ಲಿರುವ ಖಾಸಗಿ ಶಾಲೆಗಳಿಗೆ ಕೊಂಡೋಯ್ಯುವ ಓಮ್ನಿ ಹಾಗೂ ಇನ್ನಿತರ ವಾಹನಗಳನ್ನೂ ಚಾಲನೆ ಮಾಡುವ ಎಷ್ಟೋ ಚಾಲಕರಿಗೆ ಡ್ರೈವಿಂಗ್ ಲೈಸನ್ಸ್ ಇಲ್ಲವೇ ಇಲ್ಲ, ಖಾಸಗಿ ಪರವಾನಿಗೆ ಹೊಂದಿದ್ದರೂ ಅಕ್ರಮವಾಗಿ ಬಾಡಿಗೆ ವಾಹನವನ್ನಾಗಿ ಚಾಲನೆ, ಎಷ್ಟೋ ಶಾಲಾ ವಾಹನಗಳು ಸಾರಿಗೆ ಪ್ರಾಧಿಕಾರದಿಂದ FITNESS CERTIFICATE ಹೊಂದಿಲ್ಲ,ಸಾರಿಗೆ ಪ್ರಾಧಿಕಾರದ ನಿಯಮಾವಳಿಗಳನ್ನೂ ಗಾಳಿಗೆ ತೂರಿ ಅತ್ಯಧಿಕ ಅಪ್ರಾಪ್ತ ಶಾಲಾ ಮಕ್ಕಳನ್ನು ಶಾಲಾ ಮಕ್ಕಳನ್ನು ತುಂಬಿಕೊಂಡು ಚಾಲನೆ, ಶಾಲಾ ವಾಹನದಲ್ಲಿ ಸುರಕ್ಷತಾ ಸಾಧನಗಳು ಕಣ್ಮರೆ
ಇನ್ನಾದರೂ ಸಾಗರ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದಿಂದ ಸಾಗರ ನಗರಸಭೆ ವ್ಯಾಪ್ತಿಯಿಂದ ಖಾಸಗಿ ಶಾಲೆಗಳಿಗೆ ಅಪ್ರಾಪ್ತ ಶಾಲಾ ಮಕ್ಕಳನ್ನು ನಿಯಮ ಬಾಹಿರವಾಗಿ ಕೊಂಡೋಯ್ಯುವ ಶಾಲಾ ವಾಹನ ಮಾಲೀಕರು ಹಾಗೂ ಖಾಸಗಿ ಶಾಲಾ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಮಕ್ಕಳ ಆಯೋಗ, ಕ್ಷೇತ್ರ ಶಿಕ್ಷಣಾಧಿಕಾರಿ, ಪೊಲೀಸ್ ಇಲಾಖೆ, ಸಾರಿಗೆ ಪ್ರಾಧಿಕಾರಗಳ ಅಧಿಕಾರಿಗಳು ಯಾವುದೇ ಮುಲಾಜಿಲ್ಲದೇ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಲಿ ಎಂಬುದೇ ಪ್ರಜ್ಞಾವಂತರ ಒಕ್ಕೊರಲ ಧ್ವನಿಯಾಗಿದೆ.