ಡೈಲಿ ವಾರ್ತೆ: 16/NOV/2024
ಶಿವಪುರ : ಮಕ್ಕಳ ದಿನಾಚರಣೆ ಮತ್ತು ಶಾಲೆಗೆ ವಿವಿಧ ಕೊಡುವಗಳ ಹಸ್ತಾಂತರ ಕಾರ್ಯಕ್ರಮ
✍🏻 ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ.
- ” ಶ್ರೀ ಗಂಗಾಧರೇಶ್ವರ ಚಾರಿಟೇಬಲ್ ಟ್ರಸ್ಟ್ (ರಿ.) ಉಡುಪಿ ಇವರಿಂದ ಉಚಿತ ಅನ್ನದಾನ ಸೇವೆ – ಮಕ್ಕಳ ಬೌದ್ಧಿಕ ಚಿಂತನೆ, ಕೌಶಲ್ಯ ಜ್ಞಾನದ ಮೌಲ್ಯ ಹೆಚ್ಚಿಸಲು ಇಂತಹ ಕಾರ್ಯಕ್ರಮ ಇಂದಿನ ವಿದ್ಯಾರ್ಥಿಗಳಿಗೆ ಪೂರಕ: ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ : ಶ್ರೀ ಭಾಸ್ಕರ್ ಹಿತನುಡಿ
ಕುಂದಾಪುರ. ಹೆಬ್ರಿ ಸಮೀಪದ ಶಿವಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚಿಗೆ ಮಕ್ಕಳ ದಿನಾಚರಣೆ ಮತ್ತು ವಿವಿಧ ಕೊಡುಗೆ ಹಸ್ತಾಂತರ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಶ್ರೀ ಗಂಗಾಧರೇಶ್ವರ ಚಾರಿಟೇಬಲ್ ಟ್ರಸ್ಟ್ ರಿ.ಉಡುಪಿ ಇವರಿಂದ ಅನ್ನದಾನ ಸೇವೆ ಕೂಡ ನಡೆಯಿತು. ಅದೇ ಸಂದರ್ಭದಲ್ಲಿ ಶಾಲೆಗೆ ವಿವಿಧ ಕೊಡುಗೆಗಳನ್ನು ಹಸ್ತಾಂತರ ಮಾಡಲಾಯಿತು.ಕಾರ್ಯಕ್ರಮದಲ್ಲಿ
ಶ್ರೀಮತಿ ಶೋಭಾ ಶೆಟ್ಟಿ ಅಧ್ಯಕ್ಷರು ಗ್ರಾಮ ಪಂಚಾಯತ್ ಶಿವಪುರ ಇವರು ಸಭಾಧ್ಯಕ್ಷತೆಯನ್ನು ವಹಿಸಿದರು. ಕಾರ್ಯಕ್ರಮದ ಉದ್ಘಾಟಕರಾಗಿ ಭಾಗವಹಿಸಿ, ಭಾಸ್ಕರ್ ಶ್ರೀ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರ್ಕಳ ಇವರು ಮಾತನಾಡುತ್ತಾ ” ಮಕ್ಕಳ ಬೌದ್ಧಿಕ ವಿಕಾಸಕ್ಕೆ ಇಂತಹ ಕಾರ್ಯಕ್ರಮಗಳು ಪೂರಕ, ದೈನಂದಿನವಾದ ಚಟುವಟಿಕೆಗಳಲ್ಲಿ ದಿನಾಚರಣೆಯ ಮಹತ್ವವನ್ನು ಮಕ್ಕಳಿಗೆ ಸಾರುವಲ್ಲಿ ಶಾಲೆ ಕಟ್ಟಿಬದ್ಧವಾಗಿದೆ. ಬೌದ್ಧಿಕ ಹಾಗೂ ಜ್ಞಾನ ನೆಲಗಟ್ಟಿನ ಸಿದ್ಧತೆ ಶಾಲೆಗಳಿಂದಲೇ ಪ್ರಾರಂಭವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಶಂಕರ್ ನಾರಾಯಣ ಕೊಡಂಚ, ನಿವೃತ್ತ ಮುಖ್ಯ ಶಿಕ್ಷಕರು, ಶ್ರೀ ಸುರೇಶ್ ಶೆಟ್ಟಿ ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತ್, ಶ್ರೀ ಶೇಖರ್ ಶೆಟ್ಟಿ ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತ್ ಶಿವಪುರ ಶ್ರೀ ಮೋಹನ್ ದಾಸ್ ನಾಯಕ್ ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತ್ ಶಿವಪುರ, ಸೀತಾ ನದಿ ಶ್ರೀ ವಿಠ್ಠಲ್ ಶೆಟ್ಟಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು ಉಡುಪಿ,, ಅಧ್ಯಕ್ಷರು ಶ್ರೀ ಗಂಗಾಧರೇಶ್ವರ ಚಾರಿಟೇಬಲ್ ಟ್ರಸ್ಟ್ ಉಡುಪಿ, ಶ್ರೀ ಎಂ. ಎನ್. ಕೊಟ್ಟಾರಿ ಅಧ್ಯಕ್ಷರು, ಗಂಗಾಧರೇಶ್ವರ ಚಾರಿಟೇಬಲ್ ಟ್ರಸ್ಟ್ ( ರಿ.)ಉಡುಪಿ, ಶ್ರೀ ಸಂತೋಷ್ ಶೆಟ್ಟಿ ಕ್ಷೇತ್ರ ಸಮನ್ವಯಾಧಿಕಾರಿಗಳು ಕಾರ್ಕಳ, ಶ್ರೀ ಲಕ್ಷ್ಮೀನಾರಾಯಣ ನಾಯಕ್, ಉದ್ಯಮಿಗಳು ಕನ್ಯಾನ, ರವಿಚಂದ್ರ ಕಾರಂತ್, ದೈಹಿಕ ಶಿಕ್ಷಕ ಪರಿವೀಕ್ಷಣಾಧಿಕಾರಿಗಳು ಕಾರ್ಕಳ, ಶ್ರೀ ರಾಘವೇಂದ್ರ ಪೂಜಾರಿ ಅಧ್ಯಕ್ಷರು ಎಸ್. ಡಿ ಎಂ. ಸಿ, ಶ್ರೀಮತಿ ಸುಮಿತ್ರ ನಾಯಕ್ ಸದಸ್ಯರು ಗ್ರಾಮ ಪಂಚಾಯತ್ ಶಿವಪುರ, ಶ್ರೀ ಮಹಾಬಲೇಶ್ವರ ಅಡಿಗ, ಶಿವಪುರ ಹಾಗೂ ಶಾಲಾ ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶ್ರೀ ಗಂಗಾಧರೇಶ್ವರ ಚಾರಿಟೇಬಲ್ ಟ್ರಸ್ಟ್ ಉಡುಪಿ ಇವರ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಬೃಹತ್ ಅನ್ನದಾನ ಸೇವೆಯನ್ನ ಕೊಡುಗೆಯಾಗಿ ನೀಡಲಾಯಿತು. ಟ್ರಸ್ಟ್ ನ ಉಪಾಧ್ಯಕ್ಷರಾದ ಶ್ರೀ ಚಂದ್ರ ಬೋವಿ, ಕಾರ್ಯದರ್ಶಿಗಳಾದ ಶ್ರೀ ಸತೀಶ್ ಎಚ್. ಎನ್, ಕೋಶಾಧಿಕಾರಿ ಶ್ರೀ ಸುರೇಶ್ ಕುಲಾಲ್, ಸದಸ್ಯರಾದ ಶ್ರೀ ಅಣ್ಣಪ್ಪ ಕುಲಾಲ್ ಹೆಬ್ರಿ, ಶ್ರೀ ಜಯರಾಮ್ ಪೂಜಾರಿ, ಶ್ರೀಮತಿ ಪವಿತ್ರ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶ್ರೀಮತಿ ವೀಣಾ ಕುಮಾರಿ ಸನ್ಮಾನ ಪತ್ರವನ್ನು ವಾಚಿಸಿದರು. ಬಹುಮಾನಿತರ ಪಟ್ಟಿಯನ್ನು ಶ್ರೀಮತಿ ದಿವ್ಯ ಬಿ. ಶಿವಪುರ ನೆರವೇರಿಸಿದರು. ಈ ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಗುಲಾಬಿ ಸ್ವಾಗತಿಸಿ, ಶ್ರೀ ರಮಾನಂದ ಶೆಟ್ಟಿ ಅಧ್ಯಕ್ಷರು, ಪ್ರಾ. ಶಾ. ಶಿ. ಸಂಘ ಕಾರ್ಕಳ ಇವರು ನಿರೂಪಿಸಿ, ಶ್ರೀಮತಿ ಶೈಲಜಾ ಶಿಕ್ಷಕಿ ಶಿವಪುರ ಇವರ ಧನ್ಯವಾದ ನೆರವೇರಿಸಿದರು.