ಡೈಲಿ ವಾರ್ತೆ: 16/NOV/2024

ಮಲ್ಪೆ ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಅವ್ಯವಹಾರ ಪ್ರಕರಣ – ಬೆಂಗಳೂರು ಲೋಕಾಯುಕ್ತರಿಗೆ ದೂರು ದಾಖಲಿಸಿದ ಕೋಟ ನಾಗೇಂದ್ರ ಪುತ್ರನ್

ಉಡುಪಿ: ಮಲ್ಪೆ ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ನ ಅವ್ಯವಹಾರದಿಂದ ಅನ್ಯಾಯಕ್ಕೆ ಒಳಗಾದ ಸಾಲಗಾರ ಸಂತ್ರಸ್ತರ ಪರವಾಗಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷರಾದ
ಕೋಟ ನಾಗೇಂದ್ರ ಪುತ್ರನ್ ಅವರು ನ. 16 ರಂದು ಶನಿವಾರ ಬೆಂಗಳೂರಿನ ಲೋಕಾಯುಕ್ತ ಪ್ರಧಾನ ಕಛೇರಿಯಲ್ಲಿ ಮಲ್ಪೆ ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷ ಯಶ್ಪಾಲ್ ಸುವರ್ಣ ಹಾಗೂ ಎಂ.ಡಿ. ಜೆಕೆ ಸೀನ, ಮಾಜಿ ಎಂ.ಡಿ. ಜಗದೀಶ್ ಮೊಗವೀರಾ ಹಾಗೂ ಎ.ಜೆ.ಎಂ. ಸಾರಿಕಾ ವಿರುದ್ಧ ದೂರು ನೀಡಿ ಕಾನೂನಿನ ಅಡಿ ಯಲ್ಲಿ ನ್ಯಾಯ ಒದಗಿಸುವಂತೆ ವಿನಂತಿಸಿದರು.

2021 ನೇ ಇಸವಿಯಲ್ಲಿ ಮನೆ ಬಾಗಿಲಿಗೆ ಬಂದು ಆಗಿನ ಬ್ಯಾಂಕ್ ಮ್ಯಾನೇಜರ್ ದಿವಂಗತ ಸುಬ್ಬಣ್ಣ ಹಾಗೂ ಮಧ್ಯವರ್ತಿ ರಿಯಾಜ್ ಮತ್ತು ಮಂಜುನಾಥ್ ಬಂಗೇರ ಯಾನೆ ದಿಪೇಶ್ ಎಂಬುವರೊಂದಿಗೆ ಸೇರಿಕೊಂಡು ಬ್ಯಾಂಕಿನ ಕೆಲವು ಸಿಬ್ಬಂದಿಗಳು ಮತ್ತು ಅಧ್ಯಕ್ಷರು ಹಾಗೂ ನಿರ್ದೇಶಕರು ಸೇರಿ 20,000 ರೂ. ಸಾಲ ಎಂದು ಹೇಳಿ ಇವರ ಖಾತೆಯಿಂದ ಎರಡು ಲಕ್ಷ ಪಡೆದು ಗ್ರಾಹಕರ ಸಹಿ ದುರುಪಯೋಗ ಮಾಡಿ ಸುಮಾರು ಒಂದು ಸಾವಿರ ಜನರಿಗೆ ಮೋಸ ಮಾಡಿ ಕೋಟ್ಯಂತರ ರೂಪಾಯಿ ಬ್ಯಾಂಕಿಗೂ ನಷ್ಟವಾಗಿದ್ದು, ಬಡವರ ಹೊಟ್ಟೆ ಮೇಲು ಹೊಡೆದು,ಆಡಳಿತ ನಿರ್ದೇಶಕರು ಮತ್ತು ಸಿಬ್ಬಂದಿಗಳಿಗೆ ಅಂದಿನ ವಿಚಾರಣಾಧಿಕಾರಿಯಾಗಿ ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಮಲ್ಪೆ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಉಪ ನಿರ್ದೇಶಕರ ಕಚೇರಿ ವಾದಿರಾಜ ಕಾಂಪ್ಲೆಕ್ಸ್ ಇಂದ ಪತ್ರ ಸಂಖ್ಯೆ 80-2023-24 ದಿನಾಂಕ 20/05/ 2023 ರಂದು ನೋಟಿಸು ನೀಡಿ ಅಪಾರ ನಷ್ಟ ಮತ್ತು 1413 ಜನರಿಗೆ ಸಾಲ ನೀಡಿ ಅವ್ಯವಹಾರ ಆಗಿದೆ ಎಂದು ಕೆ. ಎಸ್. ಜಗದೀಶ್ ತಿಳಿಸಿರುತ್ತಾರೆ. ಆ ನೋಟಿಸು ಮತ್ತು ಇಲ್ಲಿ ನೂರಾರು ಜನರಿಗೆ ಅನ್ಯಾಯ ವಾಗಿದ್ದು ನೋಡುವಾಗ ಇದೊಂದು ದೊಡ್ಡ ಅವ್ಯವಹಾರ ಆಗಿದೆ ಎಂದು ತಿಳಿದು ನಾನು ನನ್ನನ್ನು ಸಂಪರ್ಕ ಮಾಡಿದ ಅವರಿಗೆ ಆಗಿರುವ ಅನ್ಯಾಯವನ್ನು ಕೇಳಿದಾಗ ಮತ್ತು ಕೆ. ಎಸ್. ಜಗದೀಶ್ ಅವರ ನೋಟಿಸು ನೋಡಿದಾಗ ಇಲ್ಲಿ ಖಂಡಿತವಾಗಿ ಏನೋ ನಡೆದಿರುವುದು ಕಂಡು ಬಂದಿದ್ದು ಈಗಾಗಲೇ ಸುಮಾರು ಬೇರೆ ಬೇರೆ ಠಾಣೆಗಳಲ್ಲಿ ಪ್ರಕರಣ ಕೂಡ ದಾಖಲಾಗಿದ್ದು, ಬಡವರಿಗೆ ನ್ಯಾಯ ಕೊಡಿಸಬೇಕೆಂದು ಇಂದು ಬೆಂಗಳೂರು ಕೇಂದ್ರ ಕಚೇರಿ ಲೋಕಾಯುಕ್ತಕ್ಕೆ ದೂರು ನೀಡಲಾಯಿತು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷರಾದ ಕೋಟ ನಾಗೇಂದ್ರ ಪುತ್ರನ್ ತಿಳಿಸಿದರು.