ಡೈಲಿ ವಾರ್ತೆ: 18/NOV/2024
ಹೆಗ್ಗುಂಜೆ ರಾಜೀವ್ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ 14 ಉಚಿತ ಮನೆಗಳ ಲೋಕಾರ್ಪಣೆ
ಕಾರ್ಯಕ್ರಮ, ಜನ್ನಾಡಿ ಕೊರಗರ ಕಾಲೋನಿಯಲ್ಲಿ ನಿರ್ಮಿಸಲಾದ ಎರಡು ಕೋಟಿ ವೆಚ್ಚದಲ್ಲಿ 14 ಮನೆಗಳ ಹಸ್ತಾಂತರ ಕಾರ್ಯಕ್ರಮ ಸಂಪನ್ನ
✒️ ಕೆ. ಸಂತೋಷ್ ಶೆಟ್ಟಿ, ಮೊಳಹಳ್ಳಿ, ಕುಂದಾಪುರ.
- ಸಮಾಜದಲ್ಲಿ ಜಾತಿ, ಪದ್ಧತಿ ವರ್ಣ ಭೇದನೀತಿ ಸಮಾಜವನ್ನು ಕುಕ್ಕುತಿದೆ, ಜಾತಿ ತಾರತಮ್ಯ ಸಮಾಜಕ್ಕೆ ಮಾರಕ, ದೇಶದಲ್ಲಿ ಅಸ್ಪರ್ಶತೆ ಮತ್ತು ಅಸಮಾನತೆಯನ್ನು ನಾಶಪಡಿಸುವಲ್ಲಿ ನಾವು ಕೈಜೋಡಿಸಬೇಕಿದೆ. ಜಾತಿಯ ಅಡಿಪಾಯವನ್ನು ಬಿಟ್ಟು, ನೀತಿಯ ಧರ್ಮದತ್ತ ಓಲೈಸಬೇಕಿದೆ – ಆಹಾರ ಮತ್ತು ನಾಗರಿಕ ಸೌರಬರಾಜು ಸಚಿವ ಕೆ.ಎಚ್ ಮುನಿಯಪ್ಪ ಹಿತನುಡಿ
“ಸಮಾಜದಲ್ಲಿ ಇನ್ನೂ ಜಾತಿ ಪದ್ಧತಿ ಜಾರಿಯಲ್ಲಿದ್ದಿದ್ದು, ಲಿಂಗ ವರ್ಣಭೇದ ನೀತಿ ಸಮಾಜವನ್ನು ಕುಕ್ಕುತಿದೆ, ಬಸವಣ್ಣನವರ ಹಿತವಚನಗಳು ಈ ಸಮಾಜಕ್ಕೆ ಅಡಿಪಾಯ, ಇಂತಹದೊಂದು ನೀತಿಯನ್ನ ಅಳಿಸಿ ಸಮಾಜದವನ್ನು ಬದಲಾವಣೆ ಮಾಡುವ ಪರಿಸ್ಥಿತಿ ಎದುರಾಗಬೇಕಿದೆ. ದೇಶದಲ್ಲಿ ತಾಂಡವಾಡುತ್ತಿರುವ ವರ್ಣಭೇದ ನೀತಿಯನ್ನ ಒಗ್ಗಟ್ಟಿನಿಂದ ತೊಲಗಿಸಬೇಕಿದೆ. ಜಾತಿ ತಾರತಮ್ಯ ಈ ಸಮಾಜಕ್ಕೆ ಮಾರಕ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅವರು ಇತ್ತೀಚಿಗೆ ಹಾಲಾಡಿ ಸಮೀಪದ ಜನ್ನಾಡಿ ಕೊರಗರ ಕಾಲನಿಯಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ರಿ. ಬೆಂಗಳೂರು ಇವರಿಂದ ಪ್ರಾಯೋಜಿತವಾದ ಉಡುಪಿ ಜಿಲ್ಲೆಯ ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನ್ನಾಡಿ ಮತ್ತು ಮಣಿಗೆರೆ ಕೊರಗ ಕಾಲನಿಯಲ್ಲಿ ಎರಡು ಕೋಟಿ ವೆಚ್ಚದಲ್ಲಿ ನಿರ್ಮಿಸಿದ 14 ಉಚಿತ ಮನೆಗಳ ಗೃಹ ಪೂಜೆ ಮತ್ತು ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಆಶಯ ನುಡಿಯನ್ನಾಡಿ ಸಮಾಜಕ್ಕೆ ಉದಾರ ಕೊಡುಗೆ ಕೊಟ್ಟರೆ ನಮ್ಮ ಮಕ್ಕಳಿಗೆ ಅದು ಲಾಭವಾಗುತ್ತದೆ, ದುಂದು ವೆಚ್ಚದಿಂದ ಸಮಾಜದ ವಿನಾಶದ ಹಂಚಿನತ್ತ ಸಾಗುತ್ತದೆ. ಸಾಮಾಜಿಕ ಕಳಕಳಿಯ ಮನೋಭಾವ ನಮ್ಮಲ್ಲಿ ಹುಟ್ಟಬೇಕು. ಮದುವೆ ಮೆಹಂದಿ ಅಂತಹ ಕಾರ್ಯಕ್ರಮದಲ್ಲಿ ದುಂದು ವೆಚ್ಚ ಮಾಡುತ್ತಿರುವುದು ಇಂದಿನ ಸಮಾಜಕ್ಕೆ ಅದು ಮಾರಕ ಎಂದು ಹೇಳಿದರು.
ಸಂಸದ ಕೋಟ ಶ್ರೀನಿವಾಸ್ ಪೂಜಾರಿಯವರು ಹಕ್ಕು ಪತ್ರ ಮತ್ತು ಕೀಲಿ ಕೈಯನ್ನು ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ದೀಪಾ ಶೆಟ್ಟಿ ಹಾಗೂ ಪಿಡಿಒ ರೇಖಾ ಅವರಿಗೆ ಹಸ್ತಾಂತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಕಿರಣ್ ಕುಮಾರ್ ಕೊಡ್ಗಿ ವಹಿಸಿದ್ದರು . ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಬಿ.ಅಪ್ಪಣ್ಣ ಹೆಗ್ಡೆ, ಮಾಜಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ, ಹೆಗ್ಗುಂಜೆ ರಾಜೀವ್ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇದರ ಅಧ್ಯಕ್ಷ ಡಾ.ಎಚ್. ಎಸ್, ಶೆಟ್ಟಿ, ಕೊರಗ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಸುಶೀಲಾ ನಾಡ, ಮೊಳಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ದ್ಯಾವಲಬೆಟ್ಟು, ಕಾಂಗ್ರೆಸ್ ಮುಖಂಡ ಎಂ. ದಿನೇಶ್ ಹೆಗ್ಡೆ ಮೊಳಹಳ್ಳಿ , ಗುರುನಾಥ್ ಹಿರೇಹಟ್ಟಿ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸರ್ವೋತ್ತೋಮ ಹೆಗ್ಡೆ, ಕುಂದಾಪುರ ವಲಯ ಅಧ್ಯಕ್ಷ ಕುಮಾರ ದಾಸ್, ಟ್ರಸ್ಟ್ ಉಪಾಧ್ಯಕ್ಷ ಹಾಲಾಡಿ ನಾಗರಾಜ ಶೆಟ್ಟಿ, ಟ್ರಸ್ಟ್ ಕಾರ್ಯದರ್ಶಿ ಡಾ. ಸುಮನಾ ಶೆಟ್ಟಿ, ಜನ್ನಾಡಿ ಫೇವರೆಟ್ ಕ್ಯಾಶೂಸ್ ಇದರ ಮಾಲೀಕ ಹೆಚ್. ಶಂಕರ್ ಹೆಗಡೆ ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಮುರಲಿ ಕಡೆಕಾನೆ ಸ್ವಾಗತಿಸಿ, ಟ್ರಸ್ಟ್ ನ ಬೆಂಗಳೂರು ಅಧ್ಯಕ್ಷ ಡಾ. ಹೆಚ್. ಎಸ್ ಶೆಟ್ಟಿ ಪ್ರಸ್ತಾವನೆ ಮಾಡಿ. ಖ್ಯಾತ ನಿರೂಪಕ, ವಾಗ್ಮಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರೂಪಕ ಅಕ್ಷಯ್ ಹೆಗ್ಡೆ ಮೊಳಹಳ್ಳಿ ನಿರೂಪಿಸಿ, ಹೊಂದಿಸಿದರು.