ಡೈಲಿ ವಾರ್ತೆ: 19/NOV/2024

ಹಿರಿಯ ಯಕ್ಷ ಕಲಾವಿದ ಹಳ್ಳಾಡಿ ಕೃಷ್ಣ ನಾಯ್ಕ ರಿಗೆ ಶ್ರೀ ಅಘೋರೇಶ್ವರ ರಾಜ್ಯೋತ್ಸವ ಪ್ರಶಸ್ತಿ

ಕೋಟ: ಶ್ರೀ ಅಘೋರೇಶ್ವರ ಕಲಾರಂಗದ ಕಾರ್ತಟ್ಟು, ಚಿತ್ರಪಾಡಿ ವತಿಯಿಂದ ಕೊಡಮಾಡಲ್ಪಡುವ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಗೆ ಹಿರಿಯ ಯಕ್ಷ ಗಾನ ಕಲಾವಿದ ಹಳ್ಳಾಡಿ ಕೃಷ್ಣ ನಾಯ್ಕ ರವರು ಆಯ್ಕೆಯಾಗಿರುತ್ತಾರೆ.

ಶ್ರೀಯುತ ನಾಯ್ಕರು ಕೊಂಚವು ಕಸರು ಕೆಸರಿಲ್ಲದ ಪೂರ್ವ ಕ್ರಮಾನುಗತ ಶೈಲೀಕೃತ ಕಲಾಭಿವ್ಯಕ್ತಿಗೆ ಹೆಸರಾಗಿದ್ದು ಮಾರಣಕಟ್ಟೆ, ಕಮಲಶಿಲೆ,ಹಾಲಾಡಿ, ಅಮೃತೇಶ್ವರಿ,ಕಳವಾಡಿ,ಗೋಳಿಗರಡಿ,ಮೇಳದಲ್ಲಿ ಕಲಾಸೇವೆಗೈದು ನಂತರ ಸುಮಾರು ಮುವತ್ತೋಂದು ವರುಷ ಮಂದಾರ್ತಿ ಮೇಳದಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ನಿವೃತ್ತಿ ಬದುಕನ್ನು ಸಾಗಿಸುತ್ತಿದ್ದಾರೆ.

ಯಕ್ಷಗಾನದ ಎಲ್ಲಾವಿಧದ ಪಾತ್ರದಲ್ಲಿಯೂ ಯಶಸ್ವಿಯಾಗಿ ಅಭಿನಯಿಸಿ ರಂಜಿಸಿದ ನಾಯ್ಕರಿಗೆ ಹಲವು ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿರುವುದು ಅಭಿನಂದನೀಯ.
ಪ್ರಶಸ್ತಿ ವಿತರಣಾ ಕಾರ್ಯಕ್ರಮ ವು ದಿನಾಂಕ ನವೆಂಬರ್ 23 ರ ಶನಿವಾರದಂದು ಅಘೋರೇಶ್ವರ ಸಭಾಂಗಣದಲ್ಲಿ ಸಂಜೆ ನಡೆಯಲಿದ್ದು ಅಂದು ಬೆಳಿಗ್ಗೆ ಪ್ರಗತಿಪರ ಕೃಷಿಕರಿಗೆ ಸನ್ಮಾನ, ಸಂಜೆಯ ಸಭಾ ಕಾರ್ಯಕ್ರಮದಲ್ಲಿ ಯಕ್ಷಗಾನ ವಿಮರ್ಶಕರು ಮತ್ತು ಪ್ರಾಧ್ಯಾಪಕರಾದ ಎಸ್ ವಿ ಉದಯ ಕುಮಾರ ಮಣಿಪಾಲ ರವರು ಪ್ರಶಸ್ತಿ ಪ್ರರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದು, ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕಾರ್ಕಡ ತಾರನಾಥ ಹೊಳ್ಳ ಹಾಗೂ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಹ್ಯಾಂಡ್ ಬಾಲ್ ಕ್ರೀಡಾಕೂಟದಲ್ಲಿ ಪ್ರತಿನಿಧಿಸಿದ ಸ್ಥಳೀಯ ಯುವ ಕ್ರೀಡಾ ಪ್ರತಿಭೆ ಕುಮಾರಿ ತೃಪ್ತಿ ಇವರನ್ನು ಗುರುತಿಸಿ ಗೌರವಿಸಲಿದ್ದು, ಅತಿಥಿ ಅಭ್ಯಾಗತರಾಗಿ ಕಿದಿಯೂರು ಉದಯ ಕುಮಾರ್ ಶೆಟ್ಟಿ,ಮುಳುಗು ತಜ್ನ ಈಶ್ವರ ಮಲ್ಪೆ , ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಕನ್ಯ ಜಗದೀಶ್ ಹಾಗೂ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ, ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿರುವುದು ಎಂದು ಸಂಘದ ಅಧ್ಯಕ್ಷರಾದ ಉಮೇಶ್ ನಾಯರಿ ಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.