ಡೈಲಿ ವಾರ್ತೆ: 22/NOV/2024

ಬ್ರಹ್ಮಾವರ ತಾಲ್ಲೂಕು ಆಡಳಿತ ಸೌಧದಲ್ಲಿ ಅವ್ಯವಸ್ಥೆ – ಸರಕಾರದ ನಿರ್ಲಕ್ಷ

ಬ್ರಹ್ಮಾವರ ತಾಲ್ಲೂಕು ಆಡಳಿತ ಸೌಧದ ಗೋಳು ಕೇಳುವವರಾರು?
ಲಿಫ್ಟ್ ಕೈಕೊಟ್ಟು ತಿಂಗಳು ಕಳೆಯುತ್ತ ಬಂತು.
ಪ್ರಥಮ ಮಹಡಿಯಲ್ಲಿರುವ ಉಪನೋಂದಣಿ ಕಚೇರಿಗೆ ಪ್ರತಿನಿತ್ಯ ಹಿರಿಯ ಜೀವಗಳನ್ನು ಮೆಟ್ಟಿಲಿನ ಮೂಲಕ ಹೊತ್ತು ತರುವ ದ್ರಶ್ಯ ಅಸಹನೀಯವಿನಿಸಿದೆ.
ಲಿಫ್ಟ್ ದುರಸ್ತಿ ಮಾಡುವ ಸಾಮರ್ಥ್ಯವಿರದ ಸರಕಾರಕ್ಕೆ ಜನಸಾಮಾನ್ಯರು ಪ್ರತಿ ದಿನ ಹಿಡಿ ಶಾಪ ಹಾಕುತ್ತಿದ್ದಾರೆ.
ಜನ ಓಡಾಟ ಇಲ್ಲದ ಚುನಾವಣಾ ಶಾಖೆಯನ್ನು ನೆಲ ಅಂತಸ್ತಿನಲ್ಲಿ ಇರಿಸಿ, ಪ್ರತಿ ದಿನ ಸಾವಿರಾರು ಜನ ಭೇಟಿ ನೀಡುವ ಉಪನೊಂದಣಿ ಕಚೇರಿಯನ್ನು ಮೊದಲ ಮಹಡಿಯಲ್ಲಿ ಪ್ರಾರಂಭಿಸಿರುವುದು ಅವೈಜ್ಞಾನಿಕವಾಗಿರುವುದಂತೂ ಸತ್ಯ.

ಜಿಲ್ಲಾಡಳಿತ ಈ ಕೂಡಲೇ ಲಿಫ್ಟ್ ಸರಿಪಡಿಸಿ ಶೀಘ್ರ ಕ್ರಮಕೈಗೊಳ್ಳದೆ ಹೋದಲ್ಲಿ ಹೋರಾಟ ಅನಿವಾರ್ಯ ಎಂದು ಬ್ರಹ್ಮಾವರ ನ್ಯಾಯವಾದಿಗಳಾದ
ಅಲ್ತಾರು ಗೌತಮ ಹೆಗ್ಡೆ ಹೇಳಿದ್ದಾರೆ.