ಡೈಲಿ ವಾರ್ತೆ: 24/NOV/2024
ಶಿರಹಟ್ಟಿ ಬ್ಲಾಕ್ ಮಟ್ಟದ ನಲಿ ಕಲಿ ತರಬೇತಿ ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರಿನಲ್ಲಿ ಸಮಾರೋಪ ಸಮಾರಂಭ
ಲಕ್ಷ್ಮೇಶ್ವರ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೊಡ್ಡೂರು ಇಲ್ಲಿ ಬ್ಲಾಕ್ ಮಟ್ಟದ ನಲಿ-ಕಲಿ ತರಬೇತಿಯನ್ನು ಏರ್ಪಡಿಸಲಾಗಿತ್ತು.
ಸಮಾರೋಪ ಸಮಾರಂಭದ ಸಮಾರಂಭದ ಅಧ್ಯಕ್ಷತೆಯನ್ನು ಶಿರಹಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಾನ್ಯ ಶ್ರೀ ಹೆಚ್ ನಾಣಕಿ ನಾಯಕ್ ಸಾಹೇಬರು ವಹಿಸಿಕೊಂಡು ನಲಿ ಕಲಿ ತರಗತಿ ನಿರ್ವಹಣೆಯ ಸವಾಲುಗಳು ಹಾಗೂ ಹೊಸ ಬದಲಾವಣೆಗಳ ಮಾಹಿತಿಗಾಗಿ ತರಬೇತಿಗಳು ಅವಶ್ಯಕ ಮತ್ತು ಇಲ್ಲಿ ಪಡೆದುಕೊಂಡ ಅಂಶಗಳನ್ನು ತರಗತಿಯಲ್ಲಿ ಅಳವಡಿಸುವುದು ಅಷ್ಟೇ ಅವಶ್ಯಕ ಎಂದು ತಮ್ಮ ಸಮಾರೋಪ ನುಡಿಗಳಲ್ಲಿ ತಿಳಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಎಂ ಎಸ್ ಹಿರೇಮಠ* ತಾಲೂಕ ಘಟಕದ ಉಪಾಧ್ಯಕ್ಷರಾದ ಶ್ರೀಮತಿ ಎಲ್ ಎನ್ ನಂದೆಣ್ಣನವರ ಗುರುಮಾತೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶೋಭೆ ತಂದರು.
ತರಬೇತಿಯ ನೋಡಲ್ ಅಧಿಕಾರಿಗಳಾದಗಳಾದ ಬಿ ಆರ್ ಪಿ ಶ್ರೀ ವಾಸು ದೀಪಾಳಿ, ಶಾಲೆಯ ಪ್ರಧಾನ ಗುರುಗಳಾದ ಎಫ್ ಎನ್ ಗೋಣೆಪ್ಪನವರ, ಸಿಆರ್‌ಪಿಗಳಾದ ಜ್ಯೋತಿ ಗಾಯಕ್ವಾಡ, ಶಿವಾನಂದ ಅಸುಂಡಿ ಹಾಜರಿದ್ದರು. ತರಬೇತಿಯ ಆರ್ ಪಿ ಗಳಾಗಿ ಶ್ರೀ ಅಜಿತ್ ಬಣದ, ಶ್ರೀ ರಾಘವೇಂದ್ರ ಸಾಂಗ್ಲಿಕರ್, ಶ್ರೀ ತಿಪ್ಪನಾಯಕ ಎಲ್. ಶ್ರೀಮತಿ ಆರ್. ಎಚ್ .ಬಬಲಿಯವರ ಶ್ರೀಮತಿ ವಿಜಯಲಕ್ಷ್ಮಿ ಅಕ್ಕಿ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯ ನಿರ್ವಹಿಸಿದರು
ಸುರಣಗಿ ಸಿ ಆರ್ ಪಿ ಲೋಕೇಶ್ ಮಠದ ಸ್ವಾಗತಿಸಿದರು, ಬಡ್ನಿ ಸಿ ಆರ್ ಪಿ ಗಿರೀಶ್ ನೇಕಾರ್ ವಂದಿಸಿದರು.