ಡೈಲಿ ವಾರ್ತೆ: 27/NOV/2024
ಕುಂದಾಪುರ: ನ. 30 ರಂದು ಕೋಡಿ ಬ್ಯಾರೀಸ್ ಸೀಸೈಡ್ ಪಬ್ಲಿಕ್ ಸ್ಕೂಲ್ ನ ಸಂಸ್ಥಾಪಕರ ದಿನಾಚರಣೆ – ಶಾಲಾ ವಾರ್ಷಿಕೋತ್ಸವ – ಬ್ಯಾರೀಸ್ ಉತ್ಸವ – 2024
ಕುಂದಾಪುರ: ಕೋಡಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆ ಮತ್ತು ವಾರ್ಷಿಕೋತ್ಸವ, ಬ್ಯಾರೀಸ್ ಉತ್ಸವ-2024 ವು ನ. 30 ರಂದು ಮಧ್ಯಾಹ್ನ 3 ಗಂಟೆಗೆ ಜರುಗಲಿದೆ ಎಂದು ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಅಬ್ದುಲ್ ರೆಹಮಾನ್ ತಿಳಿಸಿದರು.
ಅವರು ಬುಧವಾರ ಇಲ್ಲಿನ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಸಮಾರಂಭವನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಲಿದ್ದು
ಈ ಸಂದರ್ಭ ಐಜಿಬಿಸಿ ಬೆಂಗಳೂರು ಸಂಸ್ಥೆಯು ಕೋಡಿ ಬ್ಯಾರೀಸ್ ಪಬ್ಲಿಕ್ ಸ್ಕೂಲ್‌ಗೆ ಕೊಡಮಾಡಿರುವ ಪ್ಲಾಟಿನಮ್ ಪ್ರಶಸ್ತಿಯ ಹಸ್ತಾಂತರ ನಡೆಯಲಿದೆ.
ಬ್ಯಾರೀಸ್ ಎಜುಕೇಶನ್ ಲೋಗೊ ಅನಾವರಣ ಜರುಗಲಿದೆ ಎಂದರು.
ಸಮಾರಂಭದಲ್ಲಿ ರಾಷ್ಟ್ರ ಮಟ್ಟದ ಇಬ್ಬರು ಸಾಧಕರಿಗೆ ಸನ್ಮಾನ, ಸಾಧಕ ವಿದ್ಯಾರ್ಥಿಗಳಿಗೆ ಗೌರವ, ಪ್ರತಿಭಾ ಪುರಸ್ಕಾರ ಇನ್ನಿತರ ಕಾರ್ಯಕ್ರಮ ನಡೆಯಲಿದ್ದು.
ಮುಖ್ಯ ಅತಿಥಿಗಳಾಗಿ ಬೆಂಗಳೂರು ವಿಭಾಗದ ಐಜಿಬಿಸಿ ಚೇರ್ ಮೆನ್ ಡಾ. ಚಂದ್ರಶೇಖರ ಹರಿಹರನ್, ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಇವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರಾದ ಆಸೀಫ್ ಬ್ಯಾರಿ, ಡಾ.ಪೂರ್ಣಿಮಾ, ಬ್ಯಾರೀಸ್ ಪದವಿ ಕಾಲೇಜು ಪ್ರಿನ್ಸಿಪಾಲ್ ಶಬೀನಾ, ಬಿಎಡ್ ಕಾಲೇಜು ಪ್ರಿನ್ಸಿಪಾಲ್ ಕೆ.ಎಸ್.ಸಿದ್ಧಪ್ಪ ಉಪಸ್ಥಿತರಿದ್ದರು.