ಡೈಲಿ ವಾರ್ತೆ: 28/NOV/2024
ರೈನ್ ಬೋ ಎಕ್ಸಿಬಿಷನ್ ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಕುಂದಾಪುರದಲ್ಲಿ
ಮತ್ಸ್ಯಕನ್ಯೆಯರು
ಕುಂದಾಪುರ: ರೈನ್ ಬೋ ಎಕ್ಸಿಬಿಷನ್ ಇವರಿಂದ ಅಂಡರ್ ವಾಟರ್ ಅಕ್ವೇರಿಯಂ ಫಿಶ್ ಟನಲ್ ಮತ್ತು ಮರ್ ಮೆಡ್ (ಮತ್ಸ್ಯಕನ್ಯೆಯರು) ಪ್ರದರ್ಶನವು ಕುಂದಾಪುರದ ಕೋಟೇಶ್ವರ ಸರ್ಜನ್ ಆಸ್ಪತ್ರೆ ಬಳಿ ಪ್ರದರ್ಶನ ಗೊಳ್ಳಲಿದೆ ಎಂದು ರೈನ್ ಬೋ ಎಕ್ಸಿಬಿಷನ ಅದರ ಮುಖ್ಯಸ್ಥರಾದ ವಿಜಯ ವಿಲ್ಸನ್ ಹೇಳಿದರು.
ಅವರು ಗುರುವಾರ ನಡೆದ ಪತ್ರಿಕೆಗೋಷ್ಠಿಯಲ್ಲಿ ಮಾತನಾಡಿ ನವೆಂಬರ್ 29 ರಂದು ಶುಕ್ರವಾರ ಸಂಜೆ 6:30 ಕ್ಕೆ ರೈನ್ ಬೋ ಎಕ್ಸಿಬಿಷನ್ ಉದ್ಘಾಟನೆ ಗೊಳ್ಳಲಿದೆ.
ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಮರ್ ಮೆಡ್ (ಮತ್ಸ್ಯಕನ್ಯೆಯರು) ಪ್ರದರ್ಶನಗೊಳ್ಳಲಿದ್ದಾರೆ.
ನಮ್ಮ ಪ್ರದರ್ಶನವು ಪ್ರತಿದಿನ ಸಂಜೆ 5 ರಿಂದ ರಾತ್ರಿ 9:30 ಗಂಟೆ ವರೆಗೆ ಇರುತ್ತದೆ.
ಪ್ರವೇಶ ದರ 80 ರೂಪಾಯಿ ಇದ್ದು ಅದರಲ್ಲಿ ಫಿಶ್ ಟನಲ್, ಮತ್ಸ್ಯಕನ್ಯೆಯರು, ಟನಲ್ ಎಕ್ಸಿಬಿಷನ್ ನೋಡ ಬಹುದು ಎಂದು ಹೇಳಿದರು.
ರೈನ್ ಬೋ ಎಕ್ಸಿಬಿಷನ್ ಉದ್ಘಾಟನೆಯನ್ನು
ಕುಂದಾಪುರ ವಿಧಾನಸಭಾ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಇವರು ಉದ್ಘಾಟಿಸಲಿದ್ದಾರೆ.
ಕುಂದಾಪುರ ತಹಸೀಲ್ದಾರ್ ಶ್ರೀಮತಿ ಶೋಭಾಲಕ್ಷ್ಮೀ
ಮತ್ಸ್ಯಕನ್ಯೆ ಟನಲ್ ಉದ್ಘಾಟಿಸಲಿದ್ದಾರೆ.
ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಅವರು ಅಕ್ವೇರಿಯಂ ಉದ್ಘಾಟಿಸಲಿದ್ದು, ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ ಅವರು ಅಮ್ಯೂಸ್ ಮೆಂಟ್ ನ್ನು ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಅಲ್ಲದೆ ಮುಖ್ಯ ಅತಿಥಿಗಳಾಗಿ ಕುಂದಾಪುರ ಪುರಸಭೆ ಅಧ್ಯಕ್ಷರಾದ ಮೋಹನ್ ದಾಸ್ ಶೈಣೆ, ಕೋಟೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ರಾಗಿಣಿ ದೇವಾಡಿಗ, ಮಂಗಳೂರು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶೋಭಾ ಪೂಜಾರಿ, ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ, ಚಲನಚಿತ್ರ ನಟ ರಘು ಪಾಂಡೇಶ್ವರ್ ಹಾಗೂ ಸ್ಥಳೀಯರು ರಾಮಣ್ಣ ಶೆಟ್ಟಿ ಉಪಸ್ಥಿತರಿರುವರು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಯ್ಯದ್, ಪ್ರವೀಣ್ ಹಾಗೂ ಶರತ್ ಇದ್ದರು.