ಡೈಲಿ ವಾರ್ತೆ:02/DEC/2024
ಸ್ನಾನಕ್ಕೆಂದು ನದಿಗೆ ಇಳಿದಿದ್ದ ಇಬ್ಬರು ಬಾಲಕರು ನೀರುಪಾಲು
ಕಲಬುರಗಿ : ನದಿಯಲ್ಲಿ ಈಜಾಡಲು ತೆರಳಿದ್ದ ಇಬ್ಬರು ಬಾಲಕರು ನೀರು ಪಾಲಾದ ಘಟನೆ ಸೇಡಂ ತಾಲೂಕಿನ ಕುಕ್ಕುಂದಾ ಗ್ರಾಮದಲ್ಲಿ ನಡೆದಿದೆ.
ಅಬ್ದುಲ್ ರೆಹಮಾನ್(17) ಮತ್ತು ಮುಹಮ್ಮದ್ ಕೈಫ್(16) ಮೃತ ಬಾಲಕರೆಂದು ಗುರುತಿಸಲಾಗಿದೆ. ಇಬ್ಬರು ಬಾಲಕರು ಕಾಗಿಣಾ ನದಿಯಲ್ಲಿ ಈಜಾಡಲು ತೆರಳಿದ್ದರು. ಈ ವೇಳೆ ಈಜು ಬಾರದ ಅಬ್ದುಲ್ ರೆಹಮಾನ್ ಮುಳುಗುತ್ತಿದ್ದನ್ನು ಕಂಡು ರಕ್ಷಿಸಲು ಹೋದ ಮುಹಮ್ಮದ್ ಕೈಫ್ ಸಹ ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.
ಅಗ್ನಿಶಾಮಕ ಸಿಬ್ಬಂದಿಯವರು ಮತ್ತು ಮೀನುಗಾರರು ಬಾಲಕರ ಹುಡುಕಾಟ ಇನ್ನೂ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. ಈ ಕುರಿತು ಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.