ಡೈಲಿ ವಾರ್ತೆ:05/DEC/2024
ಬೆಳಗಾವಿ: ಮಗಳ ಜೊತೆ ಮದುವೆಗೆ ನಿರಾಕರಿಸಿದ ತಾಯಿ, ಮಗನನ್ನು ಭೀಕರವಾಗಿ ಕೊಲೆಗೈದ ಯುವಕ
ನಿಪ್ಪಾಣಿ: ಬೆಳಗಾವಿ ಜಿಲ್ಲೆ ತಾಲ್ಲೂಕಿನ ಅಕ್ಕೊಳ ಹೊರವಲಯದ ಬಾಳೋಬಾ ಮಾಳನಲ್ಲಿ ಬುಧವಾರ ರಾತ್ರಿ ಮಾರಕಾಸ್ತ್ರಗಳಿಂದ ಹೊಡೆದು ತಾಯಿ-ಮಗನ ಕೊಲೆ ಮಾಡಲಾಗಿದೆ.
ಮಂಗಲ ಸುಕಾಂತ ನಾಯಿಕ(50), ಪ್ರಜ್ವಲ್(18) ಮೃತರು. ಹುಕ್ಕೇರಿ ತಾಲ್ಲೂಕಿನ ಕೋಣನಕೇರಿಯ ರವಿ ಖಾನಾಪ್ಪಗೋಳ ಕೊಲೆ ಮಾಡಿದ ಆರೋಪಿ.
ನನ್ನ ಪುತ್ರಿ ಪ್ರಾಜಕ್ತಾ ಜತೆ ಮಾತನಾಡಬೇಡ. ನಮ್ಮ ಮನೆಗೆ ಬರಬೇಡ’ ಎಂದು ಮಂಗಲ ನಾಯಿಕ ಅವರು, ತಮ್ಮ ಸಂಬಂಧಿಗೆ ರವಿ ಖಾನಪ್ಪಗೋಳಗೆ ತಿಳಿಸಿದ್ದರು.
ಇದರಿಂದ ಸಿಟ್ಟಾದ ಆತ ತನ್ನ ಗೆಳೆಯರೊಂದಿಗೆ ಬಂದು ಕೊಲೆ ಮಾಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆ ಮುಂದುವರಿದಿದೆ. ಸ್ಥಳೀಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.