ಡೈಲಿ ವಾರ್ತೆ:05/DEC/2024

ಗಂಗೊಳ್ಳಿಯ ತೌಹೀದ್ ಸಮೂಹ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಕ್ರೀಡಾ ಕೂಟ

ಕುಂದಾಪುರ: ಗಂಗೊಳ್ಳಿಯ ತೌಹೀದ್ ಸಮೂಹ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಕ್ರೀಡಾ ಕೂಟದ ಉದ್ಘಾಟನಾ ಸಮಾರಂಭವು ಡಿ. 5 ರಂದು ಗುರುವಾರ ಶಾಲಾ ಮೈದಾನದಲ್ಲಿ ಜರಗಿತು.

ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ಜನಾಬ್. ಇಬ್ರಾಹಿಂ ಚೌಗುಲೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತೌಹೀದ್ ಪಬ್ಲಿಕ್ ಸ್ಕೂಲ್ ಶಿರೂರು ಇದರ ಮುಖ್ಯೋಪಾಧ್ಯಾಯರಾದ ಜನಾಬ್. ಶಬ್ಬೀರ್ ಅಹ್ಮದ್ ದಫೆದಾರ್ ಆಗಮಿಸಿದ್ದರು.

ಅನಿವಾಸಿ ಗಣ್ಯರಾದ ಜ. ಅಬ್ದುಲ್ ಸತ್ತಾರ್ ಮಡಿಕಲ್, ಜ. ಜಾವೀದ್ MH, ಜ. ಅಬ್ದುಲ್ ಹಮೀದ್ ಮೌಲಾನ, ತೌಹೀದ್ ವಿಶ್ವಸ್ಥ ಮಂಡಳಿಯ ಸದಸ್ಯರಾದ ಜ. ಇಕ್ಬಾಲ್ P. M, ವ್ಯವಸ್ಥಾಪಕರಾದ ಜ. ತಾಹೀರ್ ಹಸನ್ ಹಾಗೂ ತೌಹೀದ್ ಮಹಿಳಾ ಕಾಲೇಜುಗಳ ಪ್ರಾಂಶುಪಾಲರಾದ ಶ್ರೀಮತಿ ಆಶಾ ನಾಯ್ಕ, ಶ್ರೀಮತಿ ಸಮೀನ ಬುಖಾರಿ, ತೌಹೀದ್ ಆಂಗ್ಲ ಮಾದ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸಭಾ ಬಾನು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವರ್ಣರಂಜಿತ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಶಿಸ್ತುಬದ್ಧ ಕವಾಯತು, ಡ್ರಿಲ್, ಮುಂತಾದ ಅನೇಕ ಪ್ರದರ್ಶನಗಳನ್ನು ನೀಡಿ. ನೋಡುಗರ ಮನ ಸೂರೆಗೈದರು.

ಮುಖ್ಯ ಅತಿಥಿ ಜ. ಶಬ್ಬೀರ್ ಅಹ್ಮದ್ ಪ್ರಾಸ್ತಾವಿಕ ಭಾಷಣಗೈದರು. ಅತಿಥಿಗಳು ಆಯಾ ಶಾಲಾ ಕಾಲೇಜುಗಳ ಧ್ವಜಾರೋಹಣ ನೆರವೇರಿಸಿ ಬಣ್ಣ ಬಣ್ಣದ ಬಲೂನುಗಳನ್ನು ಆಕಾಶಕ್ಕೆ ಹಾರಿಸಿದರು.
ವಿದ್ಯಾರ್ಥಿನಿ ಮದಾ ಸ್ವಾಗತಿಸಿ,ಇಕ್ರಾ ವಂದನಾರ್ಪಣೆ ಗೈದರು, ಸಾರಿಯ ಕಾರ್ಯಕ್ರಮ ನಿರೂಪಿಸಿದರು.