ಡೈಲಿ ವಾರ್ತೆ: 19/ಆಗಸ್ಟ್/ 2025

ಲಯನ್ Adv. ಬನ್ನಾಡಿ ಸೋಮನಾಥ ಹೆಗ್ಡೆ ಯವರಿಗೆ ಲಯನ್ಸ್ ಜಿಲ್ಲಾ ಪ್ರಶಸ್ತಿ

ಉಡುಪಿ, ಶಿವಮೊಗ್ಗ, ದಾವಣಗೆರೆ ಮತ್ತು ಭದ್ರಾವತಿ ರೆವೆನ್ಯೂ ಜಿಲ್ಲೆಗಳನ್ನೊಳಗೊಂಡ ಲಯನ್ಸ್ ಜಿಲ್ಲೆ 317-ಸಿ ಇದರ 9 ರೀಜನ್ ಗಳಲ್ಲಿ 2024-25 ನೇ ಸಾಲಿನ “ಬೆಸ್ಟ್ ರೀಜನ್ ಚೇಯರ್ ಪರ್ಸನ್” ಪ್ರಶಸ್ತಿಯನ್ನು ರೀಜನ್-V ಇದರ ರೀಜನ್ ಚೇಯರ್ ಪರ್ಸನ್ ಲಯನ್ Adv. ಬನ್ನಾಡಿ ಸೋಮನಾಥ ಹೆಗ್ಡೆಯವರು ಪಡೆದಿರುತ್ತಾರೆ.

ಉಡುಪಿಯ ಅಮೃತ್ ಗಾರ್ಡನ್ ನಲ್ಲಿ ಇತ್ತೀಚೆಗೆ ನಡೆದ, “ಸಿಂಹ ಸಂಭ್ರಮ” ಅದ್ಧೂರಿ ಕಾರ್ಯಕ್ರಮದಲ್ಲಿ 2024-25 ನೇ ಸಾಲಿನ ಲಯನ್ಸ್ ಜಿಲ್ಲಾ ಗವರ್ನರ್ ಲಯನ್ ಮಹಮ್ಮದ್ ಹನೀಫ್ ಮತ್ತು ಜಿಲ್ಲಾ ಪ್ರಶಸ್ತಿ ಪ್ರಧಾನ ಸಮಾರಂಭದ ಚೇಯರ್ ಮ್ಯಾನ್ ಲಯನ್ ಅರುಣ್ ಕುಮಾರ್ ಹೆಗ್ಡೆ ಯವರು ಲಯನ್ Adv. ಬನ್ನಾಡಿ ಸೋಮನಾಥ ಹೆಗ್ಡೆ ಇವರಿಗೆ ಪ್ರಶಸ್ತಿಯನ್ನು ವಿತರಿಸಿದರು.

2024-25 ನೇ ಸಾಲಿನ ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ಅಧ್ಯಕ್ಷರಾದ ಲಯನ್ ಬನ್ನಾಡಿ ಪ್ರವೀಣ್ ಹೆಗ್ಡೆ, ಲಯನ್ಸ್ ಕ್ಲಬ್ ಹಂಗಳೂರು ಇದರ ಅಧ್ಯಕ್ಷರಾದ ಲಯನ್ ರೋವನ್ ಡಿ’ಕೋಸ್ಟಾ, ಲಯನ್ಸ್ ಕ್ಲಬ್ ಆರ್ಡಿ-ಬೆಳ್ವೆ-ಗೋಳಿಯಂಗಡಿಯ ಅಧ್ಯಕ್ಷರಾದ ಲಯನ್ ಜಯರಾಮ್ ಶೆಟ್ಟಿ, ಲಯನ್ಸ್ ಕ್ಲಬ್ ಕೋಟೇಶ್ವರದ ಅಧ್ಯಕ್ಷರಾದ ಲಯನ್ ಬಿ.ಎಸ್. ವಿಶ್ವನಾಥ್, ಲಯನ್ಸ್ ಕ್ಲಬ್ ಬ್ರಹ್ಮಾವರ-ಬಾರ್ಕೂರು ಇದರ ಅಧ್ಯಕ್ಷರಾದ ಲಯನ್ ಜಯರಾಮ್ ನಾಯ್ಕ್, ಲಯನ್ಸ್ ಕ್ಲಬ್ ತೆಕ್ಕಟ್ಟೆಯ ಅಧ್ಯಕ್ಷರಾದ ಲಯನ್ ಹರ್ಷವರ್ಧನ್ ಶೆಟ್ಟಿ, ಲಯನ್ಸ್ ಕ್ಲಬ್ ಕೋಸ್ಟಲ್ ಕುಂದಾಪುರದ ಅಧ್ಯಕ್ಷರಾದ ಲಯನ್ ಮಚ್ಚಟ್ಟು ಉದಯ್ ಕುಮಾರ್ ಶೆಟ್ಟಿ, ಲಯನ್ಸ್ ಕ್ಲಬ್ ಮೊಳಹಳ್ಳಿ ಶಿವಶಾಂತಿಯ ಅಧ್ಯಕ್ಷರಾದ ಲಯನ್ ಹೆಚ್. ಮೋಹನ್ ದಾಸ್ ಶೆಟ್ಟಿ, ಲಯನ್ಸ್ ಕ್ಲಬ್ ಬಿದ್ಕಲ್ ಕಟ್ಟೆಯ ಅಧ್ಯಕ್ಷರಾದ ಲಯನ್ ಜಯಪ್ರಕಾಶ್ ಶೆಟ್ಟಿ, ಲಯನ್ಸ್ ಕ್ಲಬ್ ಕೋಟ-ಗಿಳಿಯಾರು ಇದರ ಅಧ್ಯಕ್ಷರಾದ ಲಯನ್ ಜಡ್ಡಾಡಿ ವಿಜಯ್ ಕುಮಾರ್ ಶೆಟ್ಟಿ, ಲಯನ್ಸ್ ಕ್ಲಬ್ ವೇಯ್ಟ್ ಝೋನ್ ನ ಅಧ್ಯಕ್ಷರಾದ ಲಯನ್ ವಿಜಯ ಭಂಡಾರಿ ಹಾಗೂ ಮಹಿಳಾ ಲಯನ್ಸ್ ಕ್ಲಬ್ ಕುಂದಾಪುರ ಅಮೃತದಾರ ಇದರ ಅಧ್ಯಕ್ಷರಾದ ಲಯನ್ ಡಾ. ವಾಣೀಶ್ರೀ ಐತಾಳ್ ಸೇರಿದಂತೆ ಒಟ್ಟು 12 ಲಯನ್ಸ್ ಕ್ಲಬ್ ಗಳ ಅಧ್ಯಕ್ಷರ ಸಮಕ್ಷಮ ಲಯನ್ Adv. ಬನ್ನಾಡಿ ಸೋಮನಾಥ ಹೆಗ್ಡೆ ಪ್ರಶಸ್ತಿಯನ್ನು ಸ್ವೀಕರಿಸಿದರು.

ವಿ.ಕೆ ಗ್ರೂಪ್ ಆಫ್ ಕಂಪೆನೀಸ್ & ದಾಕ್ ವುಡ್ ಫರ್ನಿಚರ್ & ಇಂಟಿರಿಯರ್ ಪ್ರೈವೇಟ್ ಲಿಮಿಟೆಡ್ ಇದರ ಚೇಯರ್ ಮ್ಯಾನ್ ಆದ ಕೆ.ಎಮ್ ಶೆಟ್ಟಿ ಯವರು ಜಿಲ್ಲಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಲಯನ್ಸ್ ಮಲ್ಟಿಪಲ್ ಡಿಸ್ಟ್ರಿಕ್ಟ್ 317 ಇದರ ಪಿ.ಡಿ.ಜಿ ಫೋರಮ್ ನ ಚೇಯರ್ ಮ್ಯಾನ್ & ಮಲ್ಟಿಪಲ್ GAT ಕೋ ಆರ್ಡಿನೇಟರ್ ಆದ ಲಯನ್ ಕೆ. ದೇವೇಗೌಡ ಇವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.

ಲಯನ್ಸ್ ಜಿಲ್ಲೆ 317-ಸಿ ಇದರ ಜಿಲ್ಲಾ ಗವರ್ನರ್ ಲಯನ್ ಸಪ್ನಾ ಸುರೇಶ್, ಪ್ರಥಮ ಉಪಜಿಲ್ಲಾ ಗವರ್ನರ್ ಲಯನ್ ರಾಜೀವ್ ಕೋಟ್ಯಾನ್ ಮತ್ತು ದ್ವಿತೀಯ ಉಪಜಿಲ್ಲಾ ಗವರ್ನರ್ ಲಯನ್ ಹರಿಪ್ರಸಾದ್ ರೈ ಶುಭಾಶಂಸನೆ ಗೈದರು.

ಕಾರ್ಯಕ್ರಮದ ಚೀಫ್ ಅಡ್ವೈಸರ್ ಗಳಾದ ಪಿ.ಡಿ.ಜಿ ಲಯನ್ ಸುರೇಶ್ ಪ್ರಭು, ಪಿ.ಡಿ.ಜಿ ಲಯನ್ ಎನ್.ಎಮ್ ಹೆಗ್ಡೆ, 2024-25 ರ ಲಯನ್ಸ್ ಜಿಲ್ಲಾ ಕಾರ್ಯದರ್ಶಿ ಲಯನ್ ಗಿರೀಶ್ ರಾವ್, 2024-25 ರ ಲಯನ್ಸ್ ಜಿಲ್ಲಾ ಕೋಶಾಧಿಕಾರಿ ಹೆಚ್ ಶ್ರೀನಿವಾಸ ಪೈ, ಲಯನ್ಸ್ ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಲಯನ್ ಶಾಲಿನಿ ಡಿ. ಬಂಗೇರ, ಲಯನ್ಸ್ ಜಿಲ್ಲಾ ಕ್ಯಾಬಿನೆಟ್ ಕೋಶಾಧಿಕಾರಿ ಲಯನ್ ಶಶಿಧರ್ ಶೆಟ್ಟಿ, ಜಿಲ್ಲಾ ಪ್ರಶಸ್ತಿ ಪ್ರಧಾನ ಸಮಾರಂಭದ ಕಾರ್ಯದರ್ಶಿ ಲಯನ್ ದಿನಕರ್ ಶೆಟ್ಟಿ ಎಮ್, 2024-25 ರ ರೀಜನ್-V ಇದರ ಕಾರ್ಯದರ್ಶಿ ಲಯನ್ ಕಬ್ಬೈಲ್ ಆನಂದ ಶೆಟ್ಟಿ, 2024-25 ರ ರೀಜನ್-V ಇದರ ಝೋನ್ ಚೇಯರ್ ಪರ್ಸನ್ ಗಳಾದ ಲಯನ್ ಬಾಲಕೃಷ್ಣ ಶೆಟ್ಟಿ ಹಂಗಳೂರು, ಲಯನ್ ಧರ್ಮರಾಜ್ ಮುದಲಿಯಾರ್ ತೆಕ್ಕಟ್ಟೆ ಮತ್ತು ಲಯನ್ ಬೆಳ್ವೆ ವಸಂತ್ ಕುಮಾರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಲಯನ್ ವೀಣಾ ರಾಜೀವ್ ಕೋಟ್ಯಾನ್ ಪ್ರಾರ್ಥಿಸಿದರು, ಲಯನ್ಸ್ ಜಿಲ್ಲಾ ಪ್ರಶಸ್ತಿ ಪ್ರಧಾನ ಸಮಾರಂಭದ ಚೇಯರ್ ಮ್ಯಾನ್ ಲಯನ್ ಅರುಣ್ ಕುಮಾರ್ ಹೆಗ್ಡೆ ಸ್ವಾಗತಿಸಿದರು, ಕೋಶಾಧಿಕಾರಿ ಲಯನ್ ವರುಣ್ ಶೆಟ್ಟಿ ವಂದಿಸಿದರು.

ಲಯನ್ ಅಕ್ಷಯ್ ಹೆಗ್ಡೆ ಮೊಳಹಳ್ಳಿ ಮತ್ತು ಲಯನ್ ಟಿ.ಜಿ ಆಚಾರ್ಯ ಹೆಬ್ರಿ ಇವರು ಕಾರ್ಯಕ್ರಮ ನಿರೂಪಿಸಿದರು.