ಡೈಲಿ ವಾರ್ತೆ:21/DEC/2024

ಇಗ್ನೈಟ್ – ಎಂ.ಕಾಂ.ಎಚ್.ಆರ್
ಕಾರ್ಯಕ್ರಮ ವಿದ್ಯಾರ್ಥಿಗಳು ನಾಯಕತ್ವದ ಗುಣ ಹೆಚ್ಚಿಸಿಕೊಳ್ಳಬೇಕು : ಡಾ. ಪ್ರೀತಿ ಕೀರ್ತಿ ಸೋಜಾ

ಮಂಗಳೂರು ವಿಶ್ವವಿದ್ಯಾನಿಲಯ ವಾಣಿಜ್ಯ ವಿಭಾಗ ಎಂ.ಕಾಂ.ಎಚ್.ಆರ್ ಆಯೋಜಿಸಿದ
ಇಗ್ನೈಟ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ವಾಣಿಜ್ಯ ವಿಭಾಗದ ಮುಖ್ಯಸ್ಥ ರಾದ ಡಾ. ಪ್ರೀತಿ ಕೀರ್ತಿ ಡಿಸೋಜಾ ಮಾತನಾಡಿದರು.


ಫೆಸ್ಟ್ ವಿದ್ಯಾರ್ಥಿಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ತಾತ್ತ್ವಿಕ ಚಿಂತನೆಗೆ ಉತ್ತೇಜನ ನೀಡುವುದು. ಹಾಗೂ ಆತ್ಮವಿಶ್ವಾಸ ಮತ್ತು ಪ್ರಸ್ತುತಿಕೆ ಕೌಶಲಗಳನ್ನು ಹೆಚ್ಚಿಸುವುದು.
ಈ ರೀತಿಯ ಕಾರ್ಯಕ್ರಮವು ಶೈಕ್ಷಣಿಕ ಮೇಲುಗೈ ಮತ್ತು ಪ್ರಾಯೋಗಿಕ ಕಲಿಕೆಯನ್ನು ಉತ್ತೇಜಿಸಿ, ಎಚ್ ಆರ್ ವೃತ್ತಿ ಕನಸುಗಳನ್ನು ಹೊಂದಿದ ವಿದ್ಯಾರ್ಥಿಗಳಿಗೆ ಬಹಳ ಪ್ರಭಾವಶಾಲಿ ಆಗುತ್ತದೆ ಎಂದು ನುಡಿದರು.

ಕಾರ್ಯಕ್ರಮವನ್ನು ವಾಣಿಜ್ಯ ವಿಭಾಗದ ಪ್ರೊಫೆಸರ್ ವೇದವ ಪಿ. ಉದ್ಘಾಟಿಸಿ ವಿದ್ಯಾರ್ಥಿಗಳು ಜೀವನದ ಯಶಸ್ಸು ಸಾಧಿಸುವತ್ತ ಗಮನ ಹರಿಸಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ವಾಣಿಜ್ಯ ಸಂಘದ ಸ್ಟಾಫ್ ಕೋ-ಆರ್ಡಿನೇಟರ್ ಗುರುರಾಜ್ ಪಿ. ಹಾಗೂ ವೈಶಾಲಿ ಕೆ ಮತ್ತು ಉಪನ್ಯಾಸಕರಾದ ಡಾ. ದಿನಕರ ಕೆಂಜೂರು, ರಶ್ಮಿತ ಆರ್. ಕೋಟ್ಯಾನ್, ಸಿ. ಲಹರಿ ಮತ್ತು ರಮ್ಯ ರಾಮಚಂದ್ರ ನಾಯ್ಕ್ ಉಪಸ್ಥಿತರಿದ್ದರು. ಗುಣವತಿ ಸ್ವಾಗತಿಸಿದರೆ, ದಿವ್ಯ ಡಿ. ಕ್ರಾಷ್ಟ ವಂದಿಸಿದರು. ಕಾವ್ಯ ಮತ್ತು ತಂಡ ದವರು ಪ್ರಾರ್ಥಿಸಿದರೆ ಶ್ರೇಯಾ ಎ.ಸಿ.ಕಾರ್ಯಕ್ರಮ ನಿರೂಪಣೆಗೈದರು.

ಸಭಾ ಕಾರ್ಯಕ್ರಮದ ನಂತರ ಫೆಸ್ಟ್ ನ ವಿವಿಧ ಈವೆಂಟ್ಗಳಾದ ಕ್ವಿಜ್, ಮಲ್ಟಿ ಟಾಸ್ಕಿನ್ಗ್, ಗ್ರೂಪ್ ಡಿಸ್ಕಶನ್, ಪಿಕ್ ಅಂಡ್ ಸ್ಪೀಚ್ ಮತ್ತು ಕೇಸ್ ಸ್ಟಡಿ ಅನಾಲಿಸಿಸ್ ಆಯೋಜಿಸಲಾಗಿತ್ತು.