ಡೈಲಿ ವಾರ್ತೆ:22/DEC/2024
ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಐಎಂಎ ಪುತ್ತೂರು ವತಿಯಿಂದ ಇಬ್ಬರು ವೈದ್ಯರಿಗೆ ʼಜನಪ್ರಿಯ ವೈದ್ಯಕೀಯ ಸೇವಾ ರತ್ನʼ ಪ್ರಶಸ್ತಿ ಪ್ರದಾನ
ಪುತ್ತೂರು : ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಪುತ್ತೂರು ಘಟಕದ ವತಿಯಿಂದ ವೈದ್ಯರಿಗೆ ಉಪನ್ಯಾಸ ಕಾರ್ಯಕ್ರಮ ಮತ್ತು ʼಜನಪ್ರಿಯ ವೈದ್ಯಕೀಯ ಸೇವಾ ರತ್ನʼ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಪುತ್ತೂರಿನ ದರ್ಬೆ ಶಂಕರಿ ಗೋಪಾಲ್ ಕೃಷ್ಣ ಆರ್ಕೇಡ್ ನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ವೈದ್ಯಕೀಯ ಸಂಘ ಪುತ್ತೂರು ಘಟಕದ ಅಧ್ಯಕ್ಷ ಡಾ. ನರಸಿಂಹ ಶರ್ಮಾ ಕಾನಾವು ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಡಾ. ಅಬ್ದುಲ್ ಬಶೀರ್ ವಿ.ಕೆ , ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕ ಡಾ. ಕಿರಾಶ್ ಪರ್ತಿಪ್ಪಾಡಿ, ಐಎಂಎ ಪುತ್ತೂರು ಘಟಕದ ಕೋಶಾಧಿಕಾರಿ ಡಾ. ಅಶೋಕ್ ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ವೇಳೆ ಹಿರಿಯ ವೈದ್ಯರಾದ ಡಾ.ಜೆ.ಸಿ.ಅಡಿಗ ಮತ್ತು ಮಧುಮೇಹ ತಜ್ಞರಾದ ಡಾ.ನಝೀರ್ ಅಹ್ಮದ್ ಅವರಿಗೆ ʼಜನಪ್ರಿಯ ವೈದ್ಯಕೀಯ ಸೇವಾ ರತ್ನʼ ಪ್ರಶಸ್ತಿ ಪ್ರದಾನ ಮಾಡಲಾಯಿತು .
ಕಾರ್ಯಕ್ರಮದಲ್ಲಿ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮೂತ್ರಶಾಸ್ತ್ರ ವಿಭಾಗದ ವೈದ್ಯರಾದ ಡಾ. ಅವಿನಾಶ್ ಜೆ, ಸ್ತ್ರೀ ರೋಗ ತಜ್ಞರಾದ ಡಾ. ಫಾತಿಮಾ ಇಸ್ಮತ್, ಮಕ್ಕಳ ತಜ್ಞರಾದ ಡಾ. ಅನೂಪ್ ಇತಿಹಾಸ್ ವಿವಿಧ ವಿಚಾರಗಳಲ್ಲಿ ಉಪನ್ಯಾಸ ನೀಡಿದರು. ಜನಪ್ರಿಯ ಆಸ್ಪತ್ರೆಯ ವೈದ್ಯರಾದ ಡಾ.ಹಸನ್ ಮುಬಾರಕ್ ಮತ್ತು ನಿರ್ದೇಶಕ ಡಾ. ಶಫಾಕ್ ಮೊಹಮ್ಮದ್ ಉಪಸ್ಥಿತರಿದ್ದರು.